ಅಪಹರಣವಾಗಿದ್ದ 3 ವರ್ಷದ ಮಗುವನ್ನು ಬೆಂಗಳೂರು ಪೊಲೀಸರು ಕೇವಲ 48 ಗಂಟೆಗಳಲ್ಲಿ ಪತ್ತೆ ಮಾಡಿ ರಕ್ಷಿಸಿದ್ದಾರೆ. ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರ ಕಾರ್ಯಚರಣೆಗೆ ಸೆಲ್ಯೂಟ್.
ಬೆಂಗಳೂರು, [ಮಾ.02]: ಕಿಡ್ನಾಪ್ ಆಗಿದ್ದ 3 ವರ್ಷದ ಮಗುವನ್ನು ಕೇವಲ 48 ಗಂಟೆಗಳಲ್ಲಿ ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸರು ಪತ್ತೆ ಮಾಡಿದ್ದಾರೆ.
ಅರ್ಜುನ್ ಅಪಹರಣವಾಗಿದ್ದ ಮಗು. ನಾಗರಾಜ ಹಾಗೂ ಲಕ್ಷ್ಮೀ ದಂಪತಿಯ ಮಗು ಫೆಬ್ರವರಿ 29 ರಂದು ಮನೆಯ ಮುಂದೆ ಅಟವಾಡುತ್ತಿದ್ದ ಸಂದರ್ಭದಲ್ಲಿ ಅಪರಣವಾಗಿತ್ತು. ಬೆಂಗಳೂರಿನ ಸಿಂಗಾಪುರದ ಹೊಸಬಾಳು ನಗರದಲ್ಲಿ ನಡೆದ ಘಟನೆ ನಡೆದಿತ್ತು.
ವಿಶ್ವಾಸ ಕಳೆದುಕೊಂಡಿತಾ ಜೆಡಿಎಸ್, ಸದ್ದು ಮಾಡುತ್ತಿದೆ ದೀಪಿಕಾ ಡ್ರೆಸ್; ಮಾ.2ರ ಟಾಪ್ 10 ಸುದ್ದಿ!
ತಕ್ಷಣ ಮಗು ತಾಯಿ ಲಕ್ಷ್ಮಿ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಕೂಡಲೇ ಕಿಡ್ನಾಪರ್ಸ್ ಪತ್ತೆಗೆ ಬಲೆ ಬೀಸಿದ್ದ ಪೋಲಿಸರು ಕೇವಲ 48 ಗಂಟೆಯಲ್ಲಿ ಮಗುವನ್ನು ತಾಯಿಯ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೋಮವಾರ ಬೆಳಗ್ಗೆ ಮಲ್ಲೇಶ್ವರದಲ್ಲಿ ರಸ್ತೆಬದಿ ಅಳುತ್ತಿದ್ದ ಬಾಲಕನನ್ನು ನೋಡಿದ ವ್ಯಕ್ತಿಯೊಬ್ಬರು ತನ್ನ ಮನೆಗೆ ಕರೆದೊಯ್ದು ಆರೈಕೆ ಮಾಡಿದ್ದರು. ಜತೆಗೆ ಮಲ್ಲೇಶ್ವರ ಠಾಣೆಗೂ ಮಾಹಿತಿ ನೀಡಿದ್ದರು. ವಿದ್ಯಾರಣ್ಯಪುರ ಸಿಬ್ಬಂದಿ ತಕ್ಷಣ ತೆರಳಿ ನೋಡಿದಾಗ ಕಾಣೆಯಾಗಿದ್ದ ಬಾಲಕ ಎಂಬುದು ಖಚಿತವಾಗಿ ಕರೆದೊಯ್ದು ಪಾಲಕರ ಮಡಿಲಿಗೆ ಸೇರಿಸಿದ್ದಾರೆ.