ಚಿತ್ರದುರ್ಗ; ಮಹಿಳೆಯರಿಗೆ ನಗ್ನ ಪೋಟೋ ಕಳಿಸುತ್ತಿದ್ದ ಮಧ್ಯವಯಸ್ಕ!

Published : Nov 08, 2020, 10:55 PM ISTUpdated : Nov 08, 2020, 10:56 PM IST
ಚಿತ್ರದುರ್ಗ; ಮಹಿಳೆಯರಿಗೆ ನಗ್ನ ಪೋಟೋ ಕಳಿಸುತ್ತಿದ್ದ ಮಧ್ಯವಯಸ್ಕ!

ಸಾರಾಂಶ

ಇದೊಂದು ವಿಚಿತ್ರ ಪ್ರಕರಣ/ ಸಿಕ್ಕ ಸಿಕ್ಕ ಮೊಬೈಲ್‌ಗಳಿಗೆ ನಗ್ನ ಚಿತ್ರ ಕಳಿಸುತ್ತಿದ್ದ ಮಧ್ಯವಯಸ್ಕ/ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪ್ರಕರಣ/ ಆರೋಪಿಯನ್ನು  ಬಂಧಿಸಲಾಗಿದೆ

ಚಿತ್ರದುರ್ಗ  (ನ. 08)  ಇದೊಂದು ವಿಚಿತ್ರ ಪ್ರಕರಣ. ಚಳ್ಳಕೆರೆಯ  54   ವರ್ಷದ ವ್ಯಕ್ತಿ 120 ಮಹಿಳೆಯರು ಸೇರಿದಂತೆ ಇನ್ನೂರಕ್ಕೂ ಅಧಿಕ ಜನರಿಗೆ ಬೆತ್ತಲೆ ಪೋಟೋ ಕಳಿಸಿದ್ದಾನೆ

ಆರು ತಿಂಗಳ ಅವಧಿಯಲ್ಲಿ ಈ ಪುಣ್ಯಾತ್ಮ ನಿರಂತರವಾಗಿ ಈ ಕೆಲಸ ಮಾಡಿದ್ದಾನೆ.  ಆರೋಫಪಿ ಒ ರಾಮಕೃಷ್ಣ  ಎಂಬಾತನ ಬಂಧನ ಮಾಡಲಾಗಿದೆ. 

ವೆಬ್ ಸೀರಿಸ್‌ಗೆಂದು ಬೆತ್ತಲೆ ಪೋಟೋ ಶೂಟ್ ಮಾಡಿಸಿದರು!

ಚಳ್ಳಕೆರೆ ಭಾಗದ ನಿವಾಸಿಗಳು  ಗೊತ್ತಿಲ್ಲದ ನಂಬರ್ ನಿಂದ ಅಶ್ಲೀಲ ಚಿತ್ರಗಳೂ ಬರುತ್ತಿವೆ ಎಂದು ಆರೋಪಿಸಿದ್ದರು.  ಇದಾದ ಮೇಲೆ ಪೊಲೀಸರು ತನಿಖೆ ಆರಂಭಿಸಿದಾಗ ಆರೋಪಿ ಬಲೆಗೆ ಬಿದ್ದಿದ್ದಾನೆ.

ಆರಂಭದಲ್ಲಿ, ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ.   ಆದರೆ, ಶುಕ್ರವಾರ ಪೋನ್ ಆನ್ ಆಗಿದೆ. ಇದೆ ಮಾಹಿತಿ ಆಧರಿಸಿ ಆರೋಪಿಯನ್ನು ಬಲೆಗೆ ಕೆಡವಲಾಗಿದೆ. 

ಒಂದಷ್ಟು ನಂಬರ್ ಗಳನ್ನು ಡಯಲ್ ಮಾಡಿ ಅಶ್ಲೀಲ ಪೋಟೋ ಕಳಿಸುತ್ತಿದ್ದೆ ಎಂದು ಆರೋಪಿ ಒಪ್ಪಿಕೊಂಡಿದ್ದಾನೆ. ಯಾವ ಕಾರಣಕ್ಕೆ ಹೀಗೆ ಮಾಡಿದ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ವೃದ್ಧೆಯ ಕೇರ್ ಟೇಕರ್‌ನಿಂದಲೇ ₹31 ಲಕ್ಷ ಮೌಲ್ಯದ ಚಿನ್ನಾಭರಣ ಕಳವು: ಬಿಹಾರ ಮೂಲದ ಚಾಂದಿನಿ ಬಂಧನ!
ಈ ವರ್ತನೆ ಸರಿಯಲ್ಲ, ಹೈಕೋರ್ಟ್ ಪರಿಗಣಿಸುವ ಮೊದಲು ಕ್ಷಮೆ ಮುಖ್ಯ, ಪ್ರಜ್ವಲ್ ರೇವಣ್ಣ ಅರ್ಜಿಗೆ ಸುಪ್ರೀಂ ಕೆಂಡ!