ಅಶ್ಲೀಲ ವಿಡಿಯೋ ಸರೆ ಮತ್ತು ವೈರಲ್ ಮಾಡಿದ್ದಕ್ಕೆ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಎಫ್‌ಐಆರ್

By Sathish Kumar KHFirst Published Jun 25, 2024, 12:45 PM IST
Highlights

ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಅಶ್ಲೀಲ ವಿಡಿಯೋ ಸಂಗ್ರಹ ವೈರಲ್ ಮಾಡಿದ ಪ್ರಕರಣದಲ್ಲಿ ಪುನಃ 4 ದಿನಗಳ ಕಾಲ ವಿಚಾರಣೆಗೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ವಶಕ್ಕೆ ಒಪ್ಪಿಸಿ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ.

ಬೆಂಗಳೂರು (ಜೂ.25): ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಅಶ್ಲೀಲ ವಿಡಿಯೋ ಸಂಗ್ರಹ ವೈರಲ್ ಮಾಡಿದ ಪ್ರಕರಣದಲ್ಲಿ ಪುನಃ 4 ದಿನಗಳ ಕಾಲ ವಿಚಾರಣೆಗೆ ವಿಶೇಷ ತನಿಖಾ ತಂಡದ (ಎಸ್‌ಐಟಿ) ವಶಕ್ಕೆ ಒಪ್ಪಿಸಿ ನ್ಯಾಯಾಲಯದಿಂದ ಆದೇಶ ಹೊರಡಿಸಲಾಗಿದೆ.

ಪ್ರಜ್ವಲ್ ರೇವಣ್ಣ ವಿರುದ್ಧ ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್ ಐ ಆರ್ ದಾಖಲಿಸಲಾಗಿದೆ. ಲೈಂಗಿಕ ದೌರ್ಜನ್ಯ ಆರೋಪದ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಪ್ರಜ್ವಲ್ ರೇವಣ್ಣನನ್ನು ಬಾಡಿವಾರೆಂಟ್ ಮೇಲೆ ವಶಕ್ಕೆ ನೀಡುವಂತೆ ಎಸ್ ಐಟಿ ಕೇಳಿತ್ತು. 42ನೇ ಎಸಿಎಂಎಂ ಕೋರ್ಟ್ ನಲ್ಲಿ ಈ ಅರ್ಜಿ ವಿಚಾರಣೆ ಮಾಡಲಾಗಿದ್ದು, ಆರೋಪಿ ಪ್ರಜ್ವಲ್ ರೇವಣ್ಣನನ್ನು ಜೈಲಿನಿಂದಲೇ ವಿಡಿಯೋ ಕಾನ್ಪರೆನ್ಸ್ ಮೂಲಕ ಹಾಜರುಪಡಿಸಲಾಗಿತ್ತು.

Latest Videos

ಪ್ರಜ್ವಲ್ ರೇವಣ್ಣಗೆ ವಿಪರೀತ ಬೆನ್ನುನೋವು; ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಅನುಮತಿ ಕೊಡಿ

ವೀಡಿಯೋ ಕಾನ್ಫರೆನ್ಸ್ ಮೂಲಕ ಪ್ರಜ್ವಲ್ ರೇವಣ್ಣಗೆ ನಾಲ್ಕನೇ ಎಫ್ ಐ ಆರ್ ಬಗ್ಗೆ ನ್ಯಾಯಾಧೀಶರು ಮಾಹಿತಿ ನೀಡಿದರು. ನಿಮ್ಮ ಮೇಲೆ ಮತ್ತೊಂದು ಎಫ್ ಐ ಆರ್ ಆಗಿದೆ. ನಿಮ್ಮ ವಕೀಲರು ಇಲ್ಲೇ ಇದ್ದಾರೆ. ವೀಡಿಯೋ ಕಾನ್ಫರೆನ್ಸ್ ವೇಳೆ ಮತ್ತೊಂದು ಎಫ್ ಐ ಆರ್ ಬಗ್ಗೆ ಸುದ್ದಿ ತಿಳಿದು ಪ್ರಜ್ವಲ್ ಆತಂಕಕ್ಕೊಳಗಾದರು. ಈ ವೇಳೆ ನ್ಯಾಯಾಧೀಶರು ಪ್ರಜ್ವಲ್ ಪ್ರಕರಣವನ್ನು ಸ್ವಲ್ಪ ಕಾಲ ಮುಂದೂಡಿಕೆ ಮಾಡಿದ್ದರು.  ಬೇರೆ ಕೇಸ್ ವಿಚಾರಣೆ ಬಳಿಕ ತೆಗೆದುಕೊಳ್ಳುವುದಾಗಿ ಪ್ರಜ್ವಲ್ ಪರ ವಕೀಲ ಅರುಣ್ ಮಾಹಿತಿ ನೀಡಿದರು. 

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್ ವಿಚಾರಣೆ ಮತ್ತೆ ಆರಂಭ ಮಾಡಿದಾಗ ಎಸ್ ಐಟಿ ಪರ ವಕೀಲ ಜಗದೀಶ್ ವಾದ ಮಂಡನೆ ಮಾಡಿದರು. ಪ್ರಜ್ವಲ್ ರೇವಣ್ಣನ ವಾಯ್ಸ್ ಸ್ಯಾಪಲ್ಸ್ ಪಡೆಯಬೇಕು. ಹಾಸನಕ್ಕೆ ಕರೆದುಕೊಂಡು ಹೋಗಿ ಮಹಜರ್ ಮಾಡಬೇಕು. ಕೇಸ್ ಸಂಬಂಧ ಹೇಳಿಕೆ ದಾಖಲಿಸಬೇಕು. ಹೀಗಾಗಿ, ಕಸ್ಟಡಿಗೆ ನೀಡುವಂತೆ ಎಸ್ ಐಟಿ ಪರ ವಕೀಲ ಜಗದೀಶ್ ಮನವಿ ಮಾಡಿದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಜ್ವಲ್ ಪರ ವಕೀಲ ಅರುಣ್ ಅವರು ಕಸ್ಟಡಿಗೆ ನೀಡದಂತೆ ಮನವಿ ಮಾಡಿದರು. ಎಸ್‌ಐಟಿ ಪ್ರತಿನಿತ್ಯ ಕೇಸ್ ದಾಖಲಿಸುತ್ತಿದ್ದಾರೆ. ಇದು ರಾಜಕೀಯ ಪ್ರೇರಿತ ದೂರುಗಳು ಎಂದು ವಾದ ಮಾಡಿದರು.

ನಂದಿನಿ ಹಾಲಿನ ದರ 2 ರೂ ಹೆಚ್ಚಳ ಮಾಡಿ ಕೆಎಂಎಫ್ ಆದೇಶ, ಹೊಸ ದರ ಪಟ್ಟಿ ಇಲ್ಲಿದೆ

ಆದರೆ, ವಾದ ವಿವಾದ ಆಲಿಸಿದ ನ್ಯಾಯಾಧೀಶರು ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣನನ್ನು ಎಸ್‌ಐಟಿ ಕಸ್ಟಡಿಗೆ ಮುಂದಾದ 42 ನೇ ಎಸಿಎಂಎಂ ನ್ಯಾಯಾಧೀಶರಾದ ಶಿವಕುಮಾರ್ ಅವರು ಮುಂದಿನ ನಾಲ್ಕು ದಿನಗಳ ಕಾಲ (ಜೂ.29ರವರೆಗೆ) ಎಸ್‌ಐಟಿ ಕಸ್ಟಡಿಗೆ ವಹಿಸಿ ಆದೇಶ ಹೊರಡಿಸಿದರು. 

click me!