ಬೆಂಗಳೂರು: ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡಿದ್ದ ಕ್ರಿಮಿನಲ್ ರೋಷನ್ ಅಹಮದ್ ಬಂಧನ

Published : Oct 27, 2025, 12:45 PM IST
Bengaluru Rowdy roshan ahmed Arrested CCB Police for Illegal Pistol CCB Police

ಸಾರಾಂಶ

ಬೆಂಗಳೂರಿನಲ್ಲಿ ಅಕ್ರಮವಾಗಿ ಪಿಸ್ತൂಲ್ ಇಟ್ಟುಕೊಂಡಿದ್ದ ರೌಡಿ ರೋಷನ್ ಅಹಮದ್‌ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಒಂದು ಪಿಸ್ತೂಲ್ ಮತ್ತು ನಾಲ್ಕು ಸಜೀವ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಈತ ಈ ಹಿಂದೆ ಡ್ರಗ್ ಪೆಡ್ಲಿಂಗ್ ಪ್ರಕರಣದಲ್ಲೂ ಭಾಗಿಯಾಗಿದ್ದ.

ಬೆಂಗಳೂರು, (ಅ.27): ಸಿಲಿಕಾನ್ ಸಿಟಿ ರೌಡಿಗಳ ಅಡ್ಡೆಯಾಗುತ್ತಿದೆಯೇ? ಸಣ್ಣ ವಿಚಾರಕ್ಕೂ ಗುಂಡಿನ ದಾಳಿ ಮಾಮೂಲಿ! ಪೊಲೀಸರ ಭಯವಿಲ್ಲದೇ ಪರವಾನಗಿ ಇಲ್ಲದ ಪಿಸ್ತೂಲ್ ಹಿಡಿದು ತಿರುಗುತ್ತಿರುವ ರೌಡಿಗಳಿಗೆ ಸಿಸಿಬಿ ಒಸಿ ಡಬ್ಲ್ಯೂ ಪೊಲೀಸರು ಬಿಗ್ ಶಾಕ್ ನೀಡಿದ್ದಾರೆ.

ಪಿಸ್ತೂಲ್ ಜೊತೆ ನಾಲ್ಕು ಜೀವಂತ ಗುಂಡು ವಶಕ್ಕೆ

ಅಕ್ರಮವಾಗಿ ಪಿಸ್ತೂಲ್ ಇಟ್ಟುಕೊಂಡಿದ್ದ ಆರೋಪಿ ರೋಷನ್ ಅಹಮದ್ ಅಲಿಯಾಸ್ ಬಬ್ಬನ್ ಬಂಧಿಸಲಾಗಿದೆ. ಒಂದು ಅಕ್ರಮ ಪಿಸ್ತೂಲ್ ಮತ್ತು 4 ಸಜೀವ ಗುಂಡುಗಳು ವಶಪಡಿಸಿಕೊಂಡಿದ್ದಾರೆ. ಈ ಹಿಂದೆ ಡ್ರಗ್ ಪೆಡ್ಲಿಂಗ್ ಕೇಸ್‌ನಲ್ಲಿ ಮೈಕೋ ಲೇಔಟ್ ಪೊಲೀಸರ ಬಲೆಗೆ ಬಿದ್ದಿದ್ದ ಬಬ್ಬನ್, ಡ್ರಗ್ ವ್ಯಾಪಾರದ ಜೊತೆಗೆ ಮಧ್ಯಪ್ರದೇಶದಿಂದ ಅಕ್ರಮವಾಗಿ ಪಿಸ್ತೂಲ್ ತಂದಿದ್ದ ಮಾಹಿತಿ ಆಧಾರದಲ್ಲಿ ಸಿಕ್ಕಿಬಿದ್ದಿದ್ದಾನೆ.

ಬೆಂಗಳೂರು ಪೊಲೀಸ್ ಅಲರ್ಟ್

ಪೊಲೀಸರು ರೋಷನ್ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಿದಾಗ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ. ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ನಗರದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳ ಹಾವಳಿ ತಡೆಯಲು ಪೊಲೀಸರು ಅಲರ್ಟ್ ಮೋಡ್‌ನಲ್ಲಿದ್ದಾರೆ. ರೌಡಿಗಳಿಗೆ ಇದು ಎಚ್ಚರಿಕೆಯ ಗಂಟೆ!

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
ಕೆಲಸ ಇಲ್ಲದ ಗಂಡನಿಗೆ ಪತ್ನಿ ಶೀಲದ ಮೇಲೆ ಶಂಕೆ: ನಿದ್ರೆಯಲ್ಲಿದ್ದ ಮಗಳ ಕತ್ತು ಸೀಳಿದ ಪತಿ