ಬೆಂಗ್ಳೂರಲ್ಲಿ ಅಂಬರ್ ಗ್ರೀಸ್ ಮಾರಾಟ ಜಾಲ, ವೀರ್ಯ ತಿಮಿಂಗಿಲದ ವಾಂತಿಗೆ ಎಂಥಾ ಬೆಲೆ!

By Suvarna News  |  First Published Jun 9, 2021, 3:28 PM IST

* ಅಂಬರ್ ಗ್ರೀಸ್ ಅಕ್ರಮ ಮಾರಾಟ ಮಾಡುತ್ತಿದ್ದವರ ಬಂಧನ
* ಅಂಬರ್ ಗ್ರೀಸ್ ವೀರ್ಯ ತಿಮಿಂಗಿಲದ ವಾಂತಿ 
* ಇದನ್ನು ಸುಗಂಧ ದ್ರವ್ಯ ಮತ್ತು ಔಷಧಿ ತಯಾರಿಕೆಗೆ ಬಳಸುತ್ತಾರೆ
*  ಒಂದು ಕೆಜಿಗೆ  1.7  ಕೋಟಿ ರೂ.  ಮೌಲ್ಯವಿದೆ.


ಬೆಂಗಳೂರು(ಜೂ. 09)  ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಅಂಬರ್ ಗ್ರೀಸ್ ಅಕ್ರಮ ಮಾರಾಟ ಕೇಸ್ ದಾಖಲಾಗಿದೆ. ಅಂಬರ್ ಗ್ರೀಸ್ ಎಂದರೆ ವೀರ್ಯ ತಿಮಿಂಗಿಲದ ವಾಂತಿ ಘನಗಟ್ಟಿದ್ದ ಸ್ಥಿತಿಯಲ್ಲಿರುವ ವಸ್ತು. 

ಘನ ಮೇಣದ ವಾಸನೆಯಿಂದ ಕೂಡಿರುವ ಅಂಬರ್ ಗ್ರಿಸ್ ನ್ನು  ಸುಗಂಧ ದ್ರವ್ಯ ಮತ್ತು ಔಷಧ ತಯಾರಿಕೆಗೆ ಬಳಸಲಾಗುತ್ತದೆ. ಇದಕ್ಕೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ  1.7  ಕೋಟಿ ರೂ.  ಮೌಲ್ಯವಿದೆ.

Tap to resize

Latest Videos

undefined

ಕೆಜಿ ಹಳ್ಳಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ ಸಯ್ಯದ್ ತಜ್ಮುಲ್ ಪಾಷಾ, ಸಲೀಂ ಪಾಷಾ, ರಫೀ ಉಲ್ಲಾ ಶರೀಫ್ ಮತ್ತು ನಾಸೀರ್ ಪಾಷಾ ಬಂಧಿತರು.

ವೀರ್ಯ ಹೊಟ್ಟೆಗೆ ಹೋದರೆ ಗರ್ಭಿಣಿಯಾಗುವ ಸಾಧ್ಯತೆ ಇದೆಯೇ? 

ಬಂಧಿತರಿಂದ 8 ಕೋಟಿ ರೂ. ಮೌಲ್ಯದ 6.7 ಕೆಜಿ ಅಂಬರ್ ಗ್ರೀಸ್ ಜಪ್ತಿ ಮಾಡಿಕೊಳ್ಳಲಾಗಿದದೆ. ಆರೋಪಿಗಳು ಕಾಡುಗೋಡಿಯ ಎಂ.ಆರ್.ಕೆ ಟೆಂಟ್ ಹೌಸ್ ಹಿಂಭಾಗದಲ್ಲಿ ದಂಧೆ ನಡೆಸುತ್ತಿದ್ದರು. ಈ ವೇಳೆ ದಾಳಿ‌ ನಡೆಸಿದ್ದ ಕೆಜಿ ಹಳ್ಳಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. 

ಒಂದಿಷ್ಟು ಮಾಹಿತಿ;  ಹಲವು ದೇಶಗಳು ಅಂಬರ್ ಗ್ರೀಸ್ ಅಥವಾ ಗ್ರೇ ಆಂಬರ್ ಕಾನೂನು ಬಾಹಿರ ಚಟುವಟಿಗೆ ಎಂದು ಘೋಷಣೆ ಮಾಡಿದವು. ಅಂಬರ್ ಗ್ರೀಸ್ ಹಿಡಿದುಕೊಂಡು ನಡೆದರೆ ಪ್ಲೇಗ್ ಬರುವುದಿಲ್ಲ ಎಂಬ ನಂಬಿಕೆಯೂ ಒಂದು ಕಾಲದಲ್ಲಿತ್ತು.  ತಲೆನೋವು, ಒತ್ತಡ ನಿವಾರಣೆಗೆ ಇದನ್ನು ಔಷಧ ಎಂದು ಸುದ್ದಿ ಹಬ್ಬಿಸಿದ್ದರೂ ಇದೆ.  ಹಾಲಿವುಡ್ ನಲ್ಲಿ ಇದೇ ಅಂಬರ್ ಗ್ರೀಸ್ ಕತೆ ಇಟ್ಟುಕೊಂಡು ಸಿನಿಮಾಗಳು ಆಗಿವೆ.  ಅಳವಿನ ಅಂಚಿನಲ್ಲಿರುವ ತಿಮಿಂಗಿಲ ರಕ್ಷಣೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶಗಳ ನಡುವೆ ಮಾತುಕತೆಯೂ ಆಗಿದೆ. 

ಸತ್ತ ತಿಮಿಂಗಲಿದೊಳಗಿತ್ತು ಕೋಟಿಗಟ್ಟಲೇ ನಿಧಿ

ವೀರ್ಯ ತಿಮಿಂಗಿಲದ ಪಿತ್ತರಸ ನಾಳದ ಸ್ರವಿಸುವಿಕೆಯಿಂದ ಆ್ಯಂಬಗ್ರಿಸ್ ರೂಪುಗೊಳ್ಳುತ್ತದೆ. ಇದು ಸಾಮಾನ್ಯವಾಗಿ ದೈತ್ಯ ಸ್ಕ್ವಿಡ್‌ಗಳು ಅಥವಾ ಕಟಲ್‌ಫಿಶ್‌ನ ತ್ಯಾಜ್ಯವಾಗಿರುತ್ತದೆ. ತಿಮಿಂಗಿಲವು ಅದನ್ನು ವಾಂತಿ ಅಥವಾ ಮಲ ವಸ್ತುವಾಗಿ ಕಳುಹಿಸುತ್ತದೆ.  ಸಮುದ್ರದಲ್ಲಿ ತೇಲುತ್ತಿರುವಂತೆ ಕಂಡುಬರುತ್ತದೆ. 

ಆ್ಯಂಬಗ್ರಿಸ್ ಬ್ರೆಜಿಲ್, ದಕ್ಷಿಣ ಆಫ್ರಿಕಾ, ಜಪಾನ್, ಆಸ್ಟ್ರೇಲಿಯಾ ಮತ್ತು ಮೊಲುಕನ್ ದ್ವೀಪಗಳಲ್ಲಿ ಕಂಡುಬರುತ್ತದೆ. ಹಲವಾರು ವರ್ಷಗಳ ನಂತರ ತೂಕದಲ್ಲಿ ಮತ್ತು ಬಣ್ಣದಲ್ಲಿ ವ್ಯತ್ಯಾಸವಾಗುತ್ತದೆ. 

click me!