Bike Accident: ಬೈಕ್‌ಗಳ ಮುಖಾಮುಖಿ ಡಿಕ್ಕಿ: ಸ್ಥಳದಲ್ಲಿಯೇ ಮೂವರ ದುರ್ಮರಣ

Published : Jan 28, 2023, 09:10 PM IST
Bike Accident: ಬೈಕ್‌ಗಳ ಮುಖಾಮುಖಿ ಡಿಕ್ಕಿ: ಸ್ಥಳದಲ್ಲಿಯೇ ಮೂವರ ದುರ್ಮರಣ

ಸಾರಾಂಶ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಹಳ್ಳದ ಬಳಿಯಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. 

ಬೆಳಗಾವಿ/ಕೊಪ್ಪಳ (ಜ.28): ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಹಳ್ಳದ ಬಳಿಯಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ಇಂದು ಸಂಜೆ ನಡೆದಿದೆ. 

ರಾಯಬಾಗ- ಹಾರೂಗೇರಿ ಮುಖ್ಯರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಎರಡೂ ಬೈಕ್‌ಗಳಲ್ಲಿ ಅತಿ ವೇಗವಾಗಿ ಬರುತ್ತಿದ್ದ ಬೈಕ್‌ ಸವಾರರು ಹೆಲ್ಮೆಟ್‌ ಧರಿಸಿರಲಿಲ್ಲ. ಆದರೆ, ನಿಡಗುಂದಿ ಹಳ್ಳದ ಬಳಿ ಎರಡೂ ಬೈಕ್‌ಗಳು ಪರಸ್ಪರ ನಿಯಂತ್ರಣ ಸಾಧಿಸಲಾಗದೇ ಮುಖಾಮುಖಿ ಡಿಕ್ಕಿ ಹೊಡೆದಿವೆ. ಡಿಕ್ಕಿಯ ರಭಸಕ್ಕೆ ಬೈಕ್‌ಗಳ ಮುಂಭಾಗ ಪೂರ್ಣ ಪ್ರಮಾಣದಲ್ಲಿ ನಜ್ಜುಗುಜ್ಜಾಗಿದೆ. ಇನ್ನು ಬೈಕ್‌ನಲ್ಲಿದ್ದ ಸವಾರರು ಸುಮಾರು 10 ರಿಂದ 12 ಅಡಿ ದೂರಕ್ಕೆ ಹೋಗಿ ಬಿದ್ದು ಪ್ರಾಣ ಬಿಟ್ಟಿದ್ದಾರೆ. ರಸ್ತೆ ಬಿದ್ದು ತಲೆಗೆ ಪೆಟ್ಟಾಗಿ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿದ್ದಾರೆ. ಉಳಿದವರಿಗೆ ಎದೆ ಹಾಗೂ ದೇಹದ ಇತರೆ ಭಾಗಗಳಲ್ಲಿ ಭಾರಿ ಪ್ರಮಾಣದ ಹೊಡೆತ ಬಿದ್ದಿದೆ. ಆದ್ದರಿಂದ ಬೈಕ್‌ ಅಪಘಾತದ ಕೆಲವೇ ನಿಮಿಷಗಳಲ್ಲಿ ಪ್ರಾಣ ಹೋಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Bison attack: ಬೈಕ್‌ ಸವಾರರ ಮೇಲೆ ಕಾಡುಕೋಣ ದಾಳಿ; ಒಂದು ತಿಂಗಳಲ್ಲಿ ನಾಲ್ಕನೇ ಬಾರಿ!

ಒಬ್ಬ ಪ್ರಯಾಣಿಕ ಸಾವಿನಿಂದ ಪಾರು: ಡಿಕ್ಕಿಯಾಗಿರುವ ಎರಡು ಬೈಕ್‌ಗಳ ಮೇಲೆ ಒಟ್ಟು ನಾಲ್ಕು ಜನ ಪ್ರಯಾಣ ಮಾಡುತ್ತಿದ್ದರು. ಆದರೆ, ಬೈಕ್‌ಗಳ ಮುಖಾಮುಖಿ ಡಿಕ್ಕಿಯಿಂದ ಮೂವರು ಸ್ಥಳದಲ್ಲಿ ಸಾವನ್ನಪ್ಪಿದರೆ ಅದೃಷ್ಟವಶಾತ್‌ ಒಬ್ಬರ ಜೀವ ಉಳಿದಿದೆ. ಆದರೆ, ಇವರಿಗೂ ಗಂಭೀರ ಗಾಯಗಳಾಗಿದ್ದು, ಗಾಯಾಳುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆತನ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ರಾಯಬಾಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತಾಲೂಕು ಆಸ್ಪತ್ರೆಗಳಿಗೆ ಮೃತ ದೇಹಗಳನ್ನು ರವಾನಿಸಿದ್ದಾರೆ. 

ಕೊಪ್ಪಳದಲ್ಲಿ ಕ್ರೂಸರ್‌ ಡಿಕ್ಕಿಯಾಗಿ ವೃದ್ಧ ಸಾವು: ಕೊಪ್ಪಳ (ಜ.28): ಜಿಲ್ಲೆಯ ಕುಕನೂರಿನ ದ್ಯಾಂಪುರ ಬಳಿ ವೃದ್ಧನಿಗೆ ಕ್ರೂಸರ್‌ ವಾಹನ ಡಿಕ್ಕಿಯಾಗಿ ಸ್ಥಳದಲ್ಲಿಯೇ ವೃದ್ಧ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಕುಕನೂರಿನಿಂದ ಆಟೋದಲ್ಲಿ ದ್ಯಾಂಪುರ ಗ್ರಾಮಕ್ಕೆ ಆಟೋದಲ್ಲಿ ಬಂದಿದ್ದ ವೃದ್ಧ ಹೇಮರೆಡ್ಡಿ ಬೀಡನಾಳ (65) ಎಂಬ ವೃದ್ಧ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಆಟೋವನ್ನು ಇಳಿಯುತ್ತಿದ್ದನು. ಆದರೆ, ಚಿಕ್ಕದಾದ ರಸ್ತೆಯಿದ್ದು ಒಂದು ಬದಿಯಲ್ಲಿ ಆಟೋ ಹಾಗೂ ಅದರ ಪಕ್ಕದಲ್ಲಿ ವೃದ್ಧ ಇಳಿದು ನಿಂತಿದ್ದು, ರಸ್ತೆಯಲ್ಲಿ ಜಾಗ ಇಲ್ಲದಂತಾಗಿದೆ. ಈ ವೇಳೆ ವೇಗವಾಗಿ ಬರುತ್ತಿದ್ದ ಕ್ರೂಸರ್‌ ವಾಹನವು ವೃದ್ಧನಿಗೆ ಗುದ್ದಿದೆ. ರಸ್ತೆಗೆ ಬಿದ್ದ ವೃದ್ಧ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು: ಕಿಲ್ಲರ್ ಬಿಎಂಟಿಸಿ ಬಸ್‌ ಸರಣಿ ಅಪಘಾತಕ್ಕೆ ಯುವಕ ಬಲಿ

ಸಚಿವ ವಾಹನ ಚಾಲಕನ ತಂದೆ: ಕೊಪ್ಪಳದಲ್ಲಿ ಕ್ರೂಸರ್‌ ಡಿಕ್ಕಿಯಾಗಿ ಸಾವನ್ನಪ್ಪಿದ ವೃದ್ಧ ಹೇಮರಡ್ಡಿ ಬಿಡನಾಳ (65) ಅವರು ಸಚಿವ ಹಾಲಪ್ಪ ಆಚಾರ ಅವರ ವಾಹನ ಚಾಲಕ ಶರಣಪ್ಪ ಬಿಡನಾಳ ಅವರ ತಂದೆಯಾಗಿದ್ದಾರೆ. ಈ ಹಿಂದೆ ಇದೇ ಕ್ರೂಷರ್ ವಾಹನ ದ್ಯಾಂಪುರ ಬಳಿ ಅಪಘಾತ ಮುನ್ನ ಮತ್ತೊಬ್ಬರಿಗೆ ಗುದ್ದಿ ಗಾಯಗೊಳಿಸಿತ್ತು. ಘಟನೆ ಬಗ್ಗೆ ಕುಕನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ರೋಸರ್‌ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Pocso: 9 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು!
ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ