
ರಾಜ್ಕೋಟ್ (ಆ. 30) ಹೆಂಡತಿ ಜತೆ ಬಾಳೋದಕ್ಕಿಂತ ಪೊಲೀಸ್ ಲಾಕಪ್ಪೇ ಬೆಸ್ಟ್ ಎಂದು ಈ ಪುಣ್ಯಾತ್ಮ ತೀರ್ಮಾನ ಮಾಡಿದ್ದಾನೆ. ಹೇಗಾದರೂ ಪೊಲೀಸರಿಂದ ಅರೆಸ್ಟ್ ಆಗಬೇಕು ಎಂದು ಪ್ಲಾನ್ ಮಾಡಿದವ ಪೊಲೀಸ್ ಚೌಕಿಗೆ ಬೆಂಕಿ ಇಟ್ಟಿದ್ದಾನೆ .
ಮನೆಯಲ್ಲಿನ ವಿಚಾರಕ್ಕೆ ಸಂಬಂಧಿಸಿ ಪತ್ನಿ ಉದ್ದುದ್ದ ಲೆಕ್ಚರ್ ಕೊಡುತ್ತಿದ್ದಳು. ಈ ಕಾಟ ತಾಳಲಾರದೆ ಗುಜರಾತ್‌ನ ರಾಜ್‌ಕೋಟ್ ನ 23 ವರ್ಷದ ಯುವಕ ಇಂಥ ಕೆಲಸ ಮಾಡಿದ್ದಾನೆ.
ವ್ಯಕ್ತಿಯನ್ನು ದೇವಜಿ ಚಾವ್ಡಾ ಎಂದು ಗುರುತಿಸಲಾಗಿದೆ. ದಿಗೂಲಿ ನೌಕರನಾಗಿ ಕೆಲಸ ಮಾಡಿಕೊಂಡಿದ್ದ. ಜಾಮ್‌ನಗರ ರಸ್ತೆಯ ಬಜರಂಗ ವಾಡಿ ಪೊಲೀಸ್ ಚೌಕಿಯ ಎದುರು ವಾಸ ಮಾಡುತ್ತಿದ್ದ.
ಬಾಡಿಗೆ ಕೊಡುವ ಮುನ್ನ ಯೋಚಿಸಿ.. ಹಂತಕರು ಇರಬಹುದು ಎಚ್ಚರ
ಹೆಂಡತಿಯ ಕಾಟದಿಂದ ಪಾರಾಗಲು ತೀರ್ಮಾನ ಮಾಡಿದ ಆತನ ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಆತ ಪೊಲೀಸ್ ಚೌಕಿಗೆ ಹೋಗಿ ಇಂಥದ ಎರಚಿ ಬೆಂಕಿ ಹಚ್ಚಿದ್ದಾನೆ. ಹತ್ತಿರದಲ್ಲೇ ಇದ್ದ ವ್ಯಾಪಾರಿಗಳು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.
ಪೊಲೀಶರು ಬರುವವರೆಗೂ ಈತ ಸ್ಥಳದಲ್ಲಿಯೇ ನಿಂತುಕೊಂಡಿದ್ದ. ಪರಾರಿಯಾಗುವ ಯಾವ ಯತ್ನವನ್ನು ಮಾಡಲಿಲ್ಲ. ಪೊಲೀಸ್ ವಿಚಾರಣೆ ವೇಳೆ ತಾನು ಹೆಂಡತಿಯ ಕಾಟದಿಂದ ಬೇಸತ್ತಿದ್ದೆ.. ಆಕೆ ಉದ್ದುದ್ದ ಭಾಷಣ ಮಾಡುತ್ತಿದ್ದಳು.. ದಿನಗೂಲಿ ಕೆಲಸ ಮಾಡುವ ನನಗೆ ಬೇರೆ ದಾರಿ ಕಾಣಲಿಲ್ಲ.. ಜೈಲಿನಲ್ಲಿ ಊಟ ಸಿಗುತ್ತದೆ ಈ ಕಾರಣದಿಂದ ಇಂಥ ಕೆಲಸ ಮಾಡಿದೆ ಎಂದಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ