ಬೇರೊಬ್ಬನ ಜೊತೆ ಗರ್ಲ್‌ಫ್ರೆಂಡ್‌ ಮದುವೆ, ಆಕೆಯ ಕೈಯನ್ನೇ ಕತ್ತರಿಸಿದ ಪಾಗಲ್‌ ಪ್ರೇಮಿ!

By Santosh Naik  |  First Published Mar 14, 2024, 5:35 PM IST

ತಾನು ಪ್ರೀತಿ ಮಾಡುತ್ತಿದ್ದ ಹುಡುಗಿಗೆ ಬೇರೊಬ್ಬನ ಜೊತೆ ಮದುವೆ ಫಿಕ್ಸ್‌ ಆಗಿದ್ದರಿಂದ ಸಿಟ್ಟಿಗೆದ್ದ ಯುವಕ, ಯುವತಿಯ ಕೈಯನ್ನೇ ಕತ್ತರಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
 


ಕಾನ್ಪುರ (ಮಾ.14): ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ನಡೆದಿದೆ. ಪಾಗಲ್‌ ಪ್ರೇಮಿಯೊಬ್ಬ ತಾನು ಪ್ರೀತಿ ಮಾಡಿದವಳ ಕೈಯನ್ನೇ ಕತ್ತರಿಸಿದ್ದಾನೆ. ಯುವತಿಯ ಕುಟುಂಬ ಆಕೆಯ ಮದುವೆಯನ್ನು ಬೇರೆ ಹುಡುಗನ ಜೊತೆ ಫಿಕ್ಸ್‌ ಮಾಡಿದ ಬೆನ್ನಲ್ಲಿಯೇ ಸಿಟ್ಟಿಗೆದ್ದಿದ್ದ ಯುವಕ ಈ ಕೃತ್ಯ ಎಸಗಿದ್ದಾರೆ. ಆರೋಪಿಯನ್ನು 25 ವರ್ಷದ ರಿಂಕು ಎಂದು ಗುರುತಿಸಲಾಗಿದ್ದು, ಯುವತಿಯ ಮಾಹಿತಿಯನ್ನು ಗೌಪ್ಯವಾಗಿ ಇರಿಸಲಾಗಿದೆ. ಕೈ ಕತ್ತರಿಸಿಕೊಂಡಿರುವ ಬಾಲಿಕಗೆ ಲಖನೌನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಉನ್ನಾವೋ ಜಿಲ್ಲೆಯ ಬೆಹ್ತಾ ಮುಜಾವರ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಗ್ರಾಮದಲ್ಲಿ ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಸಂತ್ರಸ್ತೆ ಪ್ರಸ್ತುತ ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಂತ್ರಸ್ತೆ ಕಳೆದ ಕೆಲವು ತಿಂಗಳುಗಳಿಂದ ರಿಂಕು ಜೊತೆ ಸಂಬಂಧ ಹೊಂದಿದ್ದರೂ, ಆಕೆಯ ಮನೆಯವರು ಬೇರೊಬ್ಬ ವ್ಯಕ್ತಿಯೊಂದಿಗೆ ಆಕೆಯ ಮದುವೆಯನ್ನು ನಿಶ್ಚಯ ಮಾಡಿದ್ದರು. ಏಪ್ರಿಲ್ 19 ರಂದು ಮದುವೆ ದಿನಾಂಕ ಕೂಡ ನಿಶ್ಚಯವಾಗಿತ್ತು. ಇದರಿಂದ ಕೋಪಗೊಂಡ ರಿಂಕು ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದು ಮನೆಯವರು ನಿಶ್ಚಯಿಸಿದ ಹುಡುಗನನ್ನು ತಿರಸ್ಕರಿಸುವಂತೆ ಹುಡುಗಿಗೆ ಮನವೊಲಿಸಲು ಪ್ರಯತ್ನಿಸಿದ್ದ. ಆದರೆ, ಮಹಿಳೆ ಪೋಷಕರ ನಿರ್ಧಾರದ ವಿರುದ್ಧ ಹೋಗಲು ನಿರಾಕರಿಸಿದ ಕಾರಣ ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ.

Latest Videos

undefined

ಮದುವೆಯನ್ನು ಮುರಿಯುವ ನಿಟ್ಟಿನಲ್ಲಿ ಹುಡುಗಿಯನ್ನು ಮನವೊಲಿಸಲು ಹಲವಾರು ವಿಫಲ ಪ್ರಯತ್ನಗಳ ನಂತರ, ರಿಂಕು ಫಾರ್ಮ್ ಟ್ರೋವೆಲ್ ಅನ್ನು ತೆಗೆದುಕೊಂಡು ಆಕೆಯ ಕೈಯನ್ನು ಕತ್ತರಿಸಿದ್ದಾರೆ. ಅಲ್ಲದೆ ಆಕೆಗೆ ಕೊಲೆ ಬೆದರಿಕೆ ಕೂಡ ಹಾಕಿದ್ದಾನೆ. ಘೋರ ಅಪರಾಧ ಮಾಡಿದ ನಂತರ ರಿಂಕು ಸ್ಥಳದಿಂದ ಪರಾರಿಯಾಗಿದ್ದಾರೆ.  ಸಂತ್ರಸ್ತೆಯನ್ನು ನಂತರ ಸ್ಥಳೀಯ ಆರೋಗ್ಯ ಕೇಂದ್ರಕ್ಕೆ ರವಾನಿಸಲಾಯಿತು, ಅಲ್ಲಿಂದ ಆಕೆಯನ್ನು ಚಿಕಿತ್ಸೆಗಾಗಿ ಲಕ್ನೋ ಟ್ರಾಮಾ ಸೆಂಟರ್‌ಗೆ ಕಳುಹಿಸಲಾಗಿದೆ.

ಪ್ರೀತಿಸಿ ಮದುವೆಯಾದವಳೇ ಸುಪಾರಿ ಕೊಟ್ಟಳಾ..? ಅವನ ಕೊಲೆಗೆ ಹೆಂಡತಿಯೇ ಮುಹೂರ್ತ ಇಟ್ಟಳಾ..?

“ಸಂತ್ರಸ್ತೆಯ ಸಹೋದರ ನೀಡಿದ ದೂರಿನ ಆಧಾರದ ಮೇಲೆ, ಬೆಹ್ತಾ ಮುಜಾವರ್ ಪೊಲೀಸ್ ಠಾಣೆಯಲ್ಲಿ ರಿಂಕು ವಿರುದ್ಧ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆಯನ್ನು ಪ್ರಾರಂಭಿಸಲಾಗಿದೆ. ರಿಂಕು ಪತ್ತೆಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಕೆಲ ಗಂಟೆಗಳ ನಂತರ ಆತನನ್ನು ಬಂಧಿಸಿ ನಂತರ ಜೈಲಿಗೆ ಕಳುಹಿಸಲಾಯಿತು'' ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಿತ್ರದುರ್ಗ: ಗ್ರಾಹಕರ ಸೋಗಿನಲ್ಲಿ ಚಿನ್ನ ಕದಿಯುತ್ತಿದ್ದ ಸಂಬಂಧಿಗಳ ಸೆರೆ

click me!