ಚಮತ್ಕಾರಿ ಪಾತ್ರೆ ಎಂದು ನಂಬಿಸಿ ಬೆಂಗಳೂರು ಉದ್ಯಮಿ ಜೊತೆಗೆ 1.5ಕೋಟಿ ಡೀಲ್‌ ಮಾಡಿದ್ದ ಗ್ಯಾಂಗ್ ಅರೆಸ್ಟ್!

By Suvarna News  |  First Published Apr 19, 2024, 1:11 PM IST

ಚಮತ್ಕಾರಿ ಪಾತ್ರೆ ಎಂದು ನಂಬಿಸಿ ಉದ್ಯಮಿಯೊಬ್ಬರಿಗೆ  ಕೋಟಿ ಕೋಟಿ ವಂಚನೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.


ಬೆಂಗಳೂರು (ಫೆ.19): ಚಮತ್ಕಾರಿ ಪಾತ್ರೆ ಎಂದು ನಂಬಿಸಿ ಉದ್ಯಮಿಯೊಬ್ಬರಿಗೆ  ಕೋಟಿ ಕೋಟಿ ವಂಚನೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಘಟನೆ ಸಂಬಂಧ ಜಯನಗರ ಪೊಲೀರು ವಂಚಕರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 70 ಲಕ್ಷ ಹಣ ಮತ್ತು ಒಂದು ಪಾತ್ರೆಯನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಪೋರೇಟರ್‌ ಪುತ್ರಿ ನೇಹಾ ಹತ್ಯೆ ಪ್ರಕರಣ: ಆರೋಪಿ ಫಯಾಸ್‌ಗೆ 14 ದಿನ ನ್ಯಾಯಾಂಗ ಬಂಧನ, ಮುಸ್ಲಿಮರ ಪ್ರತಿಭಟನೆ

Tap to resize

Latest Videos

undefined

ಶಿವಶಂಕರ್, ಅಬ್ದುಲ್ ಸುಕ್ಕುರ್  ಹಾಗೂ ಸನ್ನಿ ಗಿಲ್ ಬಂಧಿತ ವಂಚಕರಾಗಿದ್ದು, ಉದ್ಯಮಿಯೊಬ್ಬರಿಗೆ ಪಾತ್ರೆ ತೋರಿಸಿದ ಗ್ಯಾಂಗ್ ಆಪಾರ ಶಕ್ತಿಯನ್ನ ಹೊಂದಿರುವ ಅದೃಷ್ಟದ ಪಾತ್ರೆ. ಈ ಪಾತ್ರೆಗೆ ಮಾರ್ಕೆಟ್ ನಲ್ಲಿ ಕೋಟ್ಯಾಂತರ ರೂ ಬೆಲೆ ಇದೆ. ಒಂದುವರೆ ಕೋಟಿ ‌ಹಣ ನೀಡಿದ್ರೆ ತಮಗೆ ಈ ಅದೃಷ್ಟದ‌ ಪಾತ್ರೆ ಕೊಡೋದಾಗಿ ಗ್ಯಾಂಗ್ ಉದ್ಯಮಿಯನ್ನು ನಂಬಿಸಿತ್ತು.

ಕನ್ನಡ ಮಾತನಾಡಿದಕ್ಕೆ ಫ್ರೆಜರ್‌ಟೌನ್‌ನಲ್ಲಿ ನಟ ಭುವನ್‌ ಮೇಲೆ ಹಲ್ಲೆ; ಪಾಕಿಸ್ತಾನದಲ್ಲಿ ಇದ್ದೀವಾ ಎಂದು ಪ್ರಶ್ನಿಸಿದ ಹರ್ಷಿಕಾ

ಹೀಗೆ ಪಾತ್ರೆಯನ್ನಿಟ್ಟುಕೊಂಡು ಉದ್ಯಮಿಗೆ ಬಲೆ ಹೆಣೆದ ವಂಚಕ ಗ್ಯಾಂಗ್ ಬಳಿಕ 70 ಲಕ್ಷಕ್ಕೆ ಡೀಲ್ ಕುದುರಿಸಿತ್ತು. ಈ ಬಗ್ಗೆ ಮಾಹಿತಿ ಸಿಕ್ಕಿದ ಹಿನ್ನೆಲೆ ತಕ್ಷಣ ಪೊಲೀಸರು ಅಲರ್ಟ್ ಆಗಿ ದಾಳಿ ನಡೆಸಿದ್ದು, ಸದ್ಯ ಆರೋಪಿಗಳನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

click me!