Udupi: ಚಾಕಲೇಟ್ ನುಂಗಿದ ಬಾಲಕಿ ಉಸಿರುಗಟ್ಟಿ ಸಾವು!

Published : Jul 20, 2022, 03:06 PM ISTUpdated : Jul 20, 2022, 08:33 PM IST
Udupi: ಚಾಕಲೇಟ್ ನುಂಗಿದ ಬಾಲಕಿ ಉಸಿರುಗಟ್ಟಿ ಸಾವು!

ಸಾರಾಂಶ

ಚಾಕಲೇಟ್ ನುಂಗಿದ ಬಾಲಕಿ ಉಸಿರುಗಟ್ಟಿ ಮೃತಪಟ್ಟ ಘಟನೆ ಬೈಂದೂರು ತಾಲೂಕು ಬವಳಾಡಿ ಗ್ರಾಮದಲ್ಲಿ ನಡೆದಿದೆ. ಸಮನ್ವಿ (6) ಮೃತಪಟ್ಟ ಬಾಲಕಿಯಾಗಿದ್ದು, ಉಪ್ಪುಂದ ಸ್ಥಳೀಯ ಆಂಗ್ಲ ಮಾಧ್ಯಮ ಸ್ಕೂಲ್‌ ವಿದ್ಯಾರ್ಥಿನಿಯಾಗಿದ್ದಳು. 

ಉಡುಪಿ (ಜು.20): ಚಾಕಲೇಟ್ ನುಂಗಿದ ಬಾಲಕಿ ಉಸಿರುಗಟ್ಟಿ ಮೃತಪಟ್ಟ ಘಟನೆ ಬೈಂದೂರು ತಾಲೂಕು ಬವಳಾಡಿ ಗ್ರಾಮದಲ್ಲಿ ನಡೆದಿದೆ. ಸಮನ್ವಿ (6) ಮೃತಪಟ್ಟ ಬಾಲಕಿಯಾಗಿದ್ದು, ಉಪ್ಪುಂದ ಸ್ಥಳೀಯ ಆಂಗ್ಲ ಮಾಧ್ಯಮ ಸ್ಕೂಲ್‌ ವಿದ್ಯಾರ್ಥಿನಿಯಾಗಿದ್ದಳು. ಇನ್ನು ಬಾಲಕಿ ಶಾಲೆಯ ಬಸ್‌ಗೆ ಕಾಯುತ್ತಿರುವ ಸಮಯದಲ್ಲಿ ಘಟನೆ ನಡೆದಿದ್ದು, ಸದ್ಯ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಿನ್ನುತ್ತಿದ್ದ ಚಾಕಲೇಟ್ ಗಂಟಲಲ್ಲಿ ಸಿಲುಕಿಸುತ್ತಿರಬಹುದೇ? .ಥವಾ ಈ ಸಾವಿಗೆ ಬೇರೆಯದೆ ಕಾರಣವಿದೆಯಾ? ಉಡುಪಿಯಲ್ಲಿ ನಡೆದಿರುವ ಪುಟ್ಟ ಮಗುವಿನ ಸಾವು ಎಲ್ಲರ ಮನೆ ತಲುಪುವಂತೆ ಮಾಡಿದೆ. ಮುದ್ದು ಮುದ್ದಾಗಿ ಕಾಣ್ತಿರೋ ಈ ಬಾಲಕಿ ಹೆಸರು ಸಮನ್ವಿ. ವಯಸ್ಸು ಆರು ವರ್ಷ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ‌ಬವಳಾಡಿ ಗ್ರಾಮದ ಈಕೆ ಕರುಣಾಕರ್ ಹಾಗೂ ಸುಪ್ರೀತ ದಂಪತಿಯ ದ್ವಿತೀಯ ಪುತ್ರಿ ಈಕೆ. 

ಧಾರವಾಡ: ಸಾವಿನಲ್ಲೂ ಸಾರ್ಥಕತೆ, ಅಂಗಾಂಗ ದಾನ ಮಾಡಿದ ಮಹಿಳೆ

ಸದಾ ಆಟ ಪಾಠದಲ್ಲಿ ಚೂಟಿಯಾಗಿದ್ದ ಈಕೆ ಇದೀಗ ನಿಗೂಢವಾಗಿ ಮೃತಪಟ್ಟಿದ್ದಾಳೆ. ಈಕೆ ಶಾಲಾ ಬಸ್ ಹತ್ತುವಾಗಲೇ ಮೃತಪಟ್ಟಿದ್ದಾಳೆ. ಸತ್ತ ಬೆನ್ನಲ್ಲೇ ಚಾಕಲೇಟ್ ಜೊತೆಗೆ ಚಾಕಲೇಟ್ ಕವರ್ ಕೂಡ ನುಂಗಿದ್ದರಿಂದ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಅನ್ನೋ ಸುದ್ದಿ ಬೈಂದೂರು ತಾಲೂಕಿನಾದ್ಯಂತ ವೈರಲ್ ಆಗಿತ್ತು. ಆದರೆ ಕುಟುಬಸ್ಥರು ಚಾಕಲೇಟ್ ಕವರ್ ನುಂಗಿಲ್ಲ ಚಾಕಲೇಟ್ ‌ನಿಂದ ಸಾವನ್ನಪ್ಲಿಲ್ಲ ಅಂತಿದ್ದಾರೆ.

ಉಪ್ಪುಂದ ಭಾಗದ ಸ್ಥಳೀಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಂದನೇ ತರಗತಿಯಲ್ಲಿ ಓದುತ್ತಿದ್ದ ಸಮನ್ವಿ ಇವತ್ಯಾಕೋ ಶಾಲೆಗೆ ಹೋಗೋದಕ್ಕೆ ಹಠ ಮಾಡ್ತಿದ್ಲಂತೆ. ತಾಯಿ ಎಂದಿನಂತೆ ಇಂದೂ ಕೂಡ ಚಾಕಲೇಟ್ ಕೊಟ್ಟು ಖುಷಿಪಡಿಸಿದ್ದಾರೆ. ಚಾಕಲೇಟ್ ಕವರ್ ನಿಂದ ತೆಗೆದು ಬಾಯಲ್ಲಿ ಚಾಕಲೆಟ್ ಇಟ್ಟು ತಾಯಿ ಕೈಹಿಡಿದು ಶಾಲಾ ಬಸ್ ಬರುವ ಸ್ಥಳಕ್ಕೆ ಹೊರಟಿದ್ದಾಳೆ. 

ಸಹೋದರ ಬಸ್ ಹತ್ತಿದ ಬೆನ್ನಲ್ಲೇ ಈಕೆ ಕೂಡ ಬಸ್ ಹತ್ತಲು ಮುಂದಾದಾಗ ಬಸ್ ಹತ್ತುವ ಕ್ಷಣದಲ್ಲಿ ಕುಸಿದು ಬಿದ್ದಿದ್ದಾಳೆ‌.‌ ಆ ಕ್ಷಣ ಚಾಕಲೇಟ್ ಬಾಯಿಂದ ಹೊರಗೆ ಬಿದ್ದಿದೆ.‌ ಮೈ ಬಿಸಿ ಇತ್ತು ಕೂಡಲೇ ಆಸ್ಪತ್ರೆ ಸಾಗಿಸಲಾಗಿದೆ. 

ಸರ್ಕಾರಿ‌ ಆಸ್ಪತ್ರೆ ವೈದ್ಯರು ಖಾಸಗಿ ಆಸ್ಪತ್ರೆ ತೆಗೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಸಮೀಪದ ಖಾಸಗಿ ಆಸ್ಪತ್ರೆ ಕರೆದುಕೊಂಡು ಹೋದ್ರೆ ಈಗಾಗಲೇ ಈಕೆ ಮೃತಪಟ್ಟ ಮಾಹಿತಿ ವೈದ್ಯರು ಕೊಟ್ಟಿದ್ದಾರೆ.

ವೈದ್ಯರಿಗೂ ಸಾವಿಗೆ ಕಾರಣ ತಿಳಿದಿಲ್ಲ. ಈಕೆಯ ತಾಯಿಗೂ ಮಗಳ ಸಾವಿಗೆ ಕಾರಣ ಗೊತ್ತಾಗಿಲ್ಲ.‌ ಮರಣೋತ್ತರ ಪರೀಕ್ಷೆ ಬಳಿಕವೇ ಸಾವಿನ ನಿಖರತೆ ತಿಳಿದುಬರಲಿದೆ. ಮಣಿಪಾಲದ ಕೆ ಎಂ ಸಿ ಆಸ್ಪತ್ರೆಯಲ್ಲಿ ಮಗುವಿನ ಶವದ ಅಂತಿಮ ಪರೀಕ್ಷೆ ನಡೆಸಲಾಗಿದೆ.

ತಾಯಿಯ ಕೈಹಿಡಿದು ಬಂದ ಮಗು ಹೀಗೆ ಅನಾಮತ್ತಾಗಿ ತೀರಿಕೊಂಡಿರುವುದು ಕುಟುಂಬವನ್ನು ಕಂಗೆಡಿಸಿದೆ. ಸಾವಿಗೆ ನಿಖರ ಕಾರಣ ತಿಳಿಯುವ ತನಕ ಕುಟುಂಬದವರಿಗೂ ನೆಮ್ಮದಿ ಇಲ್ಲದಂತಾಗಿದೆ.

ಬಸ್‌-ಆಟೋ ಡಿಕ್ಕಿ-ಬಾಲಕಿ ಸಾವು: ಕೆಕೆಎಸ್ಸಾರ್ಟಿಸಿ ಬಸ್ಸೊಂದು ಆಟೋಗೆ ಗುದ್ದಿದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟು, ಆರು ಜನರು ತೀವ್ರವಾಗಿ ಗಾಯಗೊಂಡಿರುವ ಘಟನೆ ತಾಲೂಕಿನ ಕವಡಿ ಮಟ್ಟಿಸೀಮಾಂತರದಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ರುಕ್ಮಾಪುರ ಗ್ರಾಮದ ವೈಷ್ಣವಿ ಜಗದೀಶ ದೇವಶೆಟ್ಟಿ(4) ಸ್ಥಳದಲ್ಲೇ ಅಸುನೀಗಿದ್ದಾಳೆ. ಆಟೋದಲ್ಲಿದ್ದ ಆರು ಜನರು ಗಾಯಗೊಂಡಿದ್ದಾರೆ. ಕಲಬುರಗಿ ಜಿಲ್ಲೆಯ ಜೇವರ್ಗಿ ಘಟಕದ ಬಸ್ಸು ಅತಿವೇಗವಾಗಿ ಬಂದು ಸುರಪುರ ನಗರದಿಂದ ದೇವಾಪುರ ಗ್ರಾಮಕ್ಕೆ ತೆರಳುತ್ತಿದ್ದ ಆಟೋಕ್ಕೆ ಡಿಕ್ಕಿ ಹೊಡೆದಿದ್ದು, ದುರ್ಘಟನೆ ನಡೆದಿದೆ. ಈ ಘಟನೆಗೆ ಚಾಲಕನ ಅತಿವೇಗವೇ ಕಾರಣವಾಗಿದೆ. ಸುರಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಐ ಸುನೀಲ್‌ ಮೂಲಿಮನಿ ತಿಳಿಸಿದ್ದಾರೆ.

ಶಾಲೆಯಲ್ಲಿ ವಿದ್ಯುತ್‌ ಸ್ಪರ್ಶಿಸಿ ಬಾಲಕಿ ಸಾವು: ಶಾಲೆಯಲ್ಲಿ ವಿದ್ಯುತ್‌ ಸ್ಪರ್ಶಿಸಿ ವಿದ್ಯಾರ್ಥಿನಿಯೊಬ್ಬಳು ಸ್ಥಳದಲ್ಲೇ ಅಸುನೀಗಿದ ಘಟನೆ ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಡೋಣೆವಾಡಿ ಗ್ರಾಮದ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯಲ್ಲಿ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅನುಷ್ಕಾ ಸದಾಶಿವ ಭೆಂಡೆ (9) ಮೃತ ವಿದ್ಯಾರ್ಥಿನಿ. ಅನುಷ್ಕಾ ಮಧ್ಯಾಹ್ನ ಶೌಚಾಲಯಕ್ಕೆ ಹೋಗುತ್ತಿದ್ದಾಗ ಅಲ್ಲಿಯೇ ಇದ್ದ ದೂರವಾಣಿ ಕಂಬವನ್ನು ಸ್ಪರ್ಶಿಸಿದ್ದಾಳೆ. ಈ ಕಂಬದ ಸಹಾಯ ಪಡೆದು ಸ್ಥಳೀಯರು ವಿದ್ಯುತ್‌ ಲೈನ್‌ ಹಾಕಿಕೊಂಡಿದ್ದಾರೆ. ವಿದ್ಯುತ್‌ ತಂತಿ ತುಂಡಾಗಿ ಈ ದೂರವಾಣಿ ಕಂಬಕ್ಕೆ ತಾಗಿದ್ದು, ವಿದ್ಯುತ್‌ ಪ್ರವಹಿಸಿ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಆರೋಪದಡಿ ಶಾಲೆ ಮುಖ್ಯ ಶಿಕ್ಷಕನ ಕುಮಾರ ವಿ.ನಾಟೇಕರ ಅವರನ್ನು ಅಮಾನತು ಮಾಡಿ ಡಿಡಿಪಿಐ ಎಂ.ಎಲ್‌.ಹಂಚಾಟೆ ಆದೇಶಿಸಿದ್ದಾರೆ.

ಪತಿ ಅಗಲಿಕೆ ನೋವಲ್ಲೇ ಜೀವಬಿಟ್ಟ ಪತ್ನಿ, ಸಾವಿನಲ್ಲೂ ಒಂದಾದ ವೃದ್ಧ ದಂಪತಿ

ವಿದ್ಯುತ್‌ ತಂತಿ ತುಳಿದು ಬಾಲಕಿ ಸಾವು: ಜಮೀನಿನಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯತ್‌ ತಂತಿ ತುಳಿದು ಬಾಲಕಿ ಮೃತಪಟ್ಟಿರುವ ಘಟನೆ ತಾಲೂಕಿನ ಹುಲಿಕಟ್ಟಿಗ್ರಾಮದಲ್ಲಿ ಶನಿವಾರ ಸಂಭವಿಸಿದೆ. ಚೂನವ್ವ ಹನಮಂತ ಸರ್ವಿ (8) ಮೃತ ದುರ್ದೈವಿ, ಶಾಲೆಯಿಂದ ಮನೆಗೆ ಬಂದ ಬಳಿಕ ಗೆಳತಿಯ ಮನೆಗೆ ಅಭ್ಯಾಸಕ್ಕೆಂದು ತೆರಳುವ ವೇಳೆ ಈ ದುರ್ಘಟನೆ ನಡೆದಿದೆ. ವಿದ್ಯುತ್‌ ತಂತಿ ಗಾಳಿಗೆ ತುಂಡಿರಿಸಿ ಜಮೀನಿನಲ್ಲಿ ಬಿದ್ದಿತ್ತು ಎನ್ನಲಾಗಿದೆ. ಸ್ಥಳಕ್ಕೆ ಹೆಸ್ಕಾಂ ಅಧಿಕಾರಿಗಳು ಹಾಗೂ ಗೋಕಾಕ ಗ್ರಾಮೀಣ ಠಾಣಾ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗೋಕಾಕ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು