ಗೋಕಾಕ ಪಟ್ಟಣದಲ್ಲಿ ಬೆಚ್ಚಿ ಬೀಳಿಸೋ ಸಾಮೂಹಿಕ ಅತ್ಯಾಚಾರ: ರಾತ್ರಿಯಿಡೀ 6 ಕಾಮುಕರ ದಾಳಿಗೆ ನಲುಗಿದ ಮಹಿಳೆ

Published : Oct 03, 2023, 04:08 PM IST
ಗೋಕಾಕ ಪಟ್ಟಣದಲ್ಲಿ ಬೆಚ್ಚಿ ಬೀಳಿಸೋ ಸಾಮೂಹಿಕ ಅತ್ಯಾಚಾರ: ರಾತ್ರಿಯಿಡೀ 6 ಕಾಮುಕರ ದಾಳಿಗೆ ನಲುಗಿದ ಮಹಿಳೆ

ಸಾರಾಂಶ

ಬೆಳಗಾವಿ ಜಿಲ್ಲೆ ಗೋಕಾಕ ಪಟ್ಟಣದಲ್ಲಿ ಒಬ್ಬಂಟಿ ಮಹಿಳೆಯನ್ನು ಮನೆಯಲ್ಲಿ ಕೂಡಿಹಾಕಿ 6 ಮಂದಿ ಕಾಮುಕರು ಸೇರ ರಾತ್ರಿಯಿಡೀ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. 

ಬೆಳಗಾವಿ (ಅ.03): ರಾಜ್ಯದ ಗಡಿಜಿಲ್ಲೆ ಬೆಳಗಾವಿಯ ಗೋಕಾಕ ಪಟ್ಟಣದಲ್ಲಿ ಪರಿಚಯಸ್ಥರೊಂದಿಗೆ ಮನೆಗೆ ಹೊರಟಿದ್ದ ಮಹಿಳೆಯನ್ನು ಪುಸಲಾಯಿಸಿ ತಮ್ಮ ಮನೆಗೆ ಬಂದು ಚಹಾ ಕುಡಿದು ಹೋಗುವಂತೆ ಕರೆದೊಯ್ದು ಕೂಡಿಹಾಕಿ, 6 ಮಂದಿಯ ದರೋಡೆ ಗ್ಯಾಂಗ್‌ ರಾತ್ರಿಯಿಡೀ ನಿರಂತರವಾಗಿ ಅತ್ಯಾಚಾರ ಮಾಡಿದೆ. 

ಹೌದು, ಬೆಳಗಾವಿ ಜಿಲ್ಲೆಯಲ್ಲಿ ಹಲವು ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಗ್ಯಾಂಗ್‌ ಈಗ, ಪರಿಚಯಸ್ಥರೊಂದಿಗೆ ಮನೆಗೆ ಹೊರಟಿದ್ದಾಗ ಇಬ್ಬರನ್ನೂ ಪುಸಲಾಯಿಸಿ ಮನೆಗೆ ಕರೆದೊಯ್ಯು ಅತ್ಯಾಚಾರ ಎಸಗಿರುವ ಮಾಡಿದ ಅಮಾನವೀಯ ಘಟನೆ ನಡೆದಿದೆ. ಇನ್ನು ಈ ಘಟನೆ ಸೆಪ್ಟಂಬರ್‌ 5 ರಂದು ನಡೆದಿದ್ದು, ಪೊಲೀಸರ ತನಿಖೆಯ ನಂತರ ಅತ್ಯಾಚಾರ ಪ್ರಕರಣ ಹೊರಬಿದ್ದಿದೆ. ಮನೆಯೊಂದರಲ್ಲಿ ವಿವಾಹಿತೆಯನ್ನು ಕೂಡಿಹಾಕಿ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ನಗರದಲ್ಲಿ ನಡೆದಿದೆ. 

ಸಾಮೂಹಿಕ ಅತ್ಯಾಚಾರದ ಆರೋಪಿಗಳನ್ನು ಗೋಕಾಕ ತಾಲ್ಲೂಕಿನ ಬೆನಚಿನಮರಡಿ ಗ್ರಾಮದ ರಮೇಶ ಉದ್ದಪ್ಪ ಖಿಲಾರಿ,  ದುರ್ಗಪ್ಪ ಸೋಮಲಿಂಗ ವಡ್ಡರ, ಯಲ್ಲಪ್ಪ ಸಿದ್ದಪ್ಪ ಗೀಸನಿಂಗವ್ವಗೋಳ, ಕೃಷ್ಣ ಪ್ರಕಾಶ ಪೂಜೇರಿ, ರಾಮಸಿದ್ಧ ಗುರುಸಿದ್ಧಪ್ಪ ತಪಸಿ ಸೇರಿ 5 ಮಂದಿ ಕಾಮುಕರನ್ನು ಬಂಧಿಸಿದ್ದಾರೆ. ಆದರೆ, ಮಹಿಳೆ ಹಾಗೂ ಆಕೆಯ ಪರಿಚಯಸ್ಥನ ಮುಖ ಪರಿಚಯ ಹೊಂದಿದ್ದು, ಅವರನ್ನು ಪುಸಲಾಯಿಸಿ ಮನೆಗೆ ಕರೆದೊಯ್ದ ಮುಖ್ಯ ಆರೋಪಿ ಬಸವರಾಜ ಖಿಲಾರಿ ಪರಾರಿ ಆಗಿದ್ದಾರೆ. ಆತನಿಗಾಗಿ ಶೋಧಕಾರ್ಯ ಮುಂದುವರೆದಿದೆ ಎಂದು ಬೆಳಗಾವಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಮಾಹಿತಿ ನೀಡಿದ್ದಾರೆ.

ಪ್ರೀತಿ ತಿರಸ್ಕರಿಸಿದ ಸಹೋದ್ಯೋಗಿಯ ಕೊಂದು 2 ವರ್ಷ ಕತೆ ಕಟ್ಟಿದ ವಿವಾಹಿತ ಪೊಲೀಸ್‌

ಸೆ. 5 ರಂದು ತಮ್ಮ ಹಳ್ಳಿಯಿಂದ ಗೋಕಾಕ ನಗರಕ್ಕೆ ಬಂದಿದ್ದ ಸಂತ್ರಸ್ತೆಯು ತಮ್ಮ ಪರಿಚಯ ವ್ಯಕ್ತಿಯೊಂದಿಗೆ ಮಾತನಾಡುತ್ತಾ ನಿಂತಿದ್ದಳು. ಈ ವೇಳೆ ಇಬ್ಬರಿಗೂ ಮುಖ ಪರಿಚಯ ಹೊಂದಿದ್ದ ಆರೋಪಿ ಬಸವರಾಜ ಖಿಲಾರಿ ಅವರಿರುವಲ್ಲಿಗೆ ಹೋಗಿ ಸಲುಗೆಯಿಂದ ಮಾತನಾಡಿಸಿದ್ದಾನೆ. ನಂತರ, ತಾವು ಹೋಗುತ್ತಿರುವ ಬಗ್ಗೆ ಮಾತನಾಡಿ, ನಮ್ಮ ಮನೆ ಇಲ್ಲಿ ಹತ್ತಿರದಲ್ಲಿಯೇ ಇದ್ದು ಇಬ್ಬರೂ ಬಂದು ಚಹಾ ಕುಡಿದು ಹೋಗುವಂತೆ ಮನವಿ ಮಾಡಿದ್ದಾರೆ. ಮುಖ ಪರಿಚಯದ ಹಿನ್ನೆಲೆಯಲ್ಲಿ ಮಹಿಳೆ ಹಾಗೂ ಆಕೆಯ ಪರಿಚಯಸಥರು ಇಬ್ಬರೂ ಆರೋಪಿಯ ಮನೆಗೆ ಹೋಗಿದ್ದಾರೆ.

ಮನೆಯಲ್ಲಿ ಯಾರೂ ಮಹಿಳೆಯರು ಇಲ್ಲದ ಬಗ್ಗೆ ಕೇಳಿದಾಗ ಎಲ್ಲರೂ ಹೊರಗಡೆ ಹೋಗಿದ್ದು, ಬರುತ್ತಾರೆ ಎಂದು ತಾನೇ ಅಂಗಡಿಯಿಂದ ಚಹಾ ತೆಗೆದುಕೊಂಡು ಬಂದು ಕೊಟ್ಟಿದ್ದಾನೆ. ತಾನು ಚಹಾ ತರಲು ಅಂಗಡಿಗೆ ಹೋದಾಗ ತನ್ನ ದರೋಡೆ ಗ್ಯಾಂಗ್‌ನ 5 ಮಂದಿ ಸಹಚರರಿಗೆ ಮಹಿಳೆ ಸಿಕ್ಕಿದ ಬಗ್ಗೆ ತಿಳಿಸಿದ್ದಾನೆ. ಆಗ ಎಲ್ಲರೂ ಸೇರಿ ರಾತ್ರಿಯಿಡೀ ಅತ್ಯಾಚಾರ ಮಾಡುವ ಬಗ್ಗೆ ಯೋಜನೆ ರೂಪಿಸಿದ್ದಾರೆ. ಅದರಂತೆ, ಬಸವರಾಜ ಖಿಲಾರಿ ಮನೆಯಲ್ಲಿ ಕೂರಿಸಿದ್ದ ಮಹಿಳೆ ಹಾಗೂ ಆಕೆಯ ಪರಿಚಯಸ್ಥನಿಗೆ ಚಹಾ ಕೊಟ್ಟಿದ್ದಾನೆ. ಅಷ್ಟರಲ್ಲಾಗಲೇ ಆತನ ಮನೆಗೆ ಬಂದ ಕಾಮುಕರು ಪುರುಷನನ್ನು ಕಟ್ಟಿಹಾಕಿ ಥಳಿಸಿ ಕೂಡಿಹಾಕಿದ್ದಾರೆ.

ಆರು ಜನ ಕಾಮುಕರ ಗುಂಪಿನಲ್ಲಿ ಸಿಕ್ಕಿದ ಮಹಿಳೆಯನ್ನು ಕಟ್ಟಿಹಾಕಿ ರೂಮಿನಲ್ಲಿ ಕೂಡಿಹಾಕಿದ್ದಾರೆ. ನಂತರ, ರಾತ್ರಿಯಿಡೀ ಒಬ್ಬಬ್ಬರೇ ಹೋಗಿ ಮಹಿಳೆಯನ್ನು ನಿರಂತರವಾಗಿ ಅತ್ಯಾಚಾರ ಮಾಡಿದ್ದಾರೆ. ಮಹಿಳೆಯ ಬಾಯಿಗೆ ಬಟ್ಟೆ ತುರುಕಿದ್ದು, ಆಕೆ ಕೂಗಿಕೊಂಡರೂ ಕೇಳದಂತೆ ವ್ಯವಸ್ಥೆ ಮಾಡಿದ್ದಾರೆ. ನಂತರ ಮಹಿಳೆ ತೀವ್ರ ನಿತ್ರಾಣಗೊಂಡು ವಿರೋಧಿಸತೊಡಗಿದಾಗ ಚಾಕು ತೋರಿಸಿ ಅತ್ಯಾಚಾರವೆಸಗಿದ್ದಾರೆ. ಇಷ್ಟಕ್ಕೂ ಸುಮ್ಮನಾಗದ ಕಿಡಿಗೇಡಿಗಳು ಅತ್ಯಾಚಾರ ಮಾಡುವ ವೇಳೆ ಮಹಿಳೆಯನ್ನು ಎಲ್ಲ ಖಾಸಗಿ ಭಾಗಗಳ ಫೋಟೋ ಹಾಗೂ ವಿಡಿಯೋ ಮಾಡಿಕೊಂಡಿದ್ದಾರೆ.

ರಾತ್ರಿಯಿಡೀ ಬಿಟ್ಟು ಬಿಡದೇ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ ನರಕ ತೋರಿಸಿದ ದ್ರೋಹಿಗಳು ಬೆಳಗ್ಗೆ ವೇಳೆಗೆ ಮಹಿಳೆ ಹಾಗೂ ಆಕೆಯೊಂದಿಗೆ ಬಂದಿದ್ದ ಪರಿಚಯಸ್ಥನನ್ನು ಸೇರಿಸಿ ಇಬ್ಬರನ್ನೂ ಬೆತ್ತಲೆಯಾಗಿ ಮಲಗಿಸಿ ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಸೆರೆ ಹಿಡಿದಿದ್ದಾರೆ. ನೀವು ಪೊಲೀಸರು ಅಥವಾ ಇನ್ಯಾರಿಗಾದರೂ ಹೇಳಿದರೆ ಇಬ್ಬರ ಖಾಸಗಿ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಮಾಡುವುದಾಗಿ ತಿಳಿಸಿದ್ದಾರೆ. ನಂತರ, ಬೆಳಗ್ಗೆ ವೇಳೆ ಮಹಿಳೆ ಹಾಗೂ ಆಕೆಯ ಪರಿಚಯಸ್ಥ ಇಬ್ಬರ ಬಳಿ ಇರುವ ಎಲ್ಲ ಹಣ ಹಾಗೂ ಒಡವೆಗಳನ್ನು ದೋಚಿದ್ದಾರೆ.

ಸರ್ಕಾರಿ ನೌಕರನಾದ್ರೂ ಸಾಲಕ್ಕೆ ಹೆದರಿ ರೈಲಿಗೆ ತಲೆಕೊಟ್ಟ ಕುಟುಂಬ: ತಂದೆ-ತಾಯಿ, ಮಗಳ ದೇಹವೆಲ್ಲಾ ಛಿದ್ರ ಛಿದ್ರ

ಬೆಳಗ್ಗೆ ಮಹಿಳೆಯ ಪರ್ಸ್‌ನಲ್ಲಿದ್ದ ಹಣ ಹಾಗೂ ಎಟಿಂ ಕಾರ್ಡ್‌ ಪಡೆದು ಆಕೆಯಿಂದ ಎಟಿಎಂ ಪಿನ್‌ ಪಡೆದು ಎಲ್ಲ ಹಣವನ್ನು ಡ್ರಾ ಮಾಡಿದ್ದಾರೆ. ಆಕೆಯ ಪರಿಚಿತ ವ್ಯಕ್ತಿ ಬಳಿಯಿದ್ದ ಹಣವನ್ನೂ ದೋಚಿದ್ದಾರೆ. ಮಹಿಳೆ ಮೇಲೆ ಅತ್ಯಾಚಾರ ಮಾಡಿದ್ದಲ್ಲದೇ ಆಕೆಯ ಬಳಿಯಿದ್ದ ಎಲ್ಲವನ್ನೂ ಕಸಿದುಕೊಂಡು ಬರ್ಬಾದ್‌ ಮಾಡಿದ್ದು, ಯಾರಿಗೂ ಬಾಯಿ ಬಿಡದಂತೆ ಜೀವ ಬೆದರಿಕೆ ಹಾಗೂ ವಿಡಿಯೋ ಹರಿಬಿಟ್ಟು ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. 

ಈ ಬಗ್ಗೆ ಹಣದ ದರೋಡೆ ಮಾಡಿದ ಬಗ್ಗೆ ಪೊಲೀಸರಿಗೆ ಮಹಿಳೆಯರ ಪರಿಚಿತರು ದೂರು ನೀಡಿದ್ದಾರೆ. ಹಣ ದರೋಡೆಯ ದೂರನ್ನು ಆಧರಿಸಿ ತನಿಖೆ ಮಾಡಿದ ಪೊಲೀಸರಿಗೆ ದರೋಡೆ ಗ್ಯಾಂಗ್‌ನ ಅತ್ಯಾಚಾರದ ಪ್ರಕರಣದ ಸುಳಿವು ಸಿಕ್ಕಿದೆ. ಈ ಬಗ್ಗೆ ಸ್ವಯಂ ಪ್ರೇರಣೆಯಿಂದ ತನಿಖೆ ಕೈಗೊಂಡ ಪೊಲೀಸರಿಗೆ ಮಹಿಳೆ ಅನುಭವಿಸಿದ ನರಕಯಾತನೆಯ ಬಗ್ಗೆ ತಿಳಿದು ಮರುಕ ಪಟ್ಟಿದ್ದಾನೆ. ನಂತರ, ಆಕೆಗಾದ ಅನ್ಯಾಯ ಮತ್ತೊಬ್ಬರಿಗೆ ಆಗಬಾರದೆನ್ನುವ ಉದ್ದೇಶದಿಂದ ಆರೋಪಿಗಳಿಗೆ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಪೊಲೀಸರು ಕ್ರಮ ಕೈಗೊಂಡು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಎರಡು ಮಕ್ಕಳ ತಾಯಿ ಸಹವಾಸ ಮಾಡಿ ಮಸಣ ಸೇರಿದ ಯುವಕ: ತಾಯಿಯ ಲೀವಿಂಗ್ ಪಾರ್ಟನರ್ ಕತೆ ಮುಗಿಸಿದ ಅಮ್ಮ ಮಕ್ಕಳು
ರಿಯಲ್ ಎಸ್ಟೇಟ್ ಉದ್ಯಮಿಯ ಬರ್ಬರ ಹತ್ಯೆ: ಮಗ ಓದುತ್ತಿದ್ದ ಶಾಲೆಯ ಮುಂದೆಯೇ ಕೃತ್ಯ