
ಬೆಂಗಳೂರು (ನ.12): ರಾಜಧಾನಿ ಬೆಂಗಳೂರಿನಲ್ಲಿ ಪೈಶಾಚಿಕ ಕೃತ್ಯ ನಡೆದಿದೆ. ವಿಶೇಷ ಚೇತನ ಯುವತಿಯ ಮೇಲೆ ಅ*ತ್ಯಾಚಾರಕ್ಕೆ ಯತ್ನಿಸಿ ಜನರಿಂದ ಧರ್ಮದೇಟು ತಿಂದಿದ್ದಾನೆ. ಮಾತು ಬಾರದ, ಕಾಲು ಸ್ವಾಧೀನವಿಲ್ಲದ ಯುವತಿಯ ಮೇಲೆ ಕಾಮುಕ ಕಣ್ಣುಹಾಕಿದ್ದಾನೆ. ಸರಿಯಾದ ಬೆಳವಣಿಗೆ ಇಲ್ಲದೆ ಇನ್ನು ಮಗುವಿನಂತೆ ಇರುವ ವಿಶೇಷ ಚೇತನ ಯುವತಿಯನ್ನು ಮನೆಯಲ್ಲಿ ಯಾರೂ ಇಲ್ಲದಾಗ ಅ*ತ್ಯಾಚಾರ ಮಾಡಲು ಯತ್ನಿಸಿದ್ದಾನೆ.
ನ.6 ರಂದು ಆಡುಗೋಡಿಯ ಎಂಆರ್ ನಗರದಲ್ಲಿ ವಿಘ್ನೇಶ್ ಅಲಿಯಾಸ್ ದಾಡು ಎಂಬಾತನಿಂದ ಕೃತ್ಯ ನಡೆದಿದೆ. ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಕಾಮುಕನಿಗೆ ಧರ್ಮದೇಟು ನೀಡಿದ್ದು, ಏರಿಯಾದ ರಸ್ತೆಯಲ್ಲೇ ಆತನನ್ನು ಉರುಳಿಸಿ ಹಲ್ಲೆ ಮಾಡಿದ್ದಾರೆ. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ನವಂಬರ್ 9 ರಂದು ಮದುವೆಗೆ ಎಂದು ಯುವತಿಯ ಕುಟುಂಬಸ್ಥರು ತೆರಳಿದ್ದರು. ಈ ವೇಳೆ ವಿಶೇಷ ಚೇತನ ಯುವತಿಯನ್ನ ಮನೆಯಲ್ಲೇ ಬಿಟ್ಟು ತೆರಳಿದ್ದರು. ಯುವತಿ ಒಳಗಿದ್ದರೆ, ಹೊರಗಿನಿಂದ ಚಿಲಕ ಹಾಕಿ ಕುಟುಂಬಸ್ಥರು ತೆರಳಿದ್ದರು. ಬೆಳಗ್ಗೆ 11 ಗಂಟೆಗೆ ವೇಳೆಗೆ ಕಾಮುಕ ವಿಘ್ನೇಶ್ ಮನೆ ಬಳಿ ಬಂದಿದ್ದ. ಗಾಂಜಾ ನಶೆಯಲ್ಲಿದ್ದವ ಚಿಲಕ ತೆಗೆದು ಮನೆ ಒಳಗೆ ನುಗ್ಗಿದ್ದಾನೆ. ಆ ಬಳಿಕ ಮನೆಯ ಒಳಗಿನಿಂದ ಚಿಲಕ ಹಾಕಿಕೊಂಡಿದ್ದ. ಈ ಹಂತದಲ್ಲಿ ಮಗಳನ್ನು ನೋಡಿಕೊಂಡು ಹೋಗೋಣ ಎಂದು ಆಕೆಯ ತಾಯಿ ಬಂದಿದ್ದಾರೆ. ಈ ಹಂತದಲ್ಲಿ ಮನೆಯ ಒಳಗಿನಿಂದ ಚಿಲಕ ಹಾಕಿದ್ದು ಗೊತ್ತಾಗಿದೆ.
ಏನೋ ಗಂಭೀರ ಸಮಸ್ಯೆ ಆಗಿದೆ ಎಂದು ಅರಿತ ತಾಯಿ, ಕಾಲಿನಿಂದ ಒದ್ದು ಬಾಗಿಲು ಒಡೆದಿದ್ದಾಳೆ. ಈ ವೇಳೆ ಮಗಳ ಸ್ಥಿತಿ ಕಂಡು ಆಕೆ ಬೆಚ್ಚಿಬಿದ್ದಿದ್ದಳು. ಮಗಳ ದೇಹದ ಮೇಲೆ ಬಟ್ಟೆಯೇ ಇದ್ದಿರಲಿಲ್ಲ.ಕಾಮುಕ ವಿಘ್ನೇಶ್ ಬಾಗಿಲ ಬಳಿ ಅವಿತು ಕುಳಿತಿದ್ದ. ವಿಶೇಷ ಚೇತನ ಯುವತಿ ತಾಯಿ ನೋಡ್ತಿದ್ದಂತೆ ಒಳ ಉಡುಪು ಧರಿಸಿ ಎಸ್ಕೇಪ್ ಆಗಲು ಯತ್ನಿಸಿದ. ತಕ್ಷಣ ಸ್ಥಳೀಯರೆಲ್ಲ ಆತನನ್ನ ಹಿಡಿದು ಥಳಿಸಿದ್ದಾರೆ. ಆ ನಂತರ ಪೊಲೀಸರಿಗೆ ಒಪ್ಪಿಸಿ ಕುಟುಂಬದವರು ದೂರು ನೀಡಿದ್ದಾರೆ.
ಆಡುಗೋಡಿ ಪೊಲೀಸರಿಂದ ಆರೋಪಿ ಬಂಧನವಾಗಿದ್ದು, ಘಟನೆಯಿಂದ ಸ್ಥಳೀಯ ಜನ ರೊಚ್ಚಿಗೆದ್ದಿದ್ದಾರೆ. ಇವತ್ತು ಆ ಮಗುವಿಗೆ ಈ ರೀತಿ ಮಾಡಿದ್ದಾನೆ ನಾಳೆ ನಮ್ಮ ಮನೆಯ ಮಕ್ಕಳಿಗೂ ಇದೇ ರೀತಿ ಮಾಡಬಹುದು. ಆತನಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ