ಲೋಕಲ್ ಚಪ್ಪಲಿ ಮುಟ್ಟಲ್ಲ, ಬ್ರಾಂಡೆಂಡ್ ಶೂ ಎಲ್ಲೇ ಕಂಡ್ರೂ ಬಿಡೊಲ್ಲ! 7 ವರ್ಷ ಬರೋಬ್ಬರಿ 10 ಸಾವಿರ ಚಪ್ಪಲಿ ಕದ್ದ ಖದೀಮರು!

By Ravi JanekalFirst Published Jul 19, 2024, 12:34 PM IST
Highlights

ಲೋಕಲ್ ಚಪ್ಪಲಿ ಮುಟ್ಟಲ್ಲ, ಬ್ರಾಂಡೆಂಡ್ ಶೂ ಎಲ್ಲೆ ಕಂಡ್ರೂ ಬಿಡೊಲ್ಲ. ಬರೋಬ್ಬರಿ ಏಳು ವರ್ಷಗಳಿಂದ 10 ಸಾವಿರಕ್ಕೂ ಅಧಿಕ ಚಪ್ಪಲಿ ಕದ್ದರೂ ಪೊಲೀಸರಿಗೆ ಸಿಕ್ಕೇ ಇರಲಿಲ್ಲ.  ಏಳು ವರ್ಷದ ಬಳಿಕ ಖತರ್ನಾಕ್ ಕಳ್ಳನನ್ನು ವಿದ್ಯಾರಣ್ಯ ಪೊಲೀಸರು ಕೊನೆಗೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಂಗಳೂರು (ಜು.19): ಲೋಕಲ್ ಚಪ್ಪಲಿ ಮುಟ್ಟಲ್ಲ, ಬ್ರಾಂಡೆಂಡ್ ಶೂ ಎಲ್ಲೆ ಕಂಡ್ರೂ ಬಿಡೊಲ್ಲ. ಬರೋಬ್ಬರಿ ಏಳು ವರ್ಷಗಳಿಂದ 10 ಸಾವಿರಕ್ಕೂ ಅಧಿಕ ಚಪ್ಪಲಿ ಕದ್ದರೂ ಪೊಲೀಸರಿಗೆ ಸಿಕ್ಕೇ ಇರಲಿಲ್ಲ.  ಏಳು ವರ್ಷದ ಬಳಿಕ ಖತರ್ನಾಕ್ ಕಳ್ಳನನ್ನು ವಿದ್ಯಾರಣ್ಯ ಪೊಲೀಸರು ಕೊನೆಗೆ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೌದು. ಗಂಗಾಧರ್ ಹಾಗೂ ಯಲ್ಲಪ್ಪ ಬಂಧಿತ ಚಪ್ಪಲಿ ಚೋರರು. ಬೆಂಗಳೂರು ನಗರದಲ್ಲಿ ಬರೋಬ್ಬರಿ ಏಳು ವರ್ಷಗಳಿಂದ ಬ್ರಾಂಡೆಂಡ್ ಶೂ ಚಪ್ಪಲಿ ಎಗರಿಸುವುದನ್ನೇ ಕಾಯಕ ಮಾಡಿಕೊಂಡಿದ್ದ ಖದೀಮರು. ನಗರದ ಅಂಗಡಿ, ದೇವಸ್ಥಾನ, ಮದುವೆ ಕಾರ್ಯಕ್ರಮ ಎಲ್ಲೇ ಇದ್ರೂ ಈ ಖದೀಮರು ಹಾಜರು. ಕಣ್ಣುಮಿಟುಕಿಸುವಷ್ಟರಲ್ಲಿ ಬ್ರಾಂಡೆಂಡ್ ಶೂ, ಚಪ್ಪಲಿಗಳು ಮಂಗಮಾಯ ಮಾಡುತ್ತಿದ್ದ ಚಪ್ಪಲಿ ಚೋರರು. ಖದೀಮರನ್ನು ಬಂಧಿಸಿದಾಗ ಪೊಲೀಸರೇ ಶಾಕ್ ಆಗಿದ್ದಾರೆ. ಮನೆಯಲ್ಲಿ ಬರೋಬ್ಬರಿ 750 ಜೊತೆ ಬ್ರಾಂಡೆಂಡ್ ಶೂ ಮತ್ತು ಚಪ್ಪಲಿಗಳು ಪತ್ತೆಯಾಗಿವೆ. ಎಲ್ಲವನ್ನೂ ವಶಕ್ಕೆ ಪಡೆದುಕೊಂಡ ಪೊಲೀಸರು.

Latest Videos

ರೈಲುಗಳಲ್ಲಿ ಪ್ರಯಾಣಿಕರ ಮೊಬೈಲ್‌, ಚಿನ್ನ ಕದಿಯುತ್ತಿದ್ದ ರೈಲ್ವೆ ಸಿಬ್ಬಂದಿ ಬಂಧನ

ಚಪ್ಪಲಿ, ಶೂ ಅಷ್ಟೇ ಅಲ್ಲ, ಸಿಲಿಂಡರ್, ವಾಹನಗಳ ಬ್ಯಾಟರಿ ಸಹ ಕಳ್ಳತನ ಮಾಡ್ತಿದ್ದ ಗ್ಯಾಂಗ್. ಮನೆ, ಪಾರ್ಕ್, ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸುತ್ತಿದ್ದ ಬೈಕ್ ಸ್ಕೂಟಿಗಳ ಬ್ಯಾಟರಿ ಕಳುವು ಮಾಡುತ್ತಿದ್ದ ಖದೀಮರು. ಜನಜಂಗುಳಿಯಿರುವ ಬೆಂಗಳೂರಲ್ಲೇ ಎಲ್ಲಿಯೂ ಸಿಕ್ಕಿಬಿಳದಂತೆ ಕದಿಯುತ್ತಿದ್ದರೆಂದರೆ ಈ ಖದೀಮರು ಕೈಚಳಕ್ಕೆ ಎಂತದ್ದಿರಬಹುದು ಎಂದು ಪೊಲೀಸರು ಶಾಕ್ ಆಗಿದ್ದಾರೆ.

ಚಪ್ಪಲಿ ಶೂ ಕಳ್ಳತನ ಆದರೆ ಪೊಲೀಸರು ಇಷ್ಟು ಸೀರಿಯೆಸ್ ತಗೊಂಡು ಬೆನ್ನಹತ್ತಲ್ಲ ಅನ್ನೋ ಪ್ಲಾನ್‌ ಮಾಡಿಕೊಂಡೇ ಚಪ್ಪಲಿ ಶೂ ಕದಿಯುವುದನ್ನೇ ಕಾಯಕ ಮಾಡಿಕೊಂಡಿದ್ದ ಖದೀಮರು. ಕಳೆದ ಏಳು ವರ್ಷಗಳಿಂದ ನಗರದಲ್ಲಿ ಕಳ್ಳತನ ಮಾಡುತ್ತಿದ್ದರು. ಕದ್ದ ಶೂ, ಚಪ್ಪಲಿಗಳನ್ನ ಕ್ಲೀನ್ ಅಂಡ್ ಪಾಲೀಶ್ ಮಾಡಿ ಬಳಿಕ ಚೆನ್ನೈ, ಊಟಿ ಹಾಗೂ ಬೆಂಗಳೂರಿನ ಸಂಡೇ ಬಜಾರ್‌ನಲ್ಲಿ ಮಾರಾಟ ಮಾಡುತ್ತಿದ್ದ ಗ್ಯಾಂಗ್. ಏಳು ವರ್ಷಗಳಲ್ಲಿ ನಗರದ ಸಾವಿರಾರು ಮನೆಗಳಲ್ಲಿ ಶೂ ಚಪ್ಪಲಿ ಕದ್ದಿರುವ ಗ್ಯಾಂಗ್. ರಾತ್ರಿಯಾಗ್ತಿದ್ದಂತೆ ಆಟೋದಲ್ಲಿ ಬರ್ತಿದ್ದ ಗ್ಯಾಂಗ್ ಮನೆ ಮುಂದೆ ಬಾಗಿಲ ಬಳಿ ಬಿಟ್ಟಿರ್ತಿದ್ದ ಶೂ ಚಪ್ಪಲಿಗಳನ್ನು ಕದ್ದೊಯ್ಯುತ್ತಿದ್ದರು. ಈ ಬಗ್ಗೆ ಅನೇಕ ಪ್ರಕರಣಗಳು ಪೊಲೀಸರ ಗಮನಕ್ಕೆ ಬಂದಿದ್ದವು. ದೂರು ದಾಖಲಿಸಿಕೊಂಡು ಖದೀಮರನ್ನು ಪತ್ತೆ ಹಚ್ಚಿ ಬಂಧಿಸುವ ವೇಳೆ ಮನೆಯಲ್ಲೇ 10 ಸಾವಿರಕ್ಕೂ ಅಧಿಕ ಚಪ್ಪಲಿಗಳು ಪತ್ತೆಯಾಗಿವೆ.

ಆಶಾ ಕಾರ್ಯಕರ್ತೆಯರ ಟ್ಯಾಬ್ ಕದ್ದ ಆಂಬುಲೆನ್ಸ್ ಚಾಲಕ: ಇತ್ತ ಏಳು ಡ್ರಗ್ಸ್ ದಂಧೆಕೋರರ ಸೆರೆ

ಸದ್ಯ ಆರೋಪಿಗಳನ್ನು ಬಂಧಿಸಿದ್ದು, ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಕದ್ದ ಮಾಲು ವಶಕ್ಕೆ ಪಡೆದುಕೊಂಡಿರುವ ಪೊಲೀಸರು. ಇನ್ನೇನು ಕಳ್ಳತನ ಮಾಡಿದ್ದಾರೋ ಖದೀಮರು. ಪೊಲೀಸರ ಲಾಠಿ ಏಟಿಗೆ ಒಂದೊಂದೇ ಬಾಯಿಬಿಡಬಹುದು.

click me!