ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ, ಟ್ರಾನ್ಸ್‌ಫಾರ್ಮರ್‌ಗೆ ಲೈನ್‌ಮ್ಯಾನ್‌ ಬಲಿ

By Kannadaprabha NewsFirst Published Jan 24, 2023, 12:24 PM IST
Highlights

ಟ್ರಾನ್ಸ್‌ಫಾರ್ಮರ್‌ ದುರಸ್ಥಿ ವೇಳೆ ವಿದ್ಯುತ್‌ ಪ್ರವಹಿಸಿ ಬೆಸ್ಕಾಂನ ಲೈನ್‌ ಮ್ಯಾನ್‌ ಮೃತಪಟ್ಟಿರುವ ದುರ್ಘಟನೆ ಮಾಗಡಿ ರಸ್ತೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಮಾಗಡಿ ರಸ್ತೆಯ ಗೋಪಾಲಪುರದ ಪೊಲೀಸ್‌ ಚೌಕಿ ಬಳಿ ಇರುವ ಬೆಸ್ಕಾಂನ ಟ್ರಾನ್ಸ್‌ಫಾರ್ಮರ್‌ ದುರಸ್ತಿ ಮಾಡು ವಾಗ ಈ ದುರ್ಘಟನೆ ನಡೆದಿದೆ.

ಬೆಂಗಳೂರು (ಜ.24): ಟ್ರಾನ್ಸ್‌ಫಾರ್ಮರ್‌ ದುರಸ್ಥಿ ವೇಳೆ ವಿದ್ಯುತ್‌ ಪ್ರವಹಿಸಿ ಬೆಸ್ಕಾಂನ ಲೈನ್‌ ಮ್ಯಾನ್‌ ಮೃತಪಟ್ಟಿರುವ ದುರ್ಘಟನೆ ಮಾಗಡಿ ರಸ್ತೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಸುಂಕದಕಟ್ಟೆ ನಿವಾಸಿ ಗೌತಮ್‌(26) ಮೃತ ಲೈನ್‌ ಮ್ಯಾನ್‌. ಸೋಮವಾರ ಬೆಳಗ್ಗೆ 9.05ರ ಸುಮಾರಿಗೆ ಮಾಗಡಿ ರಸ್ತೆಯ ಗೋಪಾಲಪುರದ ಪೊಲೀಸ್‌ ಚೌಕಿ ಬಳಿ ಇರುವ ಬೆಸ್ಕಾಂನ ಟ್ರಾನ್ಸ್‌ಫಾರ್ಮರ್‌ ದುರಸ್ತಿ ಮಾಡು ವಾಗ ಈ ದುರ್ಘಟನೆ ನಡೆದಿದೆ.

ಲೈನ್‌ಮ್ಯಾನ್‌ ಗೌತಮ್‌ ಅಂಜನಾ ಚಿತ್ರಮಂದಿರ ಬಳಿ ಇರುವ ಬೆಸ್ಕಾಂ ಕಚೇರಿಗೆ ರಾತ್ರಿ ಪಾಳಿ ಕೆಲಸಕ್ಕೆ ತೆರಳಿದ್ದರು. ಗೋಪಾಲಪುರದ ಪೊಲೀಸ್‌ ಚೌಕಿ ಬಳಿ ಇರುವ ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ಸೋಮವಾರ ಬೆಳಗ್ಗೆ ಬೆಸ್ಕಾಂ ಕಚೇರಿಗೆ ಸಾರ್ವಜನಿಕರ ಕರೆ ಬಂದಿದೆ. ಈ ವೇಳೆ ಲೈನ್‌ಮ್ಯಾನ್‌ಗಳಾದ ಗೌತಮ್‌ ಮತ್ತು ಸಿದ್ದರಾಮ ಇಬ್ಬರು ಟ್ರಾನ್ಸ್‌ಫಾರ್ಮರ್‌ ಬಳಿಗೆ ತೆರಳಿದ್ದಾರೆ. ಈ ವೇಳೆ ಗೌತಮ್‌ ವಿದ್ಯುತ್‌ ಕಂಬ ಏರಿ ಟ್ರಾನ್ಸ್‌ಫಾರ್ಮರ್‌ ದುರಸ್ಥಿ ಮಾಡುವಾಗ ಒಂದು ವಿದ್ಯುತ್‌ ತಂತಿ ತಾಕಿ ವಿದ್ಯುತ್‌ ಪ್ರವಹಿಸಿ ಗೌತಮ್‌ ಕೆಳಗೆ ಬೀಳುತ್ತಾನೆ. ಈ ಕೂಡಲೇ ಗೌತಮ್‌ನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೂ ಆಸ್ಪತ್ರೆಗೆ ಬರುವ ವೇಳೆಗೆ ಗೌತಮ್‌ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗೌತಮ್‌ ವಿದ್ಯುತ್‌ ಕಂಬ ಏರಿ ಟ್ರಾನ್ಸ್‌ಫಾರ್ಮರ್‌ ದುರಸ್ಥಿ ಮಾಡುವಾಗ ಟ್ರಾನ್ಸ್‌ಫಾರ್ಮರ್‌ನ ಒಂದು ಕಡೆಯ ವಿದ್ಯುತ್‌ ಅನ್ನು ಮಾತ್ರ ಆಫ್‌ ಮಾಡಲಾಗಿದೆ. ಕೆಲಸದ ವೇಳೆ ಮತ್ತೊಂದು ಕಡೆಯ ತಂತಿಗೆ ಕೈ ತಾಕಿದ ಕೂಡಲೇ ವಿದ್ಯುತ್‌ ಪ್ರವಹಿಸಿ ಗೌತಮ್‌ ದುತ್ತನೇ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾನೆ. ಮೃತನ ತಂದೆ ರಂಗಸ್ವಾಮಿ ಅವರು ನೀಡಿದ ದೂರಿನ ಮೇರೆಗೆ ಮಾಗಡಿ ರಸ್ತೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಾಗಲಕೋಟೆ: ಇಬ್ಬರು ವಿದ್ಯಾರ್ಥಿನಿಯರ ಮೇಲೆ ಶಿಕ್ಷಕನಿಂದಲೇ ರೇಪ್‌

ಇತ್ತೀಚೆಗಷ್ಟೇ ನಿಶ್ಚಿತಾರ್ಥವಾಗಿತ್ತು: ಮೃತ ಲೈನ್‌ಮ್ಯಾನ್‌ ಗೌತಮ್‌ಗೆ ಕೆಲ ದಿನಗಳ ಹಿಂದೆಯಷ್ಟೇ ಯುವತಿ ಜತೆಗೆ ವಿವಾಹ ನಿಶ್ಚಿತಾರ್ಥವಾಗಿತ್ತು. ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಗೌತಮ್‌ ವಿದ್ಯುತ್‌ ಪ್ರವಹಿಸಿ ಮೃತಪಟ್ಟಿದ್ದಾನೆ. ಮನೆಗೆ ಆಸರೆಯಾಗಿದ್ದ ಗೌತಮ್‌ನನ್ನು ಕಳೆದುಕೊಂಡ ಕುಟುಂಬ ದುಃಖದಲ್ಲಿ ಮುಳುಗಿತ್ತು. ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯವೇ ಗೌತಮ್‌ ಸಾವಿಗೆ ಕಾರಣ ಎಂದು ಕುಟುಂಬದ ಸದಸ್ಯರು ಆರೋಪಿಸಿದರು.

Udupi crime: ಮನೆ ಬೀಗ ಮುರಿದು ಚಿನ್ನಾಭರಣ ದೋಚಿದ್ದ ಖತರ್‌ನಾಕ್ ಕಳ್ಳರ ಸೆರೆ

ಮೃತ ಲೈನ್‌ಮೆನ್‌ಗೆ 2 ಲಕ್ಷ ರು. ಪರಿಹಾರ: ವಿದ್ಯುತ್‌ ಪ್ರವಹಿಸಿ ಮೃತಪಟ್ಟಬೆಸ್ಕಾಂ ಲೈನ್‌ಮೆನ್‌ ಮೃತಪಟ್ಟಗೌತಮ್‌ ಅವರ ಕುಟುಂಬಕ್ಕೆ 2 ಲಕ್ಷ ರು. ತಕ್ಷಣ ಪರಿಹಾರವನ್ನು ಬೆಸ್ಕಾಂ ಪ್ರಕಟಿಸಿದೆ. ಉಳಿದಂತೆ ಇಲಾಖಾ ಪರಿಹಾರವಾಗಿ ಸುಮಾರು 10 ಲಕ್ಷ ರು. ನೀಡಲಾಗುವುದು. ಜತೆಗೆ ಸಮೂಹ ವಿಮೆಗೆ ಅವರು ಪಾವತಿಸಿರುವ ಪ್ರೀಮಿಯಂ ಆಧರಿಸಿ ವಿಮಾ ಹಣವನ್ನೂ ಕೊಡಿಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

click me!