ಪಾರ್ಟಿಗೆ ಗ್ರಾಹಕರನ್ನ ಸೆಳೆಯಲು 9 ಇ-ಮೇಲ್‌ ಬಳಸುತ್ತಿದ್ದ ಡ್ರಗ್ಸ್‌ ಕಿಂಗ್‌ಪಿನ್‌ ವೀರೇನ್‌

Kannadaprabha News   | Asianet News
Published : Oct 04, 2020, 07:47 AM ISTUpdated : Oct 04, 2020, 09:27 AM IST
ಪಾರ್ಟಿಗೆ ಗ್ರಾಹಕರನ್ನ ಸೆಳೆಯಲು 9 ಇ-ಮೇಲ್‌ ಬಳಸುತ್ತಿದ್ದ ಡ್ರಗ್ಸ್‌ ಕಿಂಗ್‌ಪಿನ್‌ ವೀರೇನ್‌

ಸಾರಾಂಶ

ಪಬ್‌, ಕ್ಲಬ್‌, ಹೋಟೆಲ್‌, ರೆಸಾರ್ಟ್‌ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಪಾರ್ಟಿ ಆಯೋಜಿಸುತ್ತಿದ್ದ ವೀರೇನ್‌| ಪಾರ್ಟಿಯಲ್ಲಿ ರಂಗೇರಿಸಲು ಬರುತ್ತಿದ್ದ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ| ಸೈಬರ್‌ ತಜ್ಞರ ಮೂಲಕ ಇ-ಮೇಲ್‌ ಪರಿಶೀಲನೆಗೆ ಮುಂದಾದ ಸಿಸಿಬಿ| 

ಬೆಂಗಳೂರು(ಅ.04): ಮಾದಕ ವಸ್ತು ಪ್ರಕರಣದ ಪ್ರಮುಖ ಆರೋಪಿ, ಪೇಜ್‌ ತ್ರಿ ಪಾರ್ಟಿ ಆಯೋಜನೆಯ ಕಿಂಗ್‌ಪಿನ್‌ ಎನ್ನಲಾದ ವೀರೇನ್‌ ಖನ್ನಾ ಗ್ರಾಹಕರನ್ನು ಸೆಳೆಯಲು ಒಂಬತ್ತು ಇ-ಮೇಲ್‌ ಐಡಿಗಳನ್ನು ಬಳಸುತ್ತಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

"

ವೀರೇನ್‌ ಪಬ್‌, ಕ್ಲಬ್‌, ಹೋಟೆಲ್‌, ರೆಸಾರ್ಟ್‌ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ಆಯೋಜಿಸುತ್ತಿದ್ದ ಪಾರ್ಟಿಗಳನ್ನು ರಂಗೇರಿಸಲು ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಅವರು ಬರುತ್ತಿದ್ದರು. ಪ್ರತೀಕ್‌ ಶೆಟ್ಟಿ, ರವಿಶಂಕರ್‌ ಹಾಗೂ ರಾಹುಲ್‌ ಅವರಿಂದ ಡ್ರಗ್ಸ್‌ ತರಿಸಿಕೊಳ್ಳುತ್ತಿದ್ದ ಎಂದು ಆರೋಪ ಬಂದಿದೆ.

ಮಾದಕ ವಸ್ತು ಮಾರಾಟ ಜಾಲ: ಖನ್ನಾ ಮಂಪರು ಪರೀಕ್ಷೆಗೆ ಕೋರ್ಟ್‌ ಸಮ್ಮತಿ

ಇಂತಹ ಪಾರ್ಟಿಗಳಿಗೆ ಗ್ರಾಹಕರ ಸಂಘಟಿಸಲು ಸಾಮಾಜಿಕ ಮಾಧ್ಯಮಗಳ ಮೂಲಕ ವೀರೇನ್‌ ಪ್ರಚಾರ ನಡೆಸುತ್ತಿದ್ದ. ಇದಕ್ಕಾಗಿ ಒಂಬತ್ತು ಇ-ಮೇಲ್‌ ಐಡಿಗಳನ್ನು ಆತ ಬಳಸುತ್ತಿದ್ದಾನೆ. ಇದರಲ್ಲಿ ಡ್ರಗ್ಸ್‌ ಪಾರ್ಟಿಗಳಿಗೆ ಸಂಬಂಧಿಸಿದ ಗೌಪ್ಯ ಮಾಹಿತಿ ಅಡಕವಾಗಿದೆ. ಈ ಪೈಕಿ ಕೇವಲ ಐದು ಇ-ಮೇಲ್‌ ಐಡಿ ಬಗ್ಗೆ ಮಾತ್ರ ವೀರೇನ್‌ ಬಾಯ್ಬಿಟ್ಟಿದ್ದಾನೆ. ಉಳಿದವುಗಳ ಇ-ಮೇಲ್‌ಗಳ ಬಗ್ಗೆ ಆತ ತುಟಿ ಬಿಚ್ಚುತ್ತಿಲ್ಲ. ಹೀಗಾಗಿ ಸೈಬರ್‌ ತಜ್ಞರ ಮೂಲಕ ಇ-ಮೇಲ್‌ ಪರಿಶೀಲನೆಗೆ ಸಿಸಿಬಿ ಮುಂದಾಗಿದೆ ಎಂದು ತಿಳಿದು ಬಂದಿದೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ಕೋಲಾರ: ಅಪ್ಪ- ಅಮ್ಮನ ವಿಚ್ಚೇದನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!