ನೈತಿಕ ಪೊಲೀಸ್ ಗಿರಿ ಪ್ರಕರಣ/ ರಾಜಸ್ಥಾನದ ಭರತ್ ಪುರದಲ್ಲಿ ಪ್ರೇಮಿಗಳ ಮೇಲೆ ದಾಳಿ/ ಗೆಳೆಯನ ಜತೆ ಮಾತನಾಡುತ್ತಿದ್ದ ಯುವತಿ ದುಪ್ಪಟ್ಟಾ ಎಳೆದರು/ ಹಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದರೂ ಯಾರನ್ನೂ ಬಂಧಿಸಿಲ್ಲ
ಭರತ್ ಪುರ(ಮಾ. 15) ನೈತಿಕ ಪೊಲೀಸ್ ಗಿರಿ ಪ್ರಕರಣವೊಂದು ವರದಿಯಾಗಿದೆ. ಗೆಳೆಯನ ಜತೆ ಮಾತನಾಆಡುತ್ತಿದ್ಗದ ಯುವತಿ ಮೇಲೆ ಹಲ್ಲೆ ಮಾಡಿರುವ ತಂಡ ಆಕೆಯ ದುಪ್ಪಟ್ಟಾವನ್ನು ಎಳೆದಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಯುವತಿ ಸಹಾಯಕ್ಕಾಗಿ ಅಂಗಲಾಚಿದರೂ ಯಾರೊಬ್ಬರೂ ನೆರವಿಗೆ ಬಂದಿಲ್ಲ. ಯುವತಿ ಮತ್ತು ಆಕೆಯ ಸ್ನೇಹಿತ ಏಕಾಂತದಲ್ಲಿ ಮಾತನಾಡುತ್ತ ಇದ್ದರು ಈ ವೇಳೆ ಅಲ್ಲಿಗೆ ಧಾವಿಸಿದ ತಂಡ ಹಲ್ಲೆ ಮಾಡಲು ಮುಂದಾಗಿದೆ.
ಬಿಹಾರದಲ್ಲಿ ಜೋಡಿ ಮೇಲೆ ಎರಗಿದ್ದ ಕಿರಾತಕರು ಕೊನೆಗೂ ಸಿಕ್ಕಿಬಿದ್ದರು
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರೂ ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ. ಆರೋಪಿಗಳ ಹಿಂದೆ ಕೆಲ ಸಂಘಟನೆಗಳ ಕೈವಾಡ ಇದೆ ಎಂದು ಹೇಳಲಾಗಿದೆ.
ಉತ್ತರ ಪ್ರದೇಶದಲ್ಲಿಯೂ ಕೆಲ ದಿನಗಳ ಹಿಂದೆ ಇಂಥದ್ದೆ ಘಟನೆ ನಡೆದಿತ್ತು. ಯುವತಿ ಮೇಲೆ ದಾಳಿ ಮಾಡುತ್ತಿದ್ದಂತೆ ಗೆಳೆಯ ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಕಾಲು ಕಿತ್ತಿದ್ದಾನೆ. '2019 ರಲ್ಲಿಯೂ ಇಂಥದ್ದೆ ಪ್ರಕರಣ ನಡೆದಿದ್ದು ಬಸ್ ಸ್ಟಾಪ್ ನಲ್ಲಿದ್ದ ಮುಸ್ಲಿಂ ಜೋಡಿಯ ಮೆಲೆ ದುಷ್ಕರ್ಮಿಗಳ ತಂಡ ದಾಳಿ ಮಾಡಿತ್ತು.