
ಹುಬ್ಬಳ್ಳಿ (ಜ.27): ಪತ್ನಿಯ ಕಿರುಕುಳದಿಂದ ಬೆಂಗಳೂರಿನಲ್ಲಿ ಉತ್ತರ ಭಾರತ ಮೂಲದ ಅತುಲ್ ಕುಲಕರ್ಣಿ ಎನ್ನುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದ ಸುದ್ದಿ ದೇಶಾದ್ಯಂತ ಭಾರೀ ಚರ್ಚೆಯಾಗಿತ್ತು. ಹಾಗಿದ್ದರೂ ಇಂಥ ಪ್ರಕರಣಗು ವರದಿಯಾಗುವುದು ತಪ್ಪಿಲ್ಲ. ಹೆಂಡತಿಯ ಕಿರುಕುಳ ತಾಳಲಾರದೆ ಪತಿ ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯ ಚಾಮುಂಡೇಶ್ವರಿ ನಗರದಲ್ಲಿ ನಡೆದಿದೆ. ಡೆತ್‌ನೋಟ್ ಬರೆದಿಟ್ಟು ಪೀಟರ್ ಎನ್ನುವ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್‌ನೋಟ್‌ನಲ್ಲಿ ಅವರ ತಂದೆಯನ್ನು ನೆನಪಿಸಿಕೊಂಡಿರುವ ಪೀಟರ್, ಡ್ಯಾಡಿ ಐ ಆ್ಯಮ್ ಸಾರಿ.. ಎಂದು ಬರೆದಿದ್ದಾರೆ. ಹೆಂಡತಿ ಪಿಂಕಿ ಇಸ್ ಕಿಲ್ಲಿಂಗ್ ಮೀ, ಸೀ ವಾಂಟ್ ಮೈ ಡೆಥ್ (ನನ್ನ ಹೆಂಡತಿ ಪಿಂಕಿ ನನ್ನನ್ನು ಕೊಲ್ಲುತ್ತಿದ್ದಾಳೆ, ಆಕೆ ನನ್ನ ಸಾವನ್ನು ನೋಡಬೇಕಂತೆ) ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಪೀಟರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡತಿದ್ದ ಪೀಟರ್ ಹಾಗೂ ಆತನ ಪತ್ನಿ ಪಿಂಕಿ ನಡುವೆ ಕಳೆದ ಕೆಲವು ದಿನಗಳಿಂದ ಜಗಳ ನಡೆಯುತ್ತಿತ್ತು. ಹೆಂಡತಿ ಟಾರ್ಚರ್ ನಿಂದ ನಾನು ಸಾಯ್ತೀದಿನಿ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪೀಟರ್ ಪತ್ನಿ ಪಿಂಕಿ ಕಿರಕುಳದಿಂದ ಆತ್ಮಹತ್ಯೆಗೆ ಶರಣಾಗಿದ್ದು, ಅಶೋಕ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ
ಪ್ರಕರಣದಲ್ಲಿ ಮಹತ್ವದ ಟ್ವಿಸ್ಟ್ ಸಿಕ್ಕಿದ್ದು. ಗಂಡನಿಂದ ಡೈವೋರ್ಸ್‌ಗಾಗಿ ಪಿಂಕಿ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಳು ಎನ್ನುವುದು ಗೊತ್ತಾಗಿದೆ. ವಿಚ್ಛೇದನ ಕೋರಿ ಜೀವನಾಂಶಕ್ಕಾಗಿ 20 ಲಕ್ಷ ಕೊಡುವಂತೆ ಪಿಂಕಿ ಪೀಡಿಸುತ್ತಿದ್ದಳು. ಕಳೆದ ಏಳೆಂಟು ತಿಂಗಳುಗಳಿಂದ ಪತಿ-ಪತ್ನಿ ಇಬ್ಬರೂ ದೂರವಾಗಿದ್ದರು. ಅನೈತಿಕ ಸಂಬಂಧ ಹಿನ್ನೆಲೆ ದೂರವಾಗಿದ್ದಾಗಿ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಗರ್ಲ್‌ಫ್ರೆಂಡ್‌ನ 4 ತಿಂಗಳ ಮಗುವನ್ನು ನೆಲಕ್ಕೆ ಬಡಿದು ಸಾಯಿಸಿದ 15 ವರ್ಷದ ಬಾಯ್‌ಫ್ರೆಂಡ್!
ಪತ್ನಿ ಪಿಂಕಿ ಬೇರೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಾಗಿ ಪೀಟರ್ ಕುಟುಂಬದವರು ಆರೋಪ ಮಾಡಿದ್ದಾರೆ. ಈ ಹಿನ್ನೆಲೆ ಪ್ರಶ್ನಿಸಿದ್ದಕ್ಕೆ ಪೀಟರ್ ಜೊತೆ ನಿತ್ಯ ಜಗಳವಾಡುತ್ತಿದ್ದಳು.ದೂರವಾದ ಬಳಿಕ ಜೀವನಾಂಶಕ್ಕಾಗಿ ಪಿಂಕಿ ಪೀಡಿಸುತ್ತಿದ್ದಳು. ಇದರಿಂದಾಗಿಯೇ ಮನನೊಂದು ಪೀಟರ್ ನೇಣಿಗೆ ಶರಣಾಗಿದ್ದಾನೆ ಎನ್ನಲಾಗಿದೆ. ಡಿವೋರ್ಸ್ ಗೆ ಅರ್ಜಿ ಸಲ್ಲಿಸಿ ಜೀವನಾಂಶಕ್ಕಾಗಿ 20 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಳು ಎಂದು ಮೃತ ಪತಿ ಪೀಟರ್ ಕುಟುಂಬಸ್ಥರಿಂದ ಪತ್ನಿ ಪಿಂಕಿ ಮೇಲೆ ಗಂಭೀರ ಆರೋಪ ಹೊರಿಸಲಾಗಿದೆ.
ಮೃತ ಪೀಟರ್ ತಾಯಿ ಹಾಗೂ ಸಂಬಂಧಿಗಳಿಂದ ಗಂಭೀರ ಆರೋಪ ಬಂದಿದೆ. ಸಾವಿಗೂ ಮುನ್ನ ಡೆತ್ ನೋಟ್ ನಲ್ಲಿ ತನ್ನ ಶವದ ಪೆಟ್ಟಿಗೆ ಮೇಲೆ ಹೆಂಡತಿಯ ಕಿರುಕುಳವೇ ಸಾವಿಗೆ ಕಾರಣ ಎಂದು ಬರೆಯುವಂತೆ ಪೀಟರ್ ಮನವಿ ಮಾಡಿದ್ದಾರೆ. ಶವದ ಪೆಟ್ಟಿಗೆ ಮೇಲೆ ನನ್ನ ಹೆಂಡತಿಯ ಕಾಟ ತಾಳಲಾರದೇ ಸಾವನ್ನಪ್ಪಿದೆ ಎಂದು ಬರೆಯುವಂತೆ ಪೀಟರ್ ಡೆತ್‌ನೋಟ್‌ನಲ್ಲಿ ಬರೆದಿದ್ದಾನೆ. ಈತನ ಸಾವಿಗೆ ನ್ಯಾಯ ಕೊಡಿಸುವಂತೆ ಆಗ್ರಹ ವ್ಯಕ್ತವಾಗಿದೆ. ಪತ್ನಿ ಹಾಗೂ ಪತ್ನಿಯ ಮನೆಯವರನ್ನ ಬಂಧಿಸಿ ನ್ಯಾಯ ಕೊಡಿಸಬೇಕೆಂದು ಆಗ್ರಹಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ