Blackmail: ಸಚಿವ ಸೋಮಶೇಖರ್‌ ಪುತ್ರನ ಬ್ಲ್ಯಾಕ್‌ಮೇಲ್‌ ಕೇಸ್‌: ಸಿಸಿಬಿ ತನಿಖೆ ಚುರುಕು

By Suvarna NewsFirst Published Jan 10, 2022, 11:27 AM IST
Highlights

*  ಸ್ಕ್ರೀನ್ ಶಾಟ್ ಸಮೇತ ಹೇಳಿಕೆ ದಾಖಲು
*  ಹೇಳಿಕೆ ನೀಡಿದ ಇಂಡಿ ಶಾಸಕರ ಪುತ್ರಿ
*  ಟೆಕ್ನಿಕಲ್ ಡಿಜಿಟಲ್ ಎವಿಡೆನ್ಸ್ ಮುಂದಿಟ್ಟು ಸಿಸಿಬಿ ಪೊಲೀಸರ ತನಿಖೆ
 

ಬೆಂಗಳೂರು(ಜ.10):  ಸಹಕಾರ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್(ST Somashekhar) ಪುತ್ರನಿಗೆ ಬ್ಲ್ಯಾಕ್‌ಮೇಲ್‌(Blackmail) ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು(CCB Police) ಇದುವರೆಗೆ ಎಂಟು ಮಂದಿಯಿಂದ ಹೇಳಿಕೆಯನ್ನ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.   ಸಚಿವ ಎಸ್.ಟಿ ಸೋಮಶೇಖರ್ ಅವರ ಪಿಎಗಳಾದ ಭಾನುಪ್ರಕಾಶ್ ಶ್ರೀನಿವಾಸ್ ಗೌಡ, ಸಚಿವ ಎಸ್.ಟಿ.ಸೋಮಶೇಖರ್, ಸೋಮಶೇಖರ್ ಅವರ ಪುತ್ರ ನಿಶಾಂತ್,  ವಿಜಯಪುರ ಜಿಲ್ಲೆಯ ಇಂಡಿ ಶಾಸಕ ಯಶವಂತರಾಯ್ ಪಾಟೀಲ್, ಯಶವಂತರಾಯ ಅವರ ಪುತ್ರಿ ಹೇಳಿಕೆ(ಪೊನ್ ಕಾಂಟಾಕ್ಟ್ ನಿಂದ) ಆರೋಪಿ ರಾಹುಲ್ ಭಟ್‌ ಹಾಗೂ ರಾಹುಲ್ ಭಟ್‌ಗೆ ಸಿಮ್ ಕೊಟ್ಟಿದ್ದ ರಾಕೇಶ್ ಅಪ್ಪಣ್ಣನವರ್‌ ಅವರಿಂದ ಹೇಳಿಕೆಯನ್ನ ದಾಖಲಿಸಿಕೊಳ್ಳಲಾಗಿದೆ.

ಸಚಿವ ಎಸ್.ಟಿ ಸೋಮಶೇಖರ್ ಪಿಎಗಳಾದ ಭಾನುಪ್ರಕಾಶ್ ಶ್ರೀನಿವಾಸಗೌಡರ ಮೊಬೈಲ್‌ಗೆ ವಿಡಿಯೋ ಸಂದೇಶವೊಂದು ಬಂದಿತ್ತು. ಈ‌ ಬಗ್ಗೆ ನಿಶಾಂತ್ ದೂರಿನಲ್ಲಿ(Complaint) ಉಲ್ಲೇಖಿಸಿದ್ದಾರೆ. ಎಫ್‌ಐಆರ್‌(FIR) ನಂತರ ಸಚಿವ ಎಸ್.ಟಿ ಸೋಮಶೇಖರ್, ನಿಶಾಂತ್ ಪಿಎ ಗಳಾದ ಶ್ರೀನಿವಾಸ್ ಗೌಡ ಭಾನುಪ್ರಕಾಶ್ ಹೇಳಿಕೆಯನ್ನ ದಾಖಲಿಸಿಕೊಳ್ಳಲಾಗಿದೆ. 

ಅಪರಿಚಿತ ಸಂಖ್ಯೆಯಿಂದ ಬಂದಿದ್ದ ಸ್ಕ್ರೀನ್ ಶಾಟ್ ಸಮೇತ ಹೇಳಿಕೆಯನ್ನ ದಾಖಲಿಸಿಕೊಳ್ಳಲಾಗಿದೆ. ನಂತರ ಇಂಡಿ(Indi) ಶಾಸಕ ಯಶವಂತ ರಾಯ್ ಪಾಟೀಲ್‌(Yashvantaraya PAtil) ಅವರಿಂದ ಪುತ್ರಿ ಮೊಬೈಲ್ ಸಂಖ್ಯೆ ಬಗ್ಗೆ ಹೇಳಿಕೆಯನ್ನ ಪಡೆಯಲಾಗಿದೆ. ಈ ಬಗ್ಗೆ ಶಾಸಕರ ಪುತ್ರಿಯೂ ಕೂಡ ಸಿಮ್ ಕಾರ್ಡ್ ಬಗ್ಗೆ ಹೇಳಿಕೆಯನ್ನ ನೀಡಿದ್ದಾಳೆ. 

Blackmail: ಸಚಿವ ಎಸ್‌ ಟಿ ಸೋಮಶೇಖರ್ ಪುತ್ರನಿಗೆ ಬ್ಲಾಕ್‌ಮೇಲ್, ಜ್ಯೋತಿಷಿ ಮಗ ಅರೆಸ್ಟ್

ಸದ್ಯ ಸಿಸಿಬಿ ಕಸ್ಟಡಿಯಲ್ಲಿರುವ ಆರೋಪಿ ರಾಹುಲ್ ಭಟ್‌ನನ್ನ(Rahul Bhat) ಐದು ದಿನಗಳ ಕಾಲ ಹೆಚ್ಚಿನ ವಿಚಾರಣೆಗೆ ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಸಿಸಿಬಿ ಎಸಿಪಿ ಜಗನ್ನಾಥ್ ರೈ ನೇತೃತ್ವದಲ್ಲಿ ಆರೋಪಿ ರಾಹುಲ್ ಭಟ್ ವಿಚಾರಣೆ(Investigation) ನಡೆಯುತ್ತಿದೆ. ಸಿಸಿಬಿ ಎಸಿಪಿ ಜಗನ್ನಾಥ್ ರೈ ಕೇಳಿದ ಬಹುತೇಕ ಪ್ರಶ್ನೆಗಳಿಗೆ ಆರೋಪಿ ರಾಹುಲ್ ಭಟ್‌ ನೋ ಆನ್ಸರ್ ಎಂದು ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಟೆಕ್ನಿಕಲ್ ಡಿಜಿಟಲ್ ಎವಿಡೆನ್ಸ್ ಮುಂದಿಟ್ಟು ರಾಹುಲ್ ಭಟ್‌ಗೆ ಪ್ರಶ್ನೆಗಳನ್ನ ಕೇಳಲಾಗಿದೆ. ನಿಶಾಂತ್ ಹಾಗೂ ಪಿಎ ಗಳಾದ ಭಾನುಪ್ರಕಾಶ್ ಶ್ರೀನಿವಾಸ್ ಗೌಡ ಮೊಬೈಲ್‌ಗೆ ಬಂದಿದ್ದ ಮೆಸೇಜ್‌ಗಳನ್ನ ಮುಂದಿಟ್ಟುಕೊಂಡು ಸಿಸಿಬಿ ಪೊಲೀಸರು ಪ್ರಶ್ನೆ ಮಾಡುತ್ತಿದ್ದಾರೆ. ನಿನ್ನೆ(ಭಾನುವಾರ) ತಡರಾತ್ರಿ ವರೆಗೂ ಎಸಿಪಿ ಜಗನ್ನಾಥ್ ರೈ & ಟೀಂ ರಾಹುಲ್ ಭಟ್‌ನನ್ನ ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  

ಸೋಮಶೇಖರ್‌ ಪುತ್ರನ ಬ್ಲಾಕ್ ಮೇಲ್ ಕೇಸ್‌ನಲ್ಲಿ ಶಾಸಕರ ಪುತ್ರಿಯ ಹೆಸರು, ಸಿಮ್ ಕೊಟ್ಟಿದ್ದೆ ತಪ್ಪಾಯ್ತು!

ಸಚಿವ ಎಸ್‌ಟಿ ಸೋಮಶೇಖರ್ ಪುತ್ರನಿಗೆ ಬ್ಲಾಕ್ ಮೇಲ್ ಮಾಡಿದ ಆರೋಪದ ಮೇಲೆ ಆರ್ ಟಿನಗರದ ಜ್ಯೋತಿಷಿ ಚಂದ್ರಶೇಖರ್ ಸ್ವಾಮಿಯ ಪುತ್ರನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

Blackmail: ಚಾಟಿಂಗ್ ರುಚಿ ಹತ್ತಿಸಿ ವೈದ್ಯನ ಬಳಿ ಲಕ್ಷ ಲಕ್ಷ ಪೀಕಿದ ಆಂಟಿಯರು!

ಅಶ್ಲೀಲ ವಿಡಿಯೋ ಇದೆ, ಹಣ ಕೊಡಿ ಇಲ್ಲವಾದರೆ  ಸೋಷಿಯಲ್ (Social Media) ಮೀಡಿಯಾದಲ್ಲಿ ಹರಿಯ ಬಿಡುವುದಾಗಿ ಲ್, ಸಚಿವರ ಪುತ್ರ ನಿಶಾಂತ್‌ಗೆ  ಬ್ಲಾಕ್‌ಮೇಲ್ ಮಾಡುತ್ತಿದ್ದ ಆರೋಪಿಗಳ ಬಂಧನವಾಗಿದೆ. ಸಚಿವರ ಪುತ್ರ ನಿಶಾಂತ್ ದೂರನ್ನು ಆಧರಿಸಿ ಇಬ್ಬರನ್ನು ಬಂಧಿಸಲಾಗಿದ್ದು ಮತ್ತಷ್ಟು ಮಾಹಿತಿಗಳು ಹೊರಕ್ಕೆ ಬಂದಿವೆ.

ಪ್ರರಣದಲ್ಲಿ ಶಾಸಕರ ಪುತ್ರಿಯ ಹೆಸರು ಕೇಳಿ ಬಂದಿದೆ ವೀಡಿಯೊ ಕಳಿಸಿ, ಬ್ಲಾಕ್ ಮೇಲ್ ನಡೆದಿರೊ ಬಗ್ಗೆ ಶಾಸಕರ ಪುತ್ರಿಗೆ ಏನೂ ಗೊತ್ತಿಲ್ಲ ಎಂಬುದು ಮಾಹಿತಿ. ಇದೆ ವಿಚಾರಕ್ಕೆ ಸಂಬಂಧಿಸಿ ಸಚಿವ ಸೋಮಶೇಖರ್ ಅವರನ್ನು ಇಂಡಿ ಶಾಸಕ ಯಶ್ವಂತರಾಯ ಪಾಟೀಲ್‌ ಭೇಟಿ ಮಾಡಿದ್ದರು.

ಪ್ರಕರಣದಲ್ಲಿ ಜ್ಯೋತಿಷಿ ಪುತ್ರ ರಾಹುಲ್ ಭಟ್ ಜತೆ  ರಾಕೇಶ್ ಅಣ್ಣಪ್ಪ ಎಂಬಾತನ ಹೆಸರು ಕೇಳಿ ಬಂದಿದೆ. ರಾಕೇಶ್ ಅಣ್ಣಪ್ಪ ಹಾಗು ರಾಹುಲ್ ಭಟ್ ಆಪ್ತ ಸ್ನೇಹಿತರು. ರಾಕೇಶ್ ಅಣ್ಣಪ್ಪನಿಂದ ಮೊಬೈಲ್ ಪಡೆದು  ವಿಡಿಯೋ ಕಳಿಸಿದ್ದಾನೆ ಎನ್ನಲಾಗಿದೆ. ಮೊಬೈಲ್ ಸಿಬ್ ಶಾಸಕರ ಪುತ್ರಿಯ ಹೆಸರಿನಲ್ಲಿತ್ತು ಎನ್ನುವುದು  ಪ್ರಕರಣದ ಬಗ್ಗೆ ಮತ್ತಷ್ಟು ಗೊಂದಲ ಹುಟ್ಟುಹಾಕಿದೆ. 
 

click me!