
ಬೆಂಗಳೂರು (ಆ.15): ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಜೀವನ ಮಾಡುತ್ತಿದ್ದ ಮಹಿಳೆಗೆ ಕಷ್ಟ ಎಂದಾಗ ಸರ್ಕಾರಿ ನೌಕರನೊಬ್ಬ ಆರ್ಥಿಕ ಸಹಾಯ ಮಾಡಿದ್ದಾನೆ. ಈ ಋಣ ತೀರಿಸುವುದಾಗಿ ಓಯೋ ರೂಮಿಗೆ ಕರೆಸಿಕೊಂಡು ವೀಡಿಯೋ ಮಾಡಿಕೊಂಡು, ಹನಿಟ್ರ್ಯಾಪ್ ಮೂಲಕ ಬರೋಬ್ಬರಿ 82 ಲಕ್ಷ ರೂ. ವಸೂಲಿ ಮಾಡಿದ ದುರ್ಘಟನೆ ನಡೆದಿದೆ. ಇನ್ನು ಎಲ್ಲ ಹಣವನ್ನೂ ಕಳೆದುಕೊಂಡು ಬೀದಿಗೆ ಬೀಳುವ ಸ್ಥಿತಿಯಲ್ಲಿದ್ದಾಗ ಪೊಲೀಸರಿಗೆ ದೂರು ಕೊಡಲಾಗಿದ್ದು, ಈಗ ಹನಿಟ್ರ್ಯಾಪ್ ಮಾಡಿದ ಗ್ಯಾಂಗ್ ಜೈಲುಕಂಬಿ ಎಣಿಸುತ್ತಿದೆ.
ಹನಿಟ್ರ್ಯಾಪ್‌ಗೆ ಒಳಗಾದ ವ್ಯಕ್ತಿಯನ್ನು ಸುಧೀಂದ್ರ (ನಿವೃತ್ತ ಸರ್ಕಾರಿ ನೌಕರ) ಆಗಿದ್ದಾರೆ. ಹನಿಟ್ರ್ಯಾಪ್ ಮಾಡಿದವರು ರೀನಾ ಅಣ್ಣಮ್ಮ, ಸ್ನೇಹಾ ಮತ್ತು ಲೋಕೇಶ್ ಎನ್ನುವವರಾಗಿದ್ದಾರೆ. ಬೆಂಗಳೂರಿನಲ್ಲಿ ಜೀವನ ನಡೆಸುವುದೇ ಕಷ್ಟವಾಗಿರುತ್ತದೆ. ಹೀಗಾಗಿ, ಮಹಿಳೆಯೊಬ್ಬಳು ಕಷ್ಟದ ಜೀವನ ನಡೆಸುತ್ತಿದ್ದ ವೇಳೆ ಸರ್ಕಾರಿ ನೌಕರನೊಬ್ಬ 5 ಸಾವಿರ ರೂ. ಆರ್ಥಿಕ ಸಹಾಯವನ್ನು ಮಾಡಿದ್ದಾನೆ. ಇನ್ನು ನಿಮ್ಮ ಆರ್ಥಿಕ ಸಹಾಯದ ಋಣ ತೀರಿಸುವುದಾಗಿ ತಿಳಿಸಿದ ಮಹಿಳೆ ಆತನನ್ನು ಖಾಸಗಿ ಹೋಟೆಲ್‌ನ ಓಯೋ ರೂಮಿಗೆ ಕರೆಸಿಕೊಂಡಿದ್ದಾಳೆ. ಈ ವೇಳೆ ಆತ ಬೇಡವೆಂದರೂ ಬಲವಂತವಾಗಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದಾಳೆ. ನಂತರ, ಇಬ್ಬರೂ ಲೈಂಗಿಕ ಕ್ರಿಯೆ ನಡೆಸುವುದನ್ನು ಅವರಿಗೆ ಗೊತ್ತಾಗದಂತೆ ವೀಡಿಯೋ ಮಾಡಿಕೊಂಡಿದ್ದಾಳೆ.
ದಲಿತ ವಿರೋಧಿ ಹೇಳಿಕೆ: ನಟ ಉಪೇಂದ್ರ ವಿರುದ್ಧ ಎಫ್‌ಐಆರ್: ಸಚಿವ ಮಲ್ಲಿಕಾರ್ಜುನ ವಿರುದ್ಧ ಕೇವಲ ಎನ್‌ಸಿಆರ್
ಹನಿಟ್ರ್ಯಾಪ್ ವ್ಯಕ್ತಿಯಿಂದ 82 ಲಕ್ಷ ರೂ. ಹಣ ವಸೂಲಿ: ಕೋಳಿ ಚಿನ್ನದ ಮೊಟ್ಟೆ ಇಡುತ್ತದೆ ಎಂದು ಅದರ ಹೊಟ್ಟೆಯನ್ನೇ ಕತ್ತರಿಸಿದಂತೆ, 5 ಸಾವಿರ ರೂ. ಆರ್ಥಿಕ ನೆರವು ನೀಡಿದ ಸರ್ಕಾರಿ ನೌಕರನ ಸುಲಿಗೆ ಮಾಡಲು ಮಹಿಳೆ ಮುಂದಾಗಿದ್ದಾಳೆ. ನಿಮ್ಮ ಋಣ ತೀರಿಸುವುದಾಗಿ ಓಯೋ ರೂಮಿನಲ್ಲಿ ನಡೆದ ಘಟನೆಯ ವೀಡಿಯೋ ಮಾಡಿಕೊಂಡ ಮಹಿಳೆ ಆತನಿಗೆ ಅದನ್ನು ಕಳುಹಿಸಿ ಹಂತ ಹಂತವಾಗಿ ಹನಿಟ್ರ್ಯಾಪ್‌ನ ಮೂಲಕ ಹಣ ವಸೂಲಿಗೆ ಮುಂದಾಗಿದ್ದಾಳೆ. ಇನ್ನು ಸರ್ಕಾರಿ ನೌಕರ ನಿವೃತ್ತಿ ಹೊಂದಿದಾಗ ಆತನಿಗೆ ಬರುವ ಎಲ್ಲ ಪೆನ್ಷನ್ ಹಣವನ್ನೂ ಕಿತ್ತುಕೊಂಡಿದ್ದಾಳೆ. ಒಟ್ಟಾರೆ ಹನಿಟ್ರ್ಯಾಪ್‌ಗೆ ಒಳಗಾದ ವ್ಯಕ್ತಿಯಿಂದ 82 ಲಕ್ಷ ರೂ. ಹಣ ವಸೂಲಿ ಮಾಡಿದ್ದಾರೆ.
ಚಾಕೊಲೇಟ್ ಕೊಡ್ಸೋದಾಗಿ ಹೇಳಿ 6 ವರ್ಷದ ಬಾಲಕಿ ಮೇಲೆ 16 ವರ್ಷದ ಬಾಲಕನಿಂದ ಲೈಂಗಿಕ ದೌರ್ಜನ್ಯ!
ಟುಂಬಸ್ಥರಿಗೆ ವಿಡಿಯೋ ಶೇರ್ ಮಾಡುವುದಾಗಿ ಬೆದರಿಕೆ: ಇಷ್ಟಾದರೂ ಸುಮ್ಮನಾಗದ ಆಕೆ, ತನ್ನ ಸ್ನೇಹಿತೆ ಹಾಗೂ ಇನ್ನೊಬ್ಬ ವ್ಯಕ್ತಿಯೊಡನೆ ಸೇರಿಕೊಂಡು ಹಣ ವಸೂಲಿಗೆ ಮುಂದಾಗಿದ್ದಾಳೆ. ನೀನು ಹಣ ಕೊಡದೇ ಹೋದಲ್ಲಿ ಈ ವೀಡಿಯೋವನ್ನು ನಿಮ್ಮ ಕುಟುಂಬದ ಎಲ್ಲ ಸದಸ್ಯರಿಗೂ, ನೆಂಟರಿಷ್ಟರಿಗೂ ಶೇರ್ ಮಾಡವುದಾಗಿ ಬೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾಳೆ. ತನ್ನ ದುಡಿದ ಹಣವನ್ನೆಲ್ಲಾ ಕಿತ್ತುಕೊಂಡಿದ್ದು, ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದ್ದರೂ ಮತ್ತೆ ವಿಡಿಯೋ ವೈರಲ್ ಮಾಡೋದಾಗಿ ಹೆದರಿಸಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದ ರೀನಾ ಅಣ್ಣಮ್ಮ ಹಾಗೂ ಸ್ನೇಹ ಅವರ ಕಾಟ ಸಹಿಸಲಾಗದೇ ಸಂತ್ರಸ್ತ ವ್ಯಕ್ತಿ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಜಯನಗರ ಪೊಲೀಸರು ಸದ್ಯ ಆರೋಪಿಗಳನ್ನ ಬಂಧಿಸಿ ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ