ನವರಾತ್ರಿ ಉಪವಾಸ ಮಾಡ್ತಿದ್ದ ಅಣ್ಣ, ಅಕ್ಕನಿಂದ 15 ವರ್ಷದ ಸಹೋದರಿಯ ಬೆತ್ತಲೆಗೊಳಿಸಿ ಬರ್ಬರ ಹತ್ಯೆ!

By BK Ashwin  |  First Published Oct 21, 2023, 12:04 PM IST

ಹದಿಹರೆಯದ ಬಾಲಕಿ ಬದುಕಿದ್ದರೆ, ಕುಟುಂಬದ ಸದಸ್ಯರ ಅಕಾಲಿಕ ಮರಣ ಉಂಟಾಗುತ್ತದೆ ಅನ್ನೋ ಭಯದಿಂದ 15 ವರ್ಷದ ಬಾಲಕಿಯನ್ನು ಆಕೆಯ ಸಹೋದರ ಮತ್ತು ಅಕ್ಕ ಬರ್ಬರವಾಗಿ ಕೊಂದಿದ್ದಾರೆ ಎಂದು ವರದಿಯಾಗಿದೆ.


ರಾಜ್‌ಕೋಟ್‌ (ಅಕ್ಟೋಬರ್ 21, 2023): ದೇಶದಲ್ಲಿ ಮೂಢನಂಬಿಕೆ ಇನ್ನೂ ಜೀವಂತವಾಗಿದೆ ಅನ್ನೋದಕ್ಕೆ ಈ ಸ್ಟೋರಿ ಒಂದು ಘೋರ ಉದಾಹರಣೆಯಾಗಿದೆ. ಮೂಢನಂಬಿಕೆಗೆ 15 ವರ್ಷದ ಬಾಲಕಿಯನ್ನು ಸಹೋದರ ಹಾಗೂ ಹಿರಿಯ ಸಹೋದರಿಯೇ ಹತ್ಯೆ ಮಾಡಿದ್ದಾರೆ. ಮಹಾತ್ಮ ಗಾಂಧೀಜಿ ತವರು ಗುಜರಾತ್‌ನಲ್ಲಿ ಈ ಘಟನೆ ನಡೆದಿದೆ.

ಹದಿಹರೆಯದ ಬಾಲಕಿ ಬದುಕಿದ್ದರೆ, ಕುಟುಂಬದ ಸದಸ್ಯರ ಅಕಾಲಿಕ ಮರಣ ಉಂಟಾಗುತ್ತದೆ ಅನ್ನೋ ಭಯದಿಂದ 15 ವರ್ಷದ ಬಾಲಕಿಯನ್ನು ಆಕೆಯ ಸಹೋದರ ಮತ್ತು ಅಕ್ಕ ಬರ್ಬರವಾಗಿ ಕೊಂದಿದ್ದಾರೆ ಎಂದು ವರದಿಯಾಗಿದೆ. ಅಕ್ಟೋಬರ್ 16 ರ ರಾತ್ರಿ ಜಾಮ್‌ನಗರ ಜಿಲ್ಲೆಯ ಧ್ರೋಲ್ ತಾಲೂಕಿನ ಹಜಾಮ್‌ಚೋರಾ ಗ್ರಾಮದಲ್ಲಿ ಘಟನೆ ನಡೆದಿದ್ದು, ಮಂಗಳವಾರ ಮೃತ ಶಾರದಾ ತದ್ವಿ ಅವರ ಸಹೋದರ ರಾಕೇಶ್ ಮತ್ತು ಅಕ್ಕ ಸವಿತಾ ವರ್ತನೆಯನ್ನು ಕಂಡು ಅವರು ವಾಸಿಸುತ್ತಿದ್ದ ಜಮೀನಿನ ಮಾಲೀಕ ಬಿಪಿನ್ ಬಾರಯ್ಯ ಅನುಮಾನಗೊಂಡಾಗ ಈ ಘಟನೆ ಬೆಳಕಿಗೆ ಬಂದಿದೆ. 

Tap to resize

Latest Videos

ಇದನ್ನು ಓದಿ: ಡಿಜಿಟಲ್ ಬ್ಯಾಂಕಿಂಗ್ ವಂಚನೆಗಳ ಬಗ್ಗೆ ಎಚ್ಚರಿಕೆ ಇರಲಿ: ನಿಮ್ಮ ಹಣ ರಕ್ಷಿಸಿಕೊಳ್ಳಲು ಹೀಗೆ ಮೋಸ ಹೋಗ್ಬೇಡಿ..!

ಸ್ಥಳಕ್ಕೆ ಬಂದ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಶಾರದಾ ತದ್ವಿ ಶವ ಪತ್ತೆಯಾಗಿದೆ. ರಾಕೇಶ್ ಮತ್ತು ಸವಿತಾ ಅವರನ್ನು ಸ್ಥಳದಿಂದ ಬಂಧಿಸಲಾಗಿದ್ದು, ಬುಧವಾರ ಬಾರಯ್ಯ ಅವರು ಈ ಸಂಬಂಧ ದೂರು ದಾಖಲಿಸಿದ್ದಾರೆ. ಕುಟುಂಬದವರು ಹೆಚ್ಚು ಧಾರ್ಮಿಕ ಹಿನ್ನೆಲೆಯುಳ್ಳವರು ಮತ್ತು ನವರಾತ್ರಿಯ ಮೊದಲ ದಿನದಿಂದ ಉಪವಾಸ ಮಾಡುತ್ತಿದ್ದೇವೆ ಎಂದು ಇಬ್ಬರೂ ಪ್ರಾಥಮಿಕ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ. ಹಾಗೂ, ಶಾರದಾ ಮತ್ತು ಸವಿತಾ ಕೋಣೆಯಲ್ಲಿ ಚಾಮುಂಡಿ ದೇವರು ಬರುತ್ತಿದ್ದರು ಎಂದು ಆರೋಪಿಗಳು ಹೇಳಿದ್ದಾಗಿ ಧ್ರೋಲ್ ಪೊಲೀಸ್ ಠಾಣೆಯ ತನಿಖಾಧಿಕಾರಿ ಪ್ರಕಾಶ್ ಪಣಾರ ಹೇಳಿದರು.

ಒಡಹುಟ್ಟಿದವರು ನವರಾತ್ರಿ ಉಪವಾಸ ಮಾಡುತ್ತಿದ್ದರು’
ನವರಾತ್ರಿ ಆಚರಣೆಯ ಸಮಯದಲ್ಲಿ, ಶಾರದಾ ಪಾಪ ಕಾರ್ಯಗಳು ಪರಮಾವಧಿಯನ್ನು ತಲುಪಿದೆ ಮತ್ತು ಅವಳು ಜೀವಂತವಾಗಿದ್ದರೆ, ಅವರ ಕುಟುಂಬದಲ್ಲಿ ಅಕಾಲಿಕ ಮರಣ ಸಂಭವಿಸುತ್ತದೆ ಎಂದು ಸವಿತಾಗೆ ಚಾಮುಂಡಿ ಆವಾಹನೆಯಾಗಿ ಹೇಳಿದ್ದಾರೆ ಎಮದು ತಿಳಿದುಬಂದಿದೆ. ಇದನ್ನು ಕೇಳಿದ ರಾಕೇಶ್ ಮತ್ತು ಸವಿತಾ, ಶಾರದಾ ಬಟ್ಟೆಗಳನ್ನು ಬಿಚ್ಚಿದರು ಮತ್ತು ರಾಕೇಶ್‌ ಮರದ ಕೋಲಿನಿಂದ ಥಳಿಸಲು ಪ್ರಾರಂಭಿಸಿದರು. ಬಳಿಕ ಸವಿತಾ ಪದೇ ಪದೇ ಚಾಕುವಿನಿಂದ ಇರಿದಿದ್ದಾರೆ’’ ಎಂದು ಧ್ರೋಲ್ ಪೊಲೀಸ್ ಠಾಣೆಯ ತನಿಖಾಧಿಕಾರಿ ಪ್ರಕಾಶ್ ಪಣಾರ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮದ್ವೆಯಾದ ಮರುದಿನವೇ ಲಕ್ಷ ಲಕ್ಷ ಹಣ, ಒಡವೆಯೊಂದಿಗೆ ಎಸ್ಕೇಪ್‌ ಆದ ವಧು!

ಅಲ್ಲದೆ, ಒಡಹುಟ್ಟಿದವರು ಅವಳನ್ನು ಕೋಣೆಯಿಂದ ಅಂಗಳಕ್ಕೆ ಎಳೆದೊಯ್ದರು ಮತ್ತು ಪದೇ ಪದೇ ಅವಳ ತಲೆಯನ್ನು ಕಬ್ಬಿಣದ ಮಂಚಕ್ಕೆ ಮತ್ತು ನಂತರ ಗೋಡೆಗೆ ಬಡಿದರು ಎಂದೂ ತಿಳಿದುಬಂದಿದೆ. “ಮೂವರೂ ಒಡಹುಟ್ಟಿದವರೂ ಹೆಚ್ಚು ಧಾರ್ಮಿಕರಾಗಿದ್ದರು. ನವರಾತ್ರಿಯ ಉಪವಾಸದ ಅಂಗವಾಗಿ ಅವರು ಯಾವುದೇ ಆಹಾರವನ್ನು ಸೇವಿಸುತ್ತಿರಲಿಲ್ಲ. ಕೋಣೆಯಲ್ಲಿ, ನಾವು ಹಲವಾರು ದೇವತೆಗಳ ಛಾಯಾಚಿತ್ರಗಳನ್ನು ಕಂಡುಕೊಂಡಿದ್ದೇವೆ’’ ಎಂದೂ ಪ್ರಕಾಶ್ ಪಣಾರ ಹೇಳಿದ್ದಾರೆ. 

ರಾಕೇಶ್ ಮತ್ತು ಶಾರದಾ ಕಳೆದ ಒಂದೂವರೆ ವರ್ಷಗಳಿಂದ ಗ್ರಾಮದಲ್ಲಿ ವಾಸವಾಗಿದ್ದು, ಬಾರಯ್ಯ ಅವರ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ವಾರದ ಹಿಂದೆ ಸವಿತಾ ಗ್ರಾಮಕ್ಕೆ ಬಂದಿದ್ದಳು. ನವರಾತ್ರಿಯ ಮೊದಲು, ಅವರು ಚೋಟಿಲಾದ ಚಾಮುಂಡಾ ಮಾತಾ ದೇವಸ್ಥಾನದಲ್ಲಿ ಪ್ರಾರ್ಥನೆಗೆ ಹೋಗಿದ್ದರು ಎಂದೂ ತಿಳಿದುಬಂದಿದೆ.

ಇದನ್ನೂ ಓದಿ:  ಲೈಂಗಿಕ ಕಿರುಕುಳಕ್ಕೆ ವಿರೋಧ: ಚಲಿಸುತ್ತಿರುವ ರೈಲಿನ ಬಳಿ ಬಾಲಕಿ ತಳ್ಳಿದ ಕಾಮುಕ; ಕೈ, ಕಾಲು ಕಟ್‌!

“ಅವರು ಅಕ್ಟೋಬರ್ 16 ರ ರಾತ್ರಿ ಆಚರಣೆಯನ್ನು ಪ್ರಾರಂಭಿಸಿದಾಗ, ಅವರೊಂದಿಗೆ ಇನ್ನೂ 8-10 ಜನರು ಇದ್ದರು. ಮಧ್ಯರಾತ್ರಿಯ ನಂತರ, ಸವಿತಾ ಮತ್ತು ಶಾರದಾ ಮೇಲೆ ಚಾಮುಂಡಿ ದೇವಿ ಬರಲು ಪ್ರಾರಂಭಿಸಿದ್ದಾರೆ’’ ಎಂದು ಹೇಳಿರುವ ಬಗ್ಗೆಯೂ ಪೊಲೀಸರು ತಿಳಿಸಿದರು. ಕುಟುಂಬವು ದಾಹೋದ್‌ನ ಮಾಂಡವ್ ಗ್ರಾಮದ ಸ್ಥಳೀಯರಾಗಿದ್ದು, ಅವರ ತಂದೆ ಕೂಡ ತುಂಬಾ ಧಾರ್ಮಿಕ ಮನೋಭಾವದವರು ಮತ್ತು ಹಲವಾರು ಆಚರಣೆಗಳನ್ನು ಮಾಡುತ್ತಾರೆ ಎಂದು ಪೊಲೀಸರು ತಿಳಿದುಕೊಂಡಿದ್ದಾರೆ.

ಇದನ್ನೂ ಓದಿ: ಲೈಂಗಿಕ ಕಿರುಕುಳ ವಿರೋಧಿಸಿದ 7 ವರ್ಷದ ಬಾಲಕಿಯ ಉಸಿರುಗಟ್ಟಿಸಿ ಕೊಲೆ ಮಾಡಿದ ಪಾಪಿ ಸಂಬಂಧಿಕ

click me!