ರನ್ಯಾ ಚಿನ್ನ ಕಳ್ಳ ಸಾಗಣೆ ಪ್ರಕರಣ ಬೆನ್ನಲ್ಲೇ DRI ಮತ್ತೊಂದು ಭರ್ಜರಿ ಬೇಟೆ! ಸಿಕ್ಕಿದ್ದೇನು? ಬಂಧಿತ ಮಹಿಳೆ ಯಾರು?

Published : Mar 20, 2025, 06:39 AM ISTUpdated : Mar 20, 2025, 10:02 AM IST
ರನ್ಯಾ ಚಿನ್ನ ಕಳ್ಳ ಸಾಗಣೆ ಪ್ರಕರಣ ಬೆನ್ನಲ್ಲೇ DRI ಮತ್ತೊಂದು ಭರ್ಜರಿ ಬೇಟೆ! ಸಿಕ್ಕಿದ್ದೇನು? ಬಂಧಿತ ಮಹಿಳೆ ಯಾರು?

ಸಾರಾಂಶ

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ಇಲಾಖೆ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಕತಾರ್‌ನಿಂದ ಬಂದ ಘಾನಾ ಮಹಿಳೆಯಿಂದ ₹38.8 ಕೋಟಿ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.

ಬೆಂಗಳೂರು (ಮಾ.20) : ನಟಿ ರನ್ಯಾ ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ ಬೆನ್ನಲ್ಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಕಂದಾಯ ಗುಪ್ತಚರ ಜಾರಿ ನಿರ್ದೇಶನಾಲಯ (ಡಿಆರ್‌ಐ) ಮತ್ತೊಂದು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ವಿದೇಶಿ ಮಹಿಳೆಯೊಬ್ಬಳನ್ನು ಬಂಧಿಸಿ ₹38.8 ಕೋಟಿ ಮೌಲ್ಯದ ಡ್ರಗ್ಸ್ ಅನ್ನು ವಶಕ್ಕೆ ಪಡೆದಿದೆ.

ಕತಾರ್‌ ದೇಶದಿಂದ ಕೆಐಎ ಬಂದಿಳಿದ ಘಾನಾ ದೇಶದ ಮಹಿಳೆ ಬಳಿ ಡ್ರಗ್ಸ್ ಪತ್ತೆಯಾಗಿದ್ದು, ಆಕೆಯನ್ನು ಬಂಧಿಸಿ ತಪಾಸಣೆಗೊಳಪಡಿಸಿದಾಗ ₹38.8 ಕೋಟಿ ಮೌಲ್ಯದ 3 ಕೆ.ಜಿ. ತೂಕದ ಕೊಕೇನ್ ಪತ್ತೆಯಾಗಿದೆ. ಈ ವಿದೇಶಿ ಪೂರ್ವಾಪರ ಕುರಿತು ಡಿಆರ್‌ಐ ಮಾಹಿತಿ ಕಲೆ ಹಾಕುತ್ತಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಮದುವೆಗೆ ವಧು ಸಿಗದ್ದಕ್ಕೆ ಕರೆಂಟ್ ಕಂಬ ಹತ್ತಿದ ಯುವಕ, ತಾಯಿ ಮುಂದೆಯೇ ಹೈಟೆನ್ಷನ್ ತಂತಿ ಮುಟ್ಟಿ ನೇತಾಡಿದ!

ಎರಡು ವಾರಗಳ ಹಿಂದೆ ದುಬೈನಿಂದ ಚಿನ್ನ ಕಳ್ಳ ಸಾಗಿಸುವಾಗ ನಟಿ ಹಾಗೂ ಡಿಜಿಪಿ ಮಲಮಗಳು ರನ್ಯಾ ರಾವ್ ಅವರನ್ನು ಡಿಆರ್‌ಐ ಬಂಧಿಸಿದ್ದ ಪ್ರಕರಣ ರಾಷ್ಟ್ರವ್ಯಾಪ್ತಿ ಗಮನ ಸೆಳೆದಿತ್ತು. ಇನ್ನೊಂದೆಡೆ ವಿಮಾನದಲ್ಲಿ ಡ್ರಗ್ಸ್ ಸಾಗಿಸಿ ತಂದು ರಾಜ್ಯದಲ್ಲಿ ಮಾರುತ್ತಿದ್ದ ಇಬ್ಬರು ಆಫ್ರಿಕಾ ಮೂಲಕ ಮಹಿಳೆಯರನ್ನು ಮಂಗಳೂರು ಪೊಲೀಸರ ಭರ್ಜರಿ ಕಾರ್ಯಾಚರಣೆ ಸೆರೆ ಹಿಡಿದು ₹75 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದರು. ಈ ಪ್ರಕರಣಗಳು ಮರೆಯುವ ಮುನ್ನವೇ ವಿಮಾನದಲ್ಲಿ ರಾಜ್ಯಕ್ಕೆ ಡ್ರಗ್ಸ್ ಅಕ್ರಮವಾಗಿ ತರುತ್ತಿದ್ದ ಮತ್ತೊಬ್ಬ ವಿದೇಶಿ ಮಹಿಳೆಯನ್ನು ಡಿಆರ್‌ಐ ಬಂಧಿಸಿದೆ. ಅಲ್ಲದೆ ಆಕೆಯ ಬಳಿ ಕೋಟ್ಯಾಂತರ ಮೌಲ್ಯದ ಡ್ರಗ್ಸ್ ಸಹ ಸಿಕ್ಕಿದ್ದು, ಈ ಡ್ರಗ್ಸ್ ಪೂರೈಕೆ ಜಾಲದ ಕುರಿತು ಡಿಆರ್‌ಐ ಜಾಲಾಡುತ್ತಿದೆ ಎಂದು ತಿಳಿದು ಬಂದಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
ಉಡುಪಿ: ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷನ ರೆಸಾರ್ಟ್‌ನಲ್ಲಿ ಅಕ್ರಮ ವಿದೇಶಿಯರಿಗೆ ಆಶ್ರಯ; ಪ್ರಕರಣ ದಾಖಲು!