ಕಮೆಂಟ್ ಮಾಡಿದ್ದ  ಬಿಗ್ ಬಾಸ್ ಪ್ರಥಮ್‌ಗೆ ಸಂಕಷ್ಟ, ಉತ್ತರ ಕೊಡ್ಲೇ ಬೇಕು!

By Suvarna NewsFirst Published Aug 18, 2020, 8:08 PM IST
Highlights

ಪ್ರಥಮ್ ಗೆ ಹಲಸೂರು ಗೇಟ್ ಪೊಲೀಸರಿಂದ ನೋಟಿಸ್/ 7 ದಿನದೊಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್/ ಡಿಜೆ ಹಳ್ಳಿ ಗಲಭೆ ಪ್ರಕರಣ ಟ್ರೋಲ್ ವಿಡಿಯೋಗೆ ಕಮೆಂಟ್ ಮಾಡಿದ್ದ ಪ್ರಥಮ್/

ಬೆಂಗಳೂರು (ಆ.18): ಬಿಗ್  ಬಾಸ್ ಪ್ರಥಮ್ ಗೆ  ಪ್ರಥಮ್ ಗೆ ಹಲಸೂರು ಗೇಟ್ ಪೊಲೀಸರು ನೋಟಿಸ್ ನೀಡಿದ್ದಾರೆ. 7 ದಿನದೊಳಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.

ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದ್ದ ಟ್ರೋಲ್ ವಿಡಿಯೋಗೆ ಕಮೆಂಟ್ ಮಾಡಿದ್ದ ಪ್ರಥಮ್ ವಿರುದ್ಧ ದೂರು ದಾಖಲಾಗಿತ್ತು. ಪ್ರಥಮ್ ವಿರುದ್ಧ ಹಲಸೂರು ಗೇಟ್ ಠಾಣೆಯಲ್ಲಿ ದೂರು ದಾಖಲಿಸಿದ್ದ ಎಸ್ ಡಿ ಪಿ ಐ ನ ಉಮರ್ ಫಾರೂಕ್ ದೂರು ದಾಖಲಿಸಿದ್ದರು. ಸಮುದಾಯಕ್ಕೆ  ಅವಹೇಳನ ಮಾಡಿದ್ದಾರೆಂದು ಕೇಸ್ ದಾಖಲಾಗಿತ್ತು.

ಎಂದೂ ಹುಟ್ಟುಹಬ್ಬ ಆಚರಿಸದ ಹಿರಿಯ ನಟನಿಂದ ಕೇಕ್ ಕಟ್‌ ಮಾಡಿಸಿದ ಪ್ರಥಮ್!

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಸೇರಿದಂತೆ ಇನ್ನಿತರ ಪರಿಚ್ಛೇದಗಳಡಿ ಪ್ರಥಮ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿತ್ತು. ವಿಚಾರಣೆಗೆ ಬರುವಂತೆ ಆರೋಪಿಗೆ ಶೀಘ್ರವೇ ನೋಟಿಸ್‌ ನೀಡಲಾಗುತ್ತದೆ ಎಂದು ಅಧಿಕಾರಿಗಳು ಈ ಮೊದಲೆ ಹೇಳಿದ್ದು ಈಗ ನೋಟಿಸ್ ನೀಡಿದ್ದು ಪ್ರಥಮ್ ಉತ್ತರ ನೀಡಲೇಬೇಕಾಗಿದೆ.

ಫೆಸ್ ಬುಕ್ ಪೋಸ್ಟ್ ಕಾರಣಕ್ಕೆ ಹುಟ್ಟಿಕೊಂಡ ಬೆಂಗಳೂರು ಗಲಭೆ ಸಾರ್ವಜನಿಕ ಆಸ್ತಿ ಹಾನಿಗೂ ಕಾರಣವಾಗಿತ್ತು. ಕಿಡಿಗೇಡಿಗಳು ಪೊಲೀಸ್ ಠಾಣೆಯ ಮೇಲೂ ದಾಳಿ ಮಾಡಿದ್ದರು.

click me!