Bengaluru Crime News: ಕೆಂಗೇರಿಯ ಜೆಎಸ್ಎಸ್ ಕಾಲೇಜು ಇಂಜಿನಿಯರಿಂಗ್ ವಿಧ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ
ಬೆಂಗಳೂರು (ಜು. 20): ಬೆಂಗಳೂರಿನ ಕೆಂಗೇರಿಯ ಜೆಎಸ್ಎಸ್ ಕಾಲೇಜು ವಿಧ್ಯಾರ್ಥಿನಿ ನೇಣಿಗೆ ಶರಣಾಗಿದ್ದಾಳೆ. ಕೆಂಗೇರಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. 21 ವರ್ಷದ ಯುವತಿ ಹಾಸ್ಟೆಲ್‌ನಲ್ಲಿ ನೇಣಿಗೆ ಶರಣಾಗಿದ್ದಾಳೆ. ಶಿವಾನಿ (21) ಆತ್ಮಹತ್ಯಗೆ ಶರಣಾದ ವಿದ್ಯಾರ್ಥಿನಿ. ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದಾರೆ. ಇಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಜೆಎಸ್‌ಎಸ್ ಕಾಲೇಜಿನ ಇಂಜಿನಿಯರಿಂಗ್ ವಿಭಾಗದ ಹಾಸ್ಟೆಲಿನಲ್ಲಿ ಘಟನೆ ನಡೆದಿದೆ.
ಇಂದು ಪರೀಕ್ಷೆಗೆ ಹಾಜರಾಗದೆ ಹಾಸ್ಟೆಲಿನ ಕೋಣೆಯಲ್ಲಿನ ಸಿಲಿಂಗ್ ಫ್ಯಾನಿಗೆ ನೇಣು ಬಿಗಿದುಕೊಂಡು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಧ್ಯಾಹ್ನ ಹಾಸ್ಟಲ್ ವಾರ್ಡನ್ ಹೋಗಿ ನೋಡಿಗಾದ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ವಾರ್ಡನ್ ಕೂಡಲೇ ಕೆಂಗೇರಿ ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
ಇದನ್ನೂ ಓದಿ: ಬಿಜಿಎಸ್ ಕಾಲೇಜು ಮಹಿಳಾ ಪ್ರೊಫೆಸರ್ ಆತ್ಮಹತ್ಯೆಗೆ ಶರಣು
ಯುವತಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಕಾಲೇಜು ಪ್ರಿನ್ಸಿಪಲ್ ಭೀಮಾಸೇನ್ ಕೆಂಗೇರಿ ಠಾಣೆಗೆ ದೂರು ನೀಡಿದ್ದಾರೆ. ಘಟನಾ ಸ್ಥಳದಲ್ಲಿ ಇದುವರೆಗೂ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ. ಸದ್ಯ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.