
ಬೆಂಗಳೂರು (ಜೂ.10): ಮೊಬೈಲ್‌ನ ವಾಟ್ಸಾಪ್ ಚಾಟ್‌ನಲ್ಲಿ ಗುಡ್ ಮಾರ್ನಿಂಗ್ ಡಿಯರ್ ಎಂಬ ಸಂದೇಶದ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿ ಪತ್ನಿ ಮನೆ ಬಿಟ್ಟು ಹೋಗಿರುವ ಘಟನೆ ಮಹಾಲಕ್ಷ್ಮೀಪುರಂ ಮೈಕೋ ಲೇಔಟ್‌ನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮನೆ ಬಿಟ್ಟು ಹೋಗಿರುವ 35 ವರ್ಷದ ಪತ್ನಿಯನ್ನು ಹುಡುಕಿಕೊಡುವಂತೆ 43 ವರ್ಷದ ಪತಿ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ನಾಪತ್ತೆ ಪ್ರಕರಣ ದಾಖಲಿಸಿ ಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ: ಜೂ.4ರಂದು ಬೆಳಗ್ಗೆ ಮನೆಯಲ್ಲಿ ತಿಂಡಿ ತಿನ್ನುತ್ತಿದ್ದ ವೇಳೆ ಪತ್ನಿಯ ಮೊಬೈಲ್‌ಗೆ ಅಪರಿಚಿತ ಸಂಖ್ಯೆಯಿಂದ ವಾಟ್ಸಾಪ್ ಕರೆ ಬಂದಿದೆ. ಈ ವೇಳೆ ವಾಟ್ಸಾಪ್ ಚಾಟ್‌ನಲ್ಲಿ ಆ ವ್ಯಕ್ತಿಗೆ ಪತ್ನಿಯು ಗುಡ್ ಮಾನಿ೯೦ಗ್ ಡಿಯರ್ ಎಂಬ ಸಂದೇಶ ಕಳುಹಿಸಿರುವುದು ಕಂಡು ಬಂದಿದೆ. ಇದನ್ನು ಗಮನಿಸಿದ ಪತಿಯು ಪತ್ನಿಯನ್ನು ಕುರಿತು ನಗುತ್ತಲೇ ಈ ರೀತಿ ಸಂದೇಶ ಏಕೆ ಮಾಡುತ್ತೀಯಾ? ಸರ್ ಅಥವಾ ಅಣ್ಣ ಎಂದು ಹಾಕು ಎಂದು ಹೇಳಿದ್ದಾರೆ. ಈ ವಿಚಾರಕ್ಕೆ ಪತ್ನಿ ಜಗಳ ಮಾಡಿದ್ದಾರೆ. ನಂತರ ಪತಿ ಸುಮ್ಮನಾಗಿ ಬೇಜಾರು ಮಾಡಿಕೊಳ್ಳಬೇಡ ಎಂದು ಪತ್ನಿಗೆ ಹೇಳಿ, ಮಗನನ್ನು ಕರೆದುಕೊಂಡು ಬೆಡ್ ರೂಮ್‌ಗೆ ತೆರಳಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಅಡುಗೆ ಕೆಲಸದ ಮಹಿಳೆ ಅಕ್ಕ ನಿಮ್ಮಿಬ್ಬರಿಗೂ ಊಟ ಕೊಡಲು ಹೇಳಿ ಹೋಗಿದ್ದಾರೆ ಎಂದಿದ್ದಾರೆ. ಎಲ್ಲಿಗೆ ಹೋಗಿದ್ದಾರೆಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಮೈತ್ರಿಯಿಂದ ಜೆಡಿಎಸ್‌ಗೆ ಭರ್ಜರಿ ಲಾಭ: ಎಚ್.ಡಿ.ಕುಮಾರಸ್ವಾಮಿಗೆ ಕೇಂದ್ರ ಸಚಿವ ಸ್ಥಾನ
ಸ್ಕೂಟರ್ ಜತೆಗೆ ಪತ್ನಿ ನಾಪತ್ತೆ: ಪತಿಯು ಪತ್ನಿ ಮೊಬೈಲ್ ನ ಎರಡು ಸಂಖ್ಯೆಗಳಿಗೂ ಕರೆ ಮಾಡಿದಾಗ ಸ್ವಿಚ್ ಆಫ್ ಬಂದಿದೆ. ಮನೆಯನ್ನು ಪರಿಶೀಲಿಸಿದಾಗ ಪತ್ನಿಯು ಮನೆಯಿಂದ ಹೊರಡುವ ಮುನ್ನ ಆಭರಣಗಳನ್ನು ಬೀರುವಿನಲ್ಲಿ ಇರಿಸಿರುವುದು ಕಂಡು ಬಂದಿದೆ. ಮನೆಯ ಹೊರೆಗೆ ಬಂದು ನೋಡಿದಾಗ ಸ್ಕೂಟರ್ ತೆಗೆದುಕೊಂಡು ಹೋಗಿರುವುದು ಗೊತ್ತಾಗಿದೆ.ಎಲ್ಲಕಡೆಹುಡುಕಾಡಿದರೂ ಪತ್ನಿ ಪತ್ತೆಯಾಗಿಲ್ಲ. ಹೀಗಾಗಿ ಮಹಾಲಕ್ಷ್ಮಿ ಠಾಣೆಗೆ ತೆರಳಿ ಪತ್ನಿ ನಾಪತ್ತೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ