Davanagere Crime: ನಂಬರ್‌ ಪ್ಲೇಟ್‌ ಬದಲಿಸಿ ವಾಹನ ಚಾಲನೆ ಮಾಡ್ತಿದ್ದವನ ಸೆರೆ

Published : Dec 10, 2022, 09:33 AM ISTUpdated : Dec 10, 2022, 09:35 AM IST
Davanagere Crime: ನಂಬರ್‌ ಪ್ಲೇಟ್‌ ಬದಲಿಸಿ ವಾಹನ ಚಾಲನೆ ಮಾಡ್ತಿದ್ದವನ ಸೆರೆ

ಸಾರಾಂಶ

ಮತ್ತೊಂದು ವಾಹನದ ನಂಬರ್‌ನ್ನು ತನ್ನ ವಾಹನಕ್ಕೆ ಅಳವಡಿಸಿಕೊಂಡಿದ್ದ ವ್ಯಕ್ತಿಯ ವಿರುದ್ಧ ಇಲ್ಲಿನ ಬಸವ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ದೇವರಾಜ ಅರಸು ಬಡಾವಣೆ ಬಿ ಬ್ಲಾಕ್‌ ವಾಸಿ ಸುನಿಲ್‌ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ.

ದಾವಣಗೆರೆ (ಡಿ.10) : ಮತ್ತೊಂದು ವಾಹನದ ನಂಬರ್‌ನ್ನು ತನ್ನ ವಾಹನಕ್ಕೆ ಅಳವಡಿಸಿಕೊಂಡಿದ್ದ ವ್ಯಕ್ತಿಯ ವಿರುದ್ಧ ಇಲ್ಲಿನ ಬಸವ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಗರದ ದೇವರಾಜ ಅರಸು ಬಡಾವಣೆ ಬಿ ಬ್ಲಾಕ್‌ ವಾಸಿ ಸುನಿಲ್‌ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಇಲ್ಲಿನ ವಸಂತ ರಸ್ತೆಯಲ್ಲಿ ಸಂಚಾರ ಠಾಣೆ ಪಿಎಸ್‌ಐ ಪಿ.ಬಿ. ಜಯಪ್ರಕಾಶ ಹಾಗೂ ಸಿಬ್ಬಂದಿ ರಂಗಸ್ವಾಮಿ ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಕೆಎ 17, ಇಜಿ 5103 ನಂಬರ್‌ನ ಹಳದಿ ಬಣ್ಣದ ಹೊಂಡಾ ವಾಹನ ಚಾಲನೆ ಮಾಡುತ್ತಿದ್ದ ಸುನೀಲ್‌ ಏಕಾಏಕಿ ತನ್ನ ವಾಹನ ತಿರುಗಿಸಿಕೊಂಡು ಹೋಗಲೆತ್ನಿಸಿದಾಗ ಸಿಬ್ಬಂದಿ ಸಹಾಯದಿಂದ ಆತನನ್ನು ಹಿಡಿದು, ವಿಚಾರಣೆಗೆ ಒಳಪಡಿಸಲಾಯಿತು.

ಸುನೀಲ್‌ಗೆ ವಾಹನದ ದಾಖಲಾತಿ ಕೇಳಿದರೆ ಆರ್‌ಟಿಒ ಕಚೇರಿಯಲ್ಲಿ ನೋಂದಣಿ ಮಾಡಿಸಿಲ್ಲವೆಂದು ಹೇಳಿದ್ದಾನೆ. ನೋಂದಣಿ ಸಂಖ್ಯೆಯ ಮಾಲೀಕತ್ವದ ಬಗ್ಗೆ ಸ್ಥಳದಲ್ಲಿ ದಂಡ ವಿಧಿಸುವ ಎಂಎಫ್‌ಡಿ ಮಷಿನ್‌ ಮತ್ತು ಠಾಣೆಯ ಎಫ್‌ಟಿವಿಆರ್‌ ತಂತ್ರಾಂಶದಲ್ಲಿ ಪರಿಶೀಲಿಸಿದಾಗ ಮಾಡೆಲ್‌ 2012, ಹೊಂಡಾ ಡಿಯೋ ಬಿಳಿ ಬಣ್ಣ, ಇಂಜಿನ್‌ ನಂಬರ್‌, ಛಸ್ಸಿ ನಂಬರ್‌ಗಳ ಮಾಲೀಕರು ಮಾನಸಾ ಸಿದ್ದರಾಜು ಚಿಂದೋಡಿ, ಶಂಕರ ಲೀಲಾ ಗ್ಯಾಸ್‌ ಏಜೆನ್ಸಿ ಬಳಿ, ಎಂಸಿಸಿ ಬಿ ಬ್ಲಾಕ್‌, ದಾವಣಗೆರೆ ಎಂಬುದಾಗಿ ತಿಳಿದು ಬಂದಿದೆ.

Fact Check: ನಂಬರ್‌ ಪ್ಲೇಟ್‌ ಮರೆಮಾಚುವಂತೆ ವಾಹನಗಳ ಮೇಲೆ ನಿಂಬೆ-ಮೆಣಿಸಿನಕಾಯಿ ಹಾಕುವಂತಿಲ್ಲ

ಆರ್‌ಟಿಒ ಕಚೇರಿಯಲ್ಲಿ ವಾಹನ ನೋಂದಣಿ ಮಾಡಿಸದ ಸುನಿಲನು ಸರ್ಕಾರಕ್ಕೆ ಮೋಸ ಮಾಡಿದ್ದು, ಮೂಲ ಮಾಲೀಕರಿಗೂ ಮೋಸ ಮಾಡಿದ್ದಾನೆ. ಯಾವುದೋ ಕೃತ್ಯ ಎಸಗುವ ದುರುದ್ದೇಶದಿಂದ ಮತ್ತೊಬ್ಬರ ವಾಹನದ ನಂಬರ್‌ನ್ನು ತನ್ನ ವಾಹನಕ್ಕೆ ಅಳವಡಿಸಿಕೊಂಡಿದ್ದಾನೆ ಎಂಬುದು ಕಂಡು ಬಂದ ಹಿನ್ನೆಲೆಯಲ್ಲಿ ಆತನ ವಿರುದ್ಧ ಬಸವ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಸಮಯ ಪ್ರಜ್ಞೆ ಮೆರೆದ ಪೊಲೀಸ್‌ ಅಧಿಕಾರಿ, ಸಿಬ್ಬಂದಿ ಕಾರ್ಯಕ್ಕೆ ಎಸ್ಪಿ ಸಿ.ಬಿ. ರಿಷ್ಯಂತ್‌, ಎಎಸ್ಪಿ ಆರ್‌.ಬಿ. ಬಸರಗಿ, ಡಿವೈಎಸ್ಪಿ ನರಸಿಂಹ ವಿ. ತಾಮ್ರಧ್ವಜ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪ್ರೆಗ್ನೆಂಟ್ ಮಾಡಿ ಗರ್ಭಪಾತ ಮಾಡಿಸಿದ, Sorry ಅಮ್ಮಾ ಸಾಯ್ತಿದ್ದೀನಿ: ಯುವತಿ ಆತ್ಮ*ಹತ್ಯೆ
Actor Dileep Case: ಖ್ಯಾತ ನಟಿ ಮೇಲಿನ ಅ*ತ್ಯಾಚಾರ ಆರೋಪ; 8 ವರ್ಷಗಳ ಹೋರಾಟ, ನಟ ದಿಲೀಪ್‌ಗೆ ನಿರಾಳ!