* ಕಾರಿಗೆ ಡಿಕ್ಕಿ ಹೊಡೆದ ಕೆ.ಎಸ್.ಆರ್.ಟಿ.ಸಿ. ಬಸ್
* ಕಾರಿನಲ್ಲಿದ್ದ ನಾಲ್ವರ ಪ್ರಯಾಣಿಕರ ಸಾವು
* ಮದುವೆಗೆ ಹೊರಟವರು ಮಸಣ ಸೇರಿದ್ರು
ದಾವಣಗೆರೆ, (ಡಿ.17): ಸರ್ಕಾರಿ ಬಸ್ (KSRTC Bus) ಮತ್ತು ಕಾರಿನ (Car) ನಡುವೆ ಮುಖಾಮುಖಿ ಡಿಕ್ಕಿ ನಾಲ್ವರು ಸಾವನ್ನಪ್ಪಿದ ಧಾರುಣ ಘಟನೆ ಸವಳಂಗ ಬಳಿ ನಡೆದಿದೆ.
ದಾವಣಗೆರೆ(Davanagere) ಜಿಲ್ಲೆ ನ್ಯಾಮತಿ ತಾಲ್ಲೂಕಿನ ಸವಳಂಗ ಸಮೀಪದ ಕಲ್ಲಾಪುರ ಬ್ರಿಡ್ಜ್ ಬಳಿ ಇಂದು(ಶುಕ್ರವಾರ) ಕೆ.ಎಸ್.ಆರ್.ಟಿ.ಸಿ ಮತ್ತು ಮಾರುತಿ ಶಿಫ್ಟ್ ನಡುವೆ ಸಂಭವಿಸಿದ ಭೀಕರ ಅಪಘಾತ (Accident) ಸಂಭವಿಸಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ.
Tumakuru: ಒಂದೇ ಕುಟುಂಬದ ಮೂವರು ಆತಹತ್ಯೆ: ಹಲವು ಅನುಮಾನಗಳಿಗೆ ಕಾರಣವಾದ ಸುಸೈಡ್ ಕೇಸ್
ಕಾರಿನಲ್ಲಿದ್ದ ಒಂದೇ ಕುಟುಂಬದ ಮೂವರು ಮಹಿಳೆಯರು ಹಾಗು ಕಾರು ಚಾಲಕಸಾವೀಗೀಡಾದವರಾಗಿದ್ದಾರೆ(Death). ಭದ್ರಾವತಿ ತಾಲೂಕಿನ ಯಡೆಹಳ್ಳಿ ಗ್ರಾಮದ ಶಾರದಮ್ಮ(65), ಸುಮಾ(44), ದಾಕ್ಷಾಯಣಮ್ಮ(45) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಆಶಾ ಎಂಬುವರು ಸಾವಿನಿಂದ ಪಾರಾದ್ರೆ, ಕಾರು ಚಾಲಕ ಸುನೀಲ್ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ.
ಮೃತರೆಲ್ಲರೂ ಸವಳಂಗ ಸನಿಹದ ಹಳೆ ಜೋಗದಲ್ಲಿ ಸಂಬಂಧಿಕರ ಮದುವೆ ಕಾರ್ಯಕ್ಕೆ ತೆರಳುತ್ತಿದ್ದರು. ಯಲ್ಲಾಪುರ-ಬೆಂಗಳೂರು ಕೆ.ಎಸ್.ಆರ್.ಟಿ.ಸಿ ಬಸ್ ಶಿವಮೊಗ್ಗದೆಡೆಗೆ ಬರುತ್ತಿತ್ತು.ಇತ್ತ ಸಂಬಂಧಿಕರ ಮದುವೆಗೆಂದು ಯಡೆಹಳ್ಳಿಯಿಂದ ಹಳೆ ಜೋಗಕ್ಕೆ ಶಾರದಮ್ಮ ಕುಟುಂಬದವರು ಮಾರುತಿ ಶಿಫ್ಟ್ ಕಾರಿನಲ್ಲಿ ಹೊರಟಿದ್ದರು. ಮದ್ಯಾಹ 1 ಗಂಟೆ ಹೊತ್ತಿಗೆ ಬಸ್ ಮತ್ತು ಕಾರು ಕಲ್ಲಾಪುರದ ಸಮೀಪದ ತಿರುವಿನಲ್ಲಿ ಎದುರುಬದುರಾಗಿದೆ ಅಷ್ಟೆ.ಅತೀ ವೇಗದಲ್ಲಿದ್ದ ಬಸ್ ನೇರವಾಗಿ ಕಾರಿಗೆ ಅಪ್ಪಳಿಸಿದೆ.
ಈ ಸಂದರ್ಭದಲ್ಲಿ ಹಿಂಬದಿ ಬರುತ್ತಿದ್ದ ಲಾರಿ, ಬಸ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಬಸ್ ನಲ್ಲಿದ್ದ ಹಲವರಿಗೆ ಗಂಭೀರ ಗಾಯಗಳಾಗಿವೆ. ಘಟನೆಯಿಂದ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ವಾಹನ ಸಂಚಾರ ಅಸ್ತವ್ಯಸ್ಥವಾಗಿದೆ. ಅಸಲಿಗೆ ಬಸ್ ಚಾಲಕ ತಾಳ್ಮೆಯಿಂದಲೇ ಬ್ರಿಡ್ಜ್ ಬಳಿ ಬಸ್ ನ್ನು ನಿಯಂತ್ರಣಕ್ಕೆ ತಂದಿದ್ದರೆ ಮಾರುತಿ ಶಿಫ್ಟ್ ಚಾಲಕ ಬಸ್ ಕ್ರಾಸ್ ಮಾಡಿಕೊಂಡು ಸಾಗುತ್ತಿದ್ದ. ನಾಲ್ಕು ಜೀವ ಬದುಕುಳಿಯುತ್ತಿತ್ತು. ಆದರೆ ಜವರಾಯ ಆ ತಿರುವಿನಲ್ಲಿಯೇ ಹೊಂಚು ಹಾಕಿ ಕೂತಿದ್ದ. ಗಾಯಾಳುಗಳು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನ್ಯಾಮತಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ನಾಲೆಗೆ ಹಾರಿ ಮೂವರು ಆತ್ಮಹತ್ಯೆ
ತುಮಕೂರು: ನಾಲೆಗೆ ಹಾರಿ ಎಇಇ ಕುಟುಂಬದ ಮೂವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮಲಾಪುರ ಗೇಟ್ ಬಳಿ ನಾಲೆಯಲ್ಲಿ ಇಬ್ಬರ ಮೃತದೇಹಗಳು ಪತ್ತೆಯಾಗಿವೆ.
ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಸೋಮಲಾಪುರ ಗೇಟ್ ಬಳಿ ಇಂಜಿನಿಯರ್ ರಮೇಶ್ ಅವರ ಪತ್ನಿ ಮಮತಾ ಮತ್ತು ಪುತ್ರಿ ಶುಭಾ ಮೃತದೇಹ ಪತ್ತೆಯಾಗಿದ್ದು, ರಮೇಶ್ ಅವರಿಗಾಗಿ ಶೋಧ ಮುಂದುವರೆಸಲಾಗಿದೆ.