ವಿವಿ ಕುಲಪತಿಗಳ ವಾಟ್ಸಪ್‌ ಡಿಪಿ ಬಳಸಿ ಹಣ ಕೇಳಿದ ವಂಚಕರು..!

By Kannadaprabha NewsFirst Published Dec 30, 2023, 6:22 AM IST
Highlights

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ.ಗುಡಸಿ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಪರಶಿವಮೂರ್ತಿ ಅವರು ಒಂದೇ ದಿನ ವಂಚನೆಗೆ ಒಳಗಾಗಿದ್ದಾರೆ. 

ಹುಬ್ಬಳ್ಳಿ(ಡಿ.30):  ರಾಜ್ಯದ 2 ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಕುಲಪತಿಗಳ ವಾಟ್ಸಪ್‌ ಡಿಪಿ ಬಳಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿದ್ದು, ಇಬ್ಬರೂ ಪೊಲೀಸರಿಗೆ ದೂರು ನೀಡಿದ್ದಾರೆ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಾ.ಕೆ.ಬಿ.ಗುಡಸಿ ಮತ್ತು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ.ಪರಶಿವಮೂರ್ತಿ ಅವರು ಒಂದೇ ದಿನ ವಂಚನೆಗೆ ಒಳಗಾಗಿದ್ದಾರೆ. 

ವಂಚಕರು ಈ ಇಬ್ಬರ ವಾಟ್ಸಾಪ್‌ ಡಿಪಿ ಬಳಸಿ ರಾಜ್ಯಪಾಲರ ಕಚೇರಿ ಅಧಿಕಾರಿಗಳು, ವಿವಿ ಕುಲಸಚಿವರು, ಹಿರಿಯ ಪ್ರಾಧ್ಯಾಪಕರು ಹಾಗೂ ಅವರ ಸ್ನೇಹಿತ ಬಳಗಕ್ಕೆ ಈ ರೀತಿ ಮೊಬೈಲ್‌ ಸಂದೇಶ ಕಳುಹಿಸಿದ್ದಾರೆ.

QR ಕೋಡ್ ಸ್ಕ್ಯಾನ್ ಎಚ್ಚರ, ಹೈಟೆಕ್ ಜಾಲಕ್ಕೆ ಸಿಲುಕಿ ಹಣ ಕಳೆದುಕೊಂಡ ಬೆಂಗಳೂರು ನಿವಾಸಿ!

ಹಣ ಕೇಳಿರುವ ಕುರಿತು ಕುಲಪತಿಗಳಿಗೆ ಸ್ನೇಹಿತರು, ಸಹೋದ್ಯೋಗಿಗಳಿಂದ ದೂರವಾಣಿ ಕರೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡು ನನ್ನ ಹೆಸರಿನಲ್ಲಿ ಯಾರಾದರೂ ಹಣ ಕೇಳಿದರೆ ಕೊಡಬೇಡಿ ಎಂದು ವಾಟ್ಸಪ್‌ ಹಾಗೂ ಫೇಸಬುಕ್‌ನಲ್ಲಿ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಕವಿವಿ ಕುಲಪತಿಗಳಿಗೆ 9690790991 ಎಂಬ ನಂಬರ್‌ನ ವಿಶಾಲ್‌ ಕಟಾರಿಯಾ ಹೆಸರಿನಲ್ಲಿ ಈ ಮಾಹಿತಿ ಹಾಕಲಾಗಿದೆ.

ಕವಿವಿ ಕುಲಪತಿಗಳು ಸೆನ್‌ (ಸೈಬರ್‌) ಪೊಲೀಸರಿಗೆ ದೂರು ಸಲ್ಲಿಸಿದ್ದು, ಕನ್ನಡ ವಿವಿ ಕುಲಪತಿಗಳು ಕಮಲಾಪುರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

click me!