ಕಾರು ಬುಕ್ ಮಾಡಿ ಕದ್ದೊಯ್ದಿದ್ದ ಖತರ್ನಾಕ್ ಕಳ್ಳ ಅರೆಸ್ಟ್

Suvarna News   | Asianet News
Published : Jan 07, 2020, 12:14 PM IST
ಕಾರು ಬುಕ್ ಮಾಡಿ ಕದ್ದೊಯ್ದಿದ್ದ ಖತರ್ನಾಕ್ ಕಳ್ಳ ಅರೆಸ್ಟ್

ಸಾರಾಂಶ

ಜಸ್ಟ್ ಡಯಲ್ ಮೂಲಕ ಟ್ರಾವೆಲ್ಸ್ ಏಜೆನ್ಸಿಗೆ ಸೇರಿದ್ದ ಕಾರು ಬುಕ್ ಮಾಡಿ ಕದ್ದೊಯ್ದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಕದ್ದ ಕಾರನ್ನು ಆರೋಪಿಯಿಂದ ವಶಕ್ಕೆ ಪಡೆಯಲಾಗಿದೆ.   

ಬೆಂಗಳೂರು [ಜ.07]: ಜಸ್ಟ್ ಡಯಲ್ ಮೂಲಕ ಟ್ರಾವೆಲ್ಸ್ ಏಜೆನ್ಸಿಗೆ ಸೇರಿದ್ದ 22 ಲಕ್ಷ ರು. ಮೌಲ್ಯದ ಇನ್ನೋವಾ ಕ್ರಿಸ್ಟ್ ಕಾರು ಬುಕ್ ಮಾಡಿ ಪರಾರಿಯಾಗಿದ್ದವನ್ನು ಬಂಧಿಸಲಾಗಿದೆ. 

ದಾಸನಪುರದ ಹುನುಂತೇಗೌಡ ಪಾಳ್ಯ ನಿವಾಸಿ ಅರುಣ್ ಕುಮಾರ್ ಎಂಬುವವರಿಗೆ ಸೇರಿದ್ದ ಕಾರನ್ನು ಕಳ್ಳತನ ಮಾಡಿದ್ದ ಕರಣ್ ಎಂಬಾತನನ್ನು ಮೊಬೈಲ್ ಲೊಕೋಶನ್ ಆಧರಿಸಿ ಬಂಧಿಸಲಾಗಿದೆ. 

ಕದ್ದೊಯ್ದ ಕಾರನ್ನು ತುಮಕೂರಿನಲ್ಲಿ ಇರಿಸಿದ್ದ ಆರೋಪಿಯನ್ನು ಬಂಧಿಸಿದ ಬಳಿಕ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. 

ಅರುಣ್ ಕುಮಾರ್ ಅವರಿಗೆ ಸೇರಿದ ಇನ್ನೋವಾ ಕಾರನ್ನು ಆರೋಪಿ ಬುಕ್ ಮಾಡಿದ್ದ.  ಟ್ರಾವೆಲ್ ಏಜೆನ್ಸಿ ಸಂಪರ್ಕಿಸಿ ಮೈಸೂರಿಗೆ ಪ್ರವಾಸಕ್ಕೆ ತೆರಳಬೇಕಿದ್ದು, ವಾಹನದ ಅಗತ್ಯ ಇದೆ ಎಂದು ಹೇಳಿದ್ದ. ಅದರಂತೆ ಟ್ರಾವೆಲ್ಸ್ ಏಜೆನ್ಸಿ ಅವರು ಈತನಿಗೆ ಕಾರನ್ನು ನೀಡಿದ್ದರು. 

ಕಾರು ಬುಕ್‌ ಮಾಡಿ ಕಾರಿನ ಜತೆ ಪರಾರಿ! ಡ್ರೈವರ್‌ನ್ನು ಲಾಡ್ಜ್‌ಗೆ ಕಳುಹಿಸಿ ಕೃತ್ಯ...

ಈ ವೇಳೆ ಆರೋಪಿ ನಾಯಂಡಹಳ್ಳಿ ಮೆಟ್ರೋ ಸ್ಟೇಷನ್ ಬಳಿಯಲ್ಲಿ ಚಾಲಕ ಅರುಣ ಅವರಿಗೆ  ಹೋಟೆಲ್ ಗೆ ತೆರಳಿ ಸ್ನೇಹಿತನಿಂದ ಹಣ ಪಡೆದುಕೊಂಡು ಬರಲು ಸೂಚಿಸಿದ್ದ.  ಡ್ರೈವರ್ ಹೋಟಲ್ ಗೆ ತೆರಳುತ್ತಿದ್ದಂತೆ ಕಾರನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿದ್ದ. 

ಮಾಲಿಕನ ಮಾಸ್ಟರ್ ಪ್ಲಾನ್ ಫ್ಲಾಪ್ : ಡಸ್ಟರ್‌ ಕಾರು ಆರ್‌ಟಿಓ ಬಲೆಗೆ...

ಚಾಲಕ ಅರುಣ್ ಕುಮಾರ್ ವಾಪಸ್ ಬರುವ ವೇಳೆ ಕಾರು ನಾಪತ್ತೆಯಾಗಿತ್ತು. ಬಳಿಕ ಬ್ಯಾಟರಾಯನಪುರ ಠಾಣೆಯಲ್ಲಿ ದೂರು ದಾಖಲಾಗಿದ್ದು ಇದೀಗ ಆರೋಪಿ ಬಂಧಿಸಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಜಿಟಲ್ ಅರೆಸ್ಟ್‌ಗೆ ಹೆದರಿ ಕೋಟಿಗಟ್ಟಲೆ ಬೆಲೆಬಾಳುವ ಸೈಟ್, ಮನೆ ಮಾರಿದ ಬೆಂಗಳೂರು ಮಹಿಳಾ ಟೆಕ್ಕಿ!
ಮೂಡಿಗೆರೆ: ಮನೆ ಭೋಗ್ಯ ವಿಚಾರಕ್ಕೆ ಜಗಳ, ಮಹಿಳೆಯ ಜಡೆ ಹಿಡಿದು ಎಳೆದು ಬಿಸಾಡಿ ಹಲ್ಲೆ.!