ಅವನು ರೀಲ್ನಲ್ಲಿ ಹೀರೋ. ರಿಯಲ್ನಲ್ಲಿ ವಿಲನ್. ಮದುವೆಯಾಗಿ ಎರಡೇ ತಿಂಗಳಿಗೆ ಮತ್ತೊಬ್ಬಳ ಜತೆ ನಂಟು. ಹೊಟ್ಟೆಯಲ್ಲಿದ್ದ ಮಗುವನ್ನ ತೆಗೆಸಿಬಿಡು ಅಂದಿದ್ದ. ಗರ್ಭಿಣಿಯಾದ ನಂತರ ಅವರು ಮದುವೆಯಾದರು. ಹೆಂಡತಿಗೆ ಹೊಡೆದು ಎಸ್ಕೇಪ್ ಆದ ಸೀರಿಯಲ್ ನಟ.
ಅವನು ಸೀರಿಯಲ್ ನಟ. 500 ಎಪಿಸೋಡ್ ಪೂರೈಸಿದ ಯಶಸ್ವಿ ಧಾರವಾಹಿಯ ಹೀರೋ.. ಇಂತವನು ಇವತ್ತು ಅಪ್ಸ್ಕಾಂಡಿಂಗ್.. ಕಾರಣ ಏನ್ ಗೊತ್ತಾ..? ಹೆಂಡತಿಗೆ ಹೊಡೆದಿರೊದು. ಹೆಂಡತಿಗೆ ಹೊಡೆದು ಜೈಲಿಗೆ ಸೇರೋ ಬಣ್ಣ ಹಚ್ಚೋ ಮಂದಿ ನಮ್ಮಲ್ಲಿ ಜಾಸ್ತಿ ಆಗ್ತಿದ್ದಾರೆ.. ಈಗ ಸಿರಿಯಲ್ ನಟನ ಸರದಿ.. ಮದುವೆಯಾಗಿ ಇನ್ನೂ ಒಂದು ತಿಂಗಳಾಗಿಲ್ಲ. ಅಷ್ಟರಲ್ಲೇ ತಾಳಿ ಕಟ್ಟಿದ ಹೆಂಡತಿಗೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಈಗ ಎಸ್ಕೇಪ್ ಆಗಿದ್ದಾನೆ ರೀಲ್ ಹೀರೋ.. ಅಷ್ಟಕ್ಕೂ ಯಾರು ಆ ಕಿರಾತಕ ಹೀರೋ..? ಆತ ಹೆಂಡತಿ ಮೇಲೆ ಕೈ ಮಾಡಲು ಕಾರಣವೇನು..? ಒಬ್ಬ ರೀಲ್ ಹೀರೋನ ಲವ್ ಸೆಕ್ಸ್ ದೋಖಾದ ಕಥೆ ಇಲ್ಲಿದೆ.
ದೊಡ್ಮನೆಯ ನಿರ್ಮಾಣದ ಬ್ಯಾನರ್ ಪೂರ್ಣಿಮಾ ಎಂಟರ್ಪ್ರೈಸಸ್‌ನಿಂದ 2021ರಲ್ಲಿ ಶುರುವಾದ ನೇತ್ರಾವತಿ ಸೀರಿಯಲ್ ಧಾರವಾಹಿ ಯಶಸ್ವಿ ಪ್ರದರ್ಶನಗಳನ್ನ ಕಂಡು 500ಕ್ಕೂ ಹೆಚ್ಚು ಸಂಚಿಕೆಗಳನ್ನ ಪೂರೈಸಿದೆ. ಇದೇ ಧಾರವಾಹಿಯಲ್ಲಿ ಹೀರೋ ಆಗಿ ಅವಕಾಶ ಪಡೆದು, ಅದ್ಭುತವಾಗಿ ನಟನೆ ಮಾಡಿ ಎಲ್ಲರ ಮನ ಗೆದ್ದಿದ್ದ ಒಬ್ಬ ಇವತ್ತು ಇದೇ ಕ್ರೈಂ ಕಥೆಯ ವಿಲನ್ ಆಗಿಬಿಟ್ಟಿದ್ದಾನೆ. ರೀಲ್ನಲ್ಲಿ ಹೀರೋ ಆಗಿದ್ದವನು ಇವತ್ತು ರಿಯಲ್ನಲ್ಲಿ ವಿಲನ್ ಆಗಿ ಬಿಟ್ಟಿದ್ದಾನೆ.
ಇದು ಸನ್ನಿ ಲವ್ ಸ್ಟೋರಿ. ಆದ್ರೆ ಈ ರೀತಿಯ ಲವ್ ಸ್ಟೋರಿಯನ್ನ ನೀವು ಎಲ್ಲೂ ಕೇಳಿರೋದೂ ಇಲ್ಲ. ನೋಡಿರೋದೂ ಇಲ್ಲ. ಅಂತಹ ಕಿತ್ತೋದ್ ಲವ್ ಸ್ಟೋರಿ ಇದು. ಅಂದಹಾಗೆ ಈ ಸನ್ನಿ ಇದೇ ನೇತ್ರಾವತಿ ಸೀರಿಯಲ್ನಲ್ಲಿ ಸಮುದ್ರಾ ಅನ್ನೋ ಹೆಸರಿಟ್ಟುಕೊಂಡು ಅಬ್ಬರಿಸಿದ್ದ ಈತನ ನಿಜ ಹೆಸರು ಸನ್ನಿ ಮಹಿಪಾಲ್ ಅಂತ. ಈತ ಇದೇ ಧಾರವಾಹಿ ಮೂಲಕ ಮನೆ ಮಾತಾದವನು. 500ಕ್ಕೂ ಅಧಿಕ ಎಪಿಸೋಡ್ನಲ್ಲಿ ನಟಿಸಿ ಸೈ ಅನ್ನಿಸಿಕೊಂಡವನು.
ಈ ಸಮುದ್ರಾ ಅಲಿಯಾಸ್ ಸನ್ನಿ ಮಹಿಪಾಲ್ ಇವತ್ತು ಒಂದು ಹೆಣ್ಣು ಮಗಳೊಬ್ಬಳ ಮೇಲೆ ಕೈ ಮಾಡಿ ಇವತ್ತು ಎಸ್ಕೇಪ್ ಆಗಿದ್ದಾನೆ.. ಅಂದಹಾಗೆ ಈತ ಹೊಡೆದಿರೋದು ಯಾರನ್ನ ಗೊತ್ತಾ..? ತಾಳಿ ಕಟ್ಟಿದ ಹೆಂಡತಿಯನ್ನ. ಹೆಂಡತಿಗೆ ಹೊಡೆಯೋದೇ ಫ್ಯಾಷನ್ ಮಾಡಿಕೊಂಡುಬಿಟ್ಟಿದ್ದಾರೆ ಕೆಲ ಕಿರಾತಕರು. ಇನ್ನೂ ಇತ್ತೀಚೆಗೆ ಹೆಂಡತಿಗೆ ಹೊಡೆದು ಸುದ್ದಿ ಆಗಿರೋ ಮಂದಿ ಹೆಚ್ಚಾಗಿ ಬಿಟ್ಟಿದ್ದಾರೆ. ಅದರಲ್ಲೂ ಈ ಬಣ್ಣ ಹಚ್ಚೋ ಮಂದಿ ಹೆಚ್ಚು ಸುದ್ದಿ ಆಗ್ತಿರೋದೇ ಹೀಗೆ ಹೊಡಿ ಬಡಿ ಮಾಡಿ. ಇನ್ನೂ ಈ ಸನ್ನಿ ಮಹಿಪಾಲ್ ಕೂಡ ಇವತ್ತು ಅದೇ ವಿಷಯಕ್ಕೆ ಸುದ್ದಿಯಾಗಿದ್ದಾನೆ. ತನ್ನ ನಟನೆಯಿಂದ ಈತ ಎಷ್ಟು ಜನಪ್ರೀಯ ಆದನೋ ಇಲ್ವೋ ಗೊತ್ತಿಲ್ಲ ಆದ್ರೆ ಇವತ್ತು ತನ್ನ ಹೆಂಡತಿಗೆ ಹೊಡೆದು ಸಖತ್ ಫೆಮಸ್ ಆಗಿಬಿಟ್ಟಿದ್ದಾನೆ..
ಈಕೆ ಹೆಸರು ಸ್ವಪ್ನಾ. ಈಕೆ ಖಾಸಗಿ ಕಂಪನಿಯಲ್ಲಿ ಉದ್ಯೋಗಿ. ಇನ್ನೂ ಈಕೆ ಮತ್ತು ಸನ್ನಿ ಇಬ್ಬರೂ ಲವ್ ಮಾಡ್ತಿದ್ರು. ನಂತರ ಕಳೆದ ತಿಂಗಳಷ್ಟೇ ಇಬ್ಬರೂ ದೇವಸ್ಥಾನದಲ್ಲಿ ಮದುವೆಯಾಗಿದ್ರು. ನಟನ ಮದುವೆ ಅಂದ್ರೆ ಹೇಗಿರುತ್ತೆ. ಆದ್ರೆ ಇಲ್ಲಿ ಯಾವುದೇ ಆಡಂಭರವಿಲ್ಲದೆ ಸಿಂಪಲ್ಲಾಗಿ ನಡೆದಿತ್ತು. ಇನ್ನೂ ಈ ಮದುವೆ ವಿಡಿಯೋ ನೋಡ್ತಿದ್ರೆ ಇಲ್ಲಿ ಸಂಥಿಂಗ್ ಆಗಿದೆ ಅನ್ನಿಸೋದಂತೂ ಸುಳ್ಳಲ್ಲ.
ಇವರಿಬ್ಬರದ್ದು ಲವ್ ಮ್ಯಾರೇಜ್. ಆದ್ರೆ ಈ ಸನ್ನಿಗೆ ಲವ್ ಮಾಡುವಾಗ ಇದ್ದ ಉತ್ಸಾಹ ಮದುವೆಯಾಗುವಾಗ ಇರಲಿಲ್ಲ. ಅದಕ್ಕೆ ಸಾಕ್ಷಿ ಇವರಿಬ್ಬರ ಮದುವೆ ವಿಡಿಯೋ. ಆದ್ರೆ ಮದುವೆಯಾಗಿ ಸರಿಯಾಗಿ ಒಂದುವರೆ ತಿಂಗಳಾಗಿಲ್ಲ. ಅಷ್ಟರಲ್ಲೇ ಆ ಪಾಪಿ ಈಕೆಯ ಮೆಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಅಷ್ಟೇ ಅಲ್ಲ ಹೆಂಡತಿಗೆ ಹೊಡೆದು ಎಸ್ಕೇಪ್ ಆಗಿದ್ದಾನೆ. ಗಂಡ ತಲೆಮರೆಸಿಕೊಂಡಿದ್ರೆ . ಹೆಂಡತಿ ಇವತ್ತು ಆಸ್ಪತ್ರೆ ಬೆಡ್ ಮೇಲೆ ಬಿದ್ದಿದ್ದಾಳೆ. ಅಷ್ಟಕ್ಕೂ ತಾಳಿ ಕಟ್ಟಿ ಇನ್ನೂ ಒಂದುವರೆ ತಿಂಗಳಾಗಿಲ್ಲ. ಆಗಲೇ ಹೆಂಡತಿಯನ್ನ ಹೀಗೆ ಸಾಯುವ ಹಾಗೆ ಆತ ಹಲ್ಲೆ ಮಾಡಿದ್ದೇಕೆ ಗೊತ್ತಾ?
6 ತಿಂಗಳ ಹಿಂದೆ ಫೇಸ್ಬುಕ್ ಮೂಲಕ ಪರಿಚಯವಾದ ಸನ್ನಿ ಮಹಿಪಾಲ್ ಮತ್ತು ಸ್ವಪ್ನ ಲವ್ನಲ್ಲಿ ಬಿದ್ದಿದ್ರು. ಆದ್ರೆ ಲವ್ನಲ್ಲಿದ್ದಾಗಲೇ ಸ್ವಪ್ನ ಗರ್ಭಿಣಿಯಾದಳು. ಯಾವಾಗ ತನ್ನ ಹೊಟ್ಟೆಯಲ್ಲಿ ಮಗು ಇದೆ ಅನ್ನೋದು ಗೊತ್ತಾಯ್ತೋ ಸ್ವಪ್ನ ಮದುವೆಯಾಗು ಅಂತ ಮಹಿಪಾಲ್ ಗೆ ಕೇಳಿಕೊಳ್ತಾಳೆ. ಅದ್ರೆ ಆ ಕಿರಾತಕನಿಗೆ ಮಾತ್ರ ಆಗ ಅವಳು ಬೇಕಿರಲಿಲ್ಲ.. ಮಗುವನ್ನ ತೆಗೆಸಿಬಿಡು ಅಂತ ಹೇಳಿಬಿಟ್ಟನಂತೆ. ಆಗ ಸ್ವಪ್ನ ಬೇರೆ ದಾರಿ ಇಲ್ಲದೇ ಪೊಲೀಸ್ ಠಾಣೆ ಮೆಟ್ಟಿಲ್ಲೇರಿದ್ದಳು. ಆಗ ಕಾನೂನಿಗೆ ಅಂಜಿ ಆತ ಆ ದಿನವೇ ತಾಳಿ ಕಟ್ಟಿದ್ದ. ಆದ್ರೆ ಹೆತ್ತವರನ್ನ ಒಪ್ಪಿಸಿ ಮನೆಗೆ ಕರೆದುಕೊಂಡು ಹೋಗ್ತೀನಿ ಅಂದವನು ಸೈಲೆಂಟಾಗಿ ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಬಿಟ್ಟನ್ನಂತೆ. ಇದಕ್ಕೆ ಈ ಹೆಣ್ಣುಮಗಳು ನ್ಯಾಯ ಕೇಳಲು ಹೋಗಿದ್ದಾಳೆ. ಆದ್ರೆ ಆತ ಆಕೆ ಗರ್ಭಿಣಿ ಅನ್ನೋದನ್ನೂ ನೋಡದೇ ಅವಳ ಮೇಲೆ ಹಲ್ಲೆ ನಡೆಸಿಬಿಟ್ಟಿದ್ದಾನೆ.
6 ತಿಂಗಳ ಹಿಂದೆ ಇವರಿಬ್ಬರ ಪರಿಚಯವಾಗಿ ಫ್ರೆಂಡ್ಶಿಪ್ ಇದ್ದಿದ್ದು ಕೆಲವೇ ದಿನಗಳಷ್ಟೇ, ಊರೂರು ಸುತ್ತುತ್ತಿದ್ದ ಇವರಿಬ್ಬರು ಲವ್ವರ್ಸ್ ಆಗಿಬಿಡ್ತಾರೆ.. ನಂತರ ಇದೇ ಸಲುಗೆಯಿಂದ ದೇಹಸಂಬಂದ ಕೂಡ ಬೆಳಸಿಕೊಂಡುಬಿಡ್ತಾರೆ. ಪರಿಸ್ತಿತಿ ಹೀಗಿರುವಾಗ್ಲೇ ಕಳೆದ ತಿಂಗಳು ಸ್ವಪ್ನಾ ಗರ್ಭಿಣಿಯಾಗ್ತಾಳೆ. ಮಗುವನ್ನ ತೆಗೆಸಿಬಿಡು ಅಂದಿದ್ದಕ್ಕೆ ಸ್ವಪ್ನ ಬಿಲ್ಕುಲ್ ಒಪ್ಪೋದಿಲ್ಲ. ಮಗು ತೆಗಿಸಲೇಬೇಕು ಅಂತ ಸನ್ನಿ ಪಟ್ಟು ಹಿಡಿದುಬಿಡ್ತಾನೆ. ಯಾವಾಗ ಸನ್ನಿ ಮಗು ಬೇಡವೇ ಬೇಡ ಅಂತಾನೋ ಸ್ವಪ್ನಾಗೆ ಅನುಮಾನ ಶುರುವಾಗುತ್ತೆ. ಈತ ನನಗೆ ಮೋಸ ಮಾಡ್ತಾನೆ ಅಂತನ್ನಿಸಿ ಸೀದಾ ಪೊಲೀಸ್ ಠಾಣೆಗೆ ಹೋಗಿ ಕೂತುಬಿಡ್ತಾಳೆ. ಈ ವೇಳೆ ಸನ್ನಿ ಕೇಸ್ ಆದ್ರೆ ಪ್ರಾಬ್ಲಮ್ ಆಗುತ್ತೆ ಅಂತ ಸ್ವಪ್ನಾಳನ್ನ ಮದುವೆಯಾಗಲು ಒಪ್ಪಿಕೊಳ್ತಾನೆ. ಆರ್.ಟಿ ನಗರದ ದೇವಸ್ಥಾನಕ್ಕೆ ಹೋಗಿ ರಾತ್ರಿ 8 ಗಂಟೆಗೆ ತಾಳಿ ಕಟ್ತಾನೆ.
ಒಂದು ಮನೆಗೆ ಹೋಗಿ ಬರ್ತೀನಿ ಅಂತ ಹೋದ ಸನ್ನಿ ಎಂಟೇ ದಿನಕ್ಕೆ ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಬಿಟ್ಟಿದ್ದಾನೆ. ಯಾವಾಗ ಈ ವಿಷ್ಯ ಹೆಂಡತಿಗೆ ಗೊತ್ತಾಯ್ತೋ ಅವನನ್ನೇ ಕೇಳೋಣ ಅಂತ ಆತನೇ ಕೊಟ್ಟಿದ್ದ ಇಂದಿರಾನಗರ ವಿಳಾಸಕ್ಕೆ ಹೋಗ್ತಾಳೆ. ಆದ್ರೆ ಆ ಪಾಪಿ ಆ ವಿಳಾಸದಲ್ಲಿ ಇರೋದೇ ಇಲ್ಲ.
ಗಂಡನನ್ನ ಹುಡುಕಿ ಹುಡುಕಿ ಸುಸ್ತಾಗಿದ್ದ ಸ್ವಪ್ನಳಿಗೆ ಕೊನೆಗೂ ಸನ್ನಿಯ ವಿಳಾಸ ಸಿಕ್ಕಿತ್ತು. ತಡಮಾಡದೇ ಮೊನ್ನೆ ಅಂದ್ರೆ ಜು.22ನೇ ತಾರೀಕು ಬೆಂಗಳೂರಿನ ವಿಜ್ಞಾನಗರದ ಇದೇ ಮನೆಗೆ ಬಂದಿದ್ದಾಳೆ. ಈ ವೇಳೆ ಇಬ್ಬರ ನಡುವೆ ಜೋರು ಜಗಳ ವಾಗಿದೆ. ಈ ವೇಳೆ ಸನ್ನಿ ಸ್ವಪ್ನಾಳನ್ನ ತಳ್ಳಿದ್ದನಂತೆ ಆಗ ಸನ್ನಿ ಹೊಟ್ಟೆಗೆ ಗಂಭೀರ ಗಾಯವಾಗಿ ಅಬಾರ್ಷನ್ ಆಯ್ತಂತೆ.
ಈ ವೇಳ ಪೊಲೀಸರಿಗೆ ಕಾಲ್ ಮಾಡಿ ನಂತರ ಪೊಲೀಸರು ಬಂದ್ರೂ ಆಕೆಯನ್ನ ಆಸ್ಪತ್ರೆಗೆ ಕರೆದೊಯ್ಯುವ ಕೆಲಸ ಮಾಡಲಿಲ್ಲವಂತೆ. ಸದ್ಯ ಸ್ವಪ್ನ ಹೊಟ್ಟೆಯಲ್ಲಿದ್ದ ಮಗುವನ್ನೂ ಕಳೆದುಕೊಂಡಿದ್ದಾಳೆ.. ಗಂಡ ನೀನು ಬೇಡ ಅಂತ ದೂರವಾಗಿದ್ದಾನೆ. ಈಗ ನನಗೆ ನ್ಯಾಯ ಬೇಕು ಅಷ್ಟೇ ಅಂತ ಈಕೆ ಗೋಳಾಡುತ್ತಿದ್ದಾಳೆ. ಆತ ಅಪ್ಸ್ಕಾಂಡ್ ಆಗಿದ್ದಾನೆ. ಪೊಲೀಸರು ಅವನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.. ಆತ ಸಿಕ್ಕಿದ ತಕ್ಷಣ ನಿಜ ಕಥೆ ಹೊರಬರಲಿದೆ.