ತಂಗಿಯ ಮೇಲೇ ಅತ್ಯಾಚಾರಕ್ಕೆ ಮುಂದಾದ| ಯುವತಿ ವಿರೋಧಿಸಿದಾಗ ಕತ್ತು ಕೊಯ್ದ| ಗಂಭೀರ ಸ್ಥಿತಿಯಲ್ಲಿದ್ದ ಯುವಕ, ಯುವತಿ ಆಸ್ಪತ್ರೆಗೆ ದಾಖಲು
ಆಗ್ರಾ[ಮಾ.06]: ಪ್ರೇಮ ಸೌಧ ತಾಜ್ ಮಹಲ್ ಇರುವ ಆಗ್ರಾದಲ್ಲಿ, ಅಣ್ಣನೊಬ್ಬನ ಮೇಲೆ ತಂಗಿಯನ್ನು ರೇಪ್ ಮಾಡಲು ಯತ್ನಿಸಿದ ಆರೋಪ ಕೇಳಿ ಬಂದಿದೆ. ಅತ್ಯಾಚಾರಗೈಯ್ಯಲು ವಿಫಲವಾದಾಗ ಆಕೆಯ ಕತ್ತು ಕೊಯ್ದು ಕೊಲೆಗೈದಿದ್ದಲ್ಲದೇ, ತಾನೂ ಆತ್ಮಹತ್ಯಗೆ ಶರಣಾಗಿದ್ದಾನೆ.
ಮದುವೆ ಆಗ್ತೀನಿ ಅಂತ ಅಪ್ರಾಪ್ತೆ ಮೇಲೆ ಅತ್ಯಾಚಾರ : ಅರೆಸ್ಟ್
ಹೌದು ಇಲ್ಲಿನ ತಾಜ್ ಗಂಜ್ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಇಲ್ಲೊಬ್ಬ ಯುವಕ ತನಗೆ ಅಣ್ಣನ ಸ್ಥಾನಮಾನ ನೀಡಿದ್ದ ತಂಗಿಯನ್ನೇ ರೇಪ್ ಮಾಡಲು ಮುಂದಾಗಿದ್ದಾನೆ. ಇದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದಾಗ ಕೋಪಗೊಂಡ ಆತ ಆಕೆಯ ಕತ್ತು ಕೊಯ್ದಿದ್ದಾನೆ. ಯುವತಿಯ ಚೀರಾಟ ಆಲಿಸಿ ಸ್ಥಳೀಯರು ಸ್ಥಳಕ್ಕಾಗಮಿಸುತ್ತಿದ್ದಂತೆಯೇ ಭಯ ಬಿದ್ದ ಆತ ಕೂಡಲೇ ಕೈಯ್ಯಲ್ಲಿದ್ದ ಚಾಕುವಿನಿಂದ ತನ್ನ ಕತ್ತನ್ನೂ ಕೊಯ್ದುಕೊಂಡಿದ್ದಾನೆ.
ಗಂಭೀರ ಸ್ಥಿತಿಯಲ್ಲಿದ್ದ ಇಬ್ಬರನ್ನೂ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಇಲ್ಲಿನ ಆಸ್ಪತ್ರೆಯಲ್ಲಿ ಇವರಿಗೆ ಚಿಕಿತ್ಸೆ ಮುಂದುವರೆಸಲಾಗಿದ್ದು, ಈ ಕುರಿತು ಇನ್ನಷ್ಟೇ ತನಿಖೆ ಆರಂಭವಾಗಬೇಕಿದೆ.
ನಿರ್ಭಯಾ ದೋಷಿಗಳ ಆಟ ಅಂತ್ಯ, ಗಲ್ಲಿನಿಂದ ತಪ್ಪಿಸ್ಕೊಳ್ಳೋದು ಅಸಾಧ್ಯ!