
ಬೆಂಗಳೂರು[ಫೆ.23]: ಹದಿನಾರು ವರ್ಷದ ಪೋರನಿಗೆ 19 ವರ್ಷದ ಯುವತಿಯನ್ನು ಕೊಟ್ಟು ಆತನ ಪೋಷಕರೇ ವಿವಾಹ ಮಾಡಿಸಿರುವ ಅಪರೂಪದ ಬೆಳಕಿಗೆ ಬಂದಿದೆ.
19 ವರ್ಷದ ಯುವತಿ ಹಾಗೂ ಬಾಲಕನ ಪೋಷಕರ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆ ಅಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು.
ಈ ವಿಚಾರ ತಿಳಿದ ಬನಶಂಕರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಚೇರಿ ಅಧಿಕಾರಿಗಳು ಮತ್ತು ಪೊಲೀಸರು ಬಾಲ್ಯ ವಿವಾಹಿತರನ್ನು ಬೇರ್ಪಡಿಸಿ, ಬಾಲಕನನ್ನು ರಕ್ಷಿಸಿ ಬಾಲಮಂದಿರಕ್ಕೆ ಕಳುಹಿಸಿದ್ದಾರೆ. ಬಾಲಕ ಮತ್ತು ಯುವತಿ ಮೂಲತಃ ನೇಪಾಳದ ಮೂಲದವರಾಗಿದ್ದಾರೆ. ಬಾಲಕನ ಪೋಷಕರಾದ ಮಾನಸಿಂಗ್ ಮತ್ತು ಲಕ್ಷ್ಮೇಸಿಂಗ್ ಹಲವು ವರ್ಷಗಳ ಹಿಂದೆಯೇ ನಗರಕ್ಕೆ ಬಂದು ಮೈಕೋಲೇಔಟ್‌ನ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಮಾನಸಿಂಗ್ ಆಟೋರಿಕ್ಷಾ ಓಡಿಸುತ್ತಿದ್ದು, ಲಕ್ಷ್ಮೀ ಸಿಂಗ್ ಮನೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇವರ ಪುತ್ರ ಎಂಟನೇ ಎಂಟನೇ ತರಗತಿ ವ್ಯಾಸಂಗ ಅರ್ಧಕ್ಕೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಗ್ಯಾಸ್ ಏಜೆನ್ಸಿಯಲ್ಲಿ ಸಿಲಿಂಡರ್ ಡೆಲಿವರಿ ಕೆಲಸ ಮಾಡಿಕೊಂಡಿದ್ದ.
ಯುವತಿ ಸಹ ನೇಪಾಳ ಮೂಲದವರಾಗಿದ್ದು, ಆಕೆಗೆ ಪೋಷಕರಿಲ್ಲ. ಪುಟ್ಟೇನಹಳ್ಳಿಯಲ್ಲಿ ತನ್ನ ಸಂಬಂಧಿ ಮನೆಯಲ್ಲಿದ್ದಳು. ಹತ್ತನೇ ತರಗತಿವರೆಗೆ ವ್ಯಾಸಂಗ ಮಾಡಿದ್ದು, ಮನೆ ಕೆಲಸ ಮಾಡುತ್ತಿದ್ದಳು. ಯುವತಿ ಬಾಲಕನಿಗೆ ದೂರದ ಸಂಬಂಧಿಯಾಗಿದ್ದು, ಆರು ತಿಂಗಳಿಂದ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರ ಬಾಲಕನ ಪೋಷಕರ ಕಿವಿಗೆ ಬಿದ್ದಿತ್ತು. ಬಳಿಕ ಇಬ್ಬರಿಗೂ ಫೆ.15ರಂದು ವಿವಾಹ ಮಾಡಿಸಿದ್ದರು. ಈ ವಿಷಯ ತಿಳಿದ ಸ್ಥಳೀಯರೊಬ್ಬರು ಫೆ.19ರಂದು ಮಕ್ಕಳ ಸಹಾಯವಾಣಿಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಬನಶಂಕರಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಕಚೇರಿಯ ಅಧಿಕಾರಿಗಳ ತಂಡ ಹಾಗೂ ಪುಟ್ಟೇನಹಳ್ಳಿ ಪೊಲೀಸರು ಮೈಕೋಲೇಔಟ್‌ನಲ್ಲಿರುವ ಬಾಲಕನ ಮನೆಗೆ ಭೇಟಿ ನೀಡಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ತಮ್ಮ ನಮ್ಮ ಸಂಪ್ರಾದಾಯದಂತೆ ಮದುವೆ ಮಾಡಿಸಿರುವುದಾಗಿ ಹೇಳಿಕೆ ನೀಡಿದ್ದಾರೆ. ಬಾಲಕ ಮತ್ತು ಯುವತಿ ಬಲವಂತವಾಗಿ ವಿವಾಹ ಮಾಡಿಸಿದರು ಎಂದು ಹೇಳಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ