ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಇಂದಿರಾನಗರದಲ್ಲಿ ನಡೆದ ಘಟನೆ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಮೇ.27): ಹಿಂದೂ ಯುವಕನೋರ್ವ ಅನ್ಯಕೋಮಿನ ಮಹಿಳೆ ಮನೆಯಲ್ಲಿ ಇದ್ದ ಎಂಬ ಕಾರಣಕ್ಕೆ ಅದೇ ಕೋಮಿನ ಯುವಕರು ಹಿಂದೂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಇಂದಿರಾನಗರದಲ್ಲಿ ನಡೆದಿದೆ.
undefined
ಅಜಿತ್ ಪೂಜಾರಿ ಹಲ್ಲೆಗೊಳಗಾದ ಯುವಕ. ಹಲ್ಲೆಗೊಳಗಾದ ಅಜಿತ್ ಅನ್ಯಕೋಮಿನ ಮಹಿಳೆ ಮನೆಯಲ್ಲಿ ಇದ್ದ ಎಂದು ಅನ್ಯಕೋಮಿನ ಯುವಕರು ಮನಸ್ಸೋ ಇಚ್ಛೆ ಥಳಿಸಿದ್ದು, ತಲೆ, ಕಾಲು ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಜಿತ್, ನಾನು ಫೋನಿನಲ್ಲಿ ಮಾತನಾಡುತ್ತಿದ್ದೆ, ಆಗ ಐದಾರು ಯುವಕರ ಗುಂಪು ಏಕಾಏಕಿ ಹಲ್ಲೆ ಮಾಡಿದ್ದಾರೆ ಎಂದು ದೂರಿದ್ದಾನೆ.
ಚಿಕ್ಕಮಗಳೂರು: ಮಳೆಯಿಂದ ಹಾನಿಯಾದ ಕುಟುಂಬಕ್ಕೆ ಶಾಸಕ ತಮ್ಮಯ್ಯ ಸಹಾಯ
ವಾಲ್ ಡ್ರೂಪ್ ಒಳಗೆ ಇದ್ದ ಯುವಕ ?
ಅನ್ಯ ಕೋಮಿನ ಐದಾರು ಯುವಕರಿಗೆ ನನ್ನ ಮೇಲೆ ವೈಯಕ್ತಿಕ ದ್ವೇಷ ಇತ್ತು. ಹಾಗಾಗಿ, ನನ್ನ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಎದೆ, ಕಾಲು ಹಾಗೂ ತಲೆ ಬಳಿ ಕತ್ತಿ ಬೀಸಿದ್ದಾರೆ ಎಂದು ಹಲ್ಲೆಗೊಳಗಾದ ಅಜಿತ್ ತಿಳಿಸಿದ್ದಾನೆ. ಆದರೆ, ಅನ್ಯ ಕೋಮಿನ ಜನ, ಆತ ಬೆಳಗ್ಗಿನ ಜಾವ ಮನೆಗೆ ಬಂದಿದ್ದ ಜನ ಕಳ್ಳ... ಕಳ್ಳ... ಎಂದು ಕೂಗಿದ್ದಾರೆ. ಅಕ್ಕಪಕ್ಕದವರು ಬಂದು ಮನೆ ತುಂಬಾ ಹುಡುಕಾಡಿದ್ದಾರೆ. ಆದರೆ, ಆತ ಅಷ್ಟರಲ್ಲಿ ಅಡುಗೆಯಲ್ಲಿ ಪಾತ್ರೆ ಜೋಡಿಸಲು ಮಾಡಿರುವ ವಾಲ್ ಡ್ರೂಪ್ ಒಳಗೆ ಇದ್ದ. ಅಷ್ಟು ಬೇಗ ಮೇಲೆ ಹತ್ತಿ ಹೇಗೆ ವಾಲ್‍ಡ್ರೂಪ್ ಸೇರಿಕೊಂಡ ಅನ್ನೋದು ಯಕ್ಷಪ್ರಶ್ನೆಯಾಗಿದೆ. ಬಳಿಕ ಅವನನ್ನ ಸೆರೆಹಿಡಿದು ಯುವಕರು ಹಲ್ಲೆಗೈದಿದ್ದಾರೆ. ಆಸ್ಪತ್ರೆಗೆ ದಾಖಲಾದ ಯುವಕು ಬಣಕಲ್ ಠಾಣೆಯಲ್ಲಿ ಅನ್ಯಕೋಮಿನ ಆರು ಜನ ಯುವಕರ ಮೇಲೆ ದಾಳಿ ಮಾಡಿದ್ದಾರೆ ಎಂದು ದೂರು ದಾಖಲಿಸಿದ್ದಾನೆ.
ಯುವಕನ ವಿರುದ್ಧ ಮಹಿಳೆಯೂ ದೂರು :
ಮನೆಯಲ್ಲಿದ್ದ ಅನ್ಯಕೋಮಿನ ಮಹಿಳೆ ಕೂಡ ಮನೆಗೆ ಬಂದು ಅನುಚಿತವಾಗಿ ವರ್ತಿಸಿದ್ದಾನೆ ಎಂದು ದೂರು ನೀಡಿದ್ದಾಳೆ. ಆದರೆ, ಹಲ್ಲೆಗೊಳಗಾದ ಯುವಕ ರಸ್ತೆಯಲ್ಲಿ ಹೋಗುತ್ತಿದ್ದಾಗ ಹಲ್ಲೆ ಮಾಡಿದ್ರು ಅಂತಾನೆ. ಯುವಕರು ಮಹಿಳೆ ಮನೆಯ ವಾಲ್‍ಡ್ರೂಪ್‍ನಲ್ಲಿ ಇದ್ದಾಗ ಕೆಳಗಿ ಇಳಿಸಿ ಹಲ್ಲೆ ಮಾಡಿದ್ದಾರೆ. ಮಹಿಳೆ ಅನುಚಿತವಾಗಿ ವರ್ತನೆ ಮಾಡಿದ್ದಾನೆ ಎಂದು ದೂರು ನೀಡಿದ್ದಾಳೆ. ಇಲ್ಲಿ ಯಾರು ಸತ್ಯ-ಯಾರು ಸುಳ್ಳು ಅನ್ನೋದು ಯಕ್ಷಪ್ರಶ್ನೆಯಾಗಿದೆ. ಈ ಮಧ್ಯೆ ಕೆಲ ಸ್ಥಳಿಯರು ಗಂಡ ಫಾರಿನ್‍ನಲ್ಲಿ ಇರುವ ಆ ಮಹಿಳೆ ಹಾಗೂ ಹಲ್ಲೆಗೊಳಗಾದ ಯುವಕ ಸ್ನೇಹಿತರು ಅಂತಾರೆ. ಸತ್ಯ ಏನು ಅನ್ನೋದು ನಿಗೂಢವಾಗಿದ್ದು, ಹಲ್ಲೆ ಮಾಡಿರೋದು ನಿಜವಾಗಿದೆ. ಆದರೆ, ಕಾರಣ ಮಾತ್ರ ಸ್ಪಷ್ಟವಿಲ್ಲ. ಹಾಗಾಗಿ, ಯುವಕನ ದೂರು ದೂರಿಗೆ ಪ್ರತಿಯಾಗಿ ಯುವತಿಯೂ ದೂರು ನೀಡಿದ್ದು ಎರಡೂ ಕಡೆಯಿಂದ ಎರಡು ದೂರನ್ನ ಸ್ವೀಕರಿಸಿರುವ ಬಣಕಲ್ ಪೊಲೀಸರು ಎಫ್.ಐ.ಆರ್. ದಾಖಲಿಸದ್ದಾರೆ. ಪೊಲೀಸರು ನಿಷ್ಪಕ್ಷಪಾತವಾದ ತನಿಖೆಯಿಂದ ಸತ್ಯ ಹೊರಬರಬೇಕಿದೆ.