ಆರೋಪಿ ಅಂಕುರ್ ಕುಮಾರ್ ನಗರದ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಆಸ್ಸಾಂ ಮೂಲದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ರಾಜಸ್ಥಾನಕ್ಕೆ ತೆರಳುವ ಮುನ್ನ ಚಿನ್ನದ ಗಟ್ಟಿ ಮಾರಾಟ ಮಾಡಿ ಪಡೆದು ಕೊಂಡಿದ್ದ ಲಕ್ಷಾಂತರ ರುಪಾಯಿ ಹಣದೊಂದಿಗೆ ಪ್ರೇಯಸಿಯನ್ನು ಕರೆದುಕೊಂಡು ಮುಂಬೈ, ಗೋವಾ, ರಾಜಸ್ಥಾನ ಸೇರಿದಂತೆ ದೇಶದ ವಿವಿಧ ಪ್ರವಾಸಿ ತಾಣಗಳಿಗೆ ತೆರಳಿ ಮೋಜು-ಮಸ್ತಿ ಮಾಡಿದ್ದಾನೆ.
ಬೆಂಗಳೂರು(ಅ.09): ಚಿನ್ನಾಭರಣಗಳಿಗೆ ಪಾಲಿಶ್ ಮಾಡುವ ಹಾಗೂ ಹರಳುಗಳನ್ನು ಕೂರಿಸುವ ನೆಪದಲ್ಲಿ ಆಭರಣ ಅಂಗಡಿ 1ಕೆ.ಜಿ 277 ಗ್ರಾಂ ತೂಕದ ಚಿನ್ನಾಭರಣ ಪಡೆದು ವಂಚಿಸಿ ಪರಾರಿಯಾಗಿದ್ದ ವ್ಯಕ್ತಿಯೊಬ್ಬನನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನ ಮೂಲದ ಅಂಕುರ್ ಕುಮಾರ್ ಡಂಗ ರ್ವಾಲ್ (32) ಬಂಧಿತ ಆರೋಪಿಯಿಂದ 38 ಲಕ್ಷ ಮೌಲ್ಯದ 384 ಗ್ರಾಂ ತೂಕದ ಚಿನ್ನದ ಗಟ್ಟಿ ಹಾಗೂ 10.99 ಲಕ್ಷ ನಗದು ಜಪ್ತಿ ಮಾಡಲಾಗಿದೆ. ನಗರ್ತಪೇಟೆ ಜುವೆಲ್ಲರಿ ಅಂಗಡಿ ಮಾಲೀಕರೊಬ್ಬರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿ ಕರೆತರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಆರೋಪಿ ಅಂಕುರ್ ಕುಮಾರ್ ಕಳೆದ ಐದಾರು ವರ್ಷಗಳಿಂದ ನಗರದ ನಗರ್ತಪೇಟೆ ಯಲ್ಲಿ ನೆಲೆಸಿದ್ದ. ಪರಿಚಿತ ಆಭರಣ ಅಂಗಡಿ ಮಾಲೀಕರಿಂದ ಚಿನ್ನಾಭರಣಗಳನ್ನು ಪಡೆದು ಪಾಲಿಶ್ ಮಾಡುವುದು ಹಾಗೂ ಆಭರಣಗಳಿಗೆ ಹರಳುಗಳನ್ನು ಕೂರಿಸುವ ಕೆಲಸ ಮಾಡುತ್ತಿದ್ದ. ಕಳೆದ ಮೇ ತಿಂಗಳಲ್ಲಿ ನಗರ್ತಪೇಟೆಯ ಜುವೆಲ್ಲರಿ ಅಂಗಡಿ ಮಾಲೀಕರೊಬ್ಬ ರಿಂದ 1 ಕೆ.ಜಿ. 277 ಗ್ರಾಂ ಚಿನ್ನಾಭರಣಗಳನ್ನು ಪಡೆದು 1 ತಿಂಗಳೊಳಗೆ ಪಾಲಿಶ್ ಮಾಡಿ, ಹರಳು ಗಳನ್ನು ಕೂರಿಸಿ ವಾಪಾಸ್ ನೀಡುವುದಾಗಿ ಹೇಳಿದ್ದ.
ಬೆಂಗಳೂರು: ಪಾರಿವಾಳ ಹಿಡಿವ ಸೋಗಿನಲ್ಲಿ ಮನೆ ದೋಚುತ್ತಿದ್ದ ಖತರ್ನಾಕ್ ಖದೀಮ ಅರೆಸ್ಟ್
ಅಂಗಡಿ ಖಾಲಿ ಮಾಡಿ ಪರಾರಿ:
ಎರಡು ತಿಂಗಳು ಕಳೆದರೂ ಆರೋಪಿಯು ಚಿನ್ನಾಭರಣ ವಾಪಾಸ್ ನೀಡಿರಲಿಲ್ಲ. ಮೊಬೈಲ್ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಬಗ್ಗೆ ಅನುಮಾನಗೊಂಡು ಆತನ ಅಂಗಡಿ ಬಳಿ ತೆರಳಿ ನೋಡಿದಾಗ ಅಂಗಡಿ ಖಾಲಿ ಮಾಡಿಕೊಂಡು ಆರೋಪಿಯು ಪರಾರಿ ಆಗಿರುವುದು ಗೊತ್ತಾಗಿದೆ. ಬಳಿಕ ಆಭರಣ ಅಂಗಡಿ ಮಾಲೀಕರು ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದರು.
ರಾಜಸ್ಥಾನದಲ್ಲಿ ಬಂಧನ:
ತನಿಖೆಗಿಳಿದ ಪೊಲೀಸರು, ಆರೋಪಿಯ ಪೂರ್ವಾಪರದ ಬಗ್ಗೆ ಮಾಹಿತಿ ಸಂಗ್ರ ಹಿಸಿದರು. ರಾಜಸ್ಥಾನದ ಬಿಲ್ವಾರ್ ಜಿಲ್ಲೆ ಕಲಿಯಾಸ್ ಗ್ರಾಮದ ಮನೆಯಲ್ಲಿ ಆರೋಪಿಯು ತಲೆಮರೆಸಿ ಕೊಂಡಿದ್ದವನನ್ನು ಬಂಧಿಸಿದ್ದಾರೆ.
ಬೆಂಗಳೂರು ಜಯಶ್ರೀ ಬಾರ್‌ನಲ್ಲಿ ಕೇವಲ 20 ರೂ.ಗೆ ಆಫ್ ಮರ್ಡರ್!
ಪ್ರೇಯಸಿ ಜತೆ ಲಕ್ಷುರಿ ಹೋಟೆಲಲ್ಲಿ ಮೋಜು
ಆರೋಪಿ ಅಂಕುರ್ ಕುಮಾರ್ ನಗರದ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದ ಆಸ್ಸಾಂ ಮೂಲದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ರಾಜಸ್ಥಾನಕ್ಕೆ ತೆರಳುವ ಮುನ್ನ ಚಿನ್ನದ ಗಟ್ಟಿ ಮಾರಾಟ ಮಾಡಿ ಪಡೆದು ಕೊಂಡಿದ್ದ ಲಕ್ಷಾಂತರ ರುಪಾಯಿ ಹಣದೊಂದಿಗೆ ಪ್ರೇಯಸಿಯನ್ನು ಕರೆದುಕೊಂಡು ಮುಂಬೈ, ಗೋವಾ, ರಾಜಸ್ಥಾನ ಸೇರಿದಂತೆ ದೇಶದ ವಿವಿಧ ಪ್ರವಾಸಿ ತಾಣಗಳಿಗೆ ತೆರಳಿ ಮೋಜು-ಮಸ್ತಿ ಮಾಡಿದ್ದಾನೆ. ಪ್ರೇಯಸಿ ಜತೆಗೆ ವಿಮಾನದಲ್ಲಿ ಸುತ್ತಾಡಿ, ಐಷಾರಾಮಿ ಹೋಟೆಲ್ಗಳಲ್ಲಿ ತಂಗಿ ಸಾಕಷ್ಟು ಹಣವನ್ನು ಖರ್ಚು ಮಾಡಿದ್ದಾನೆ. ಬಳಿಕ ರಾಜಸ್ಥಾನಕ್ಕೆ ತೆರಳಿ ತಲೆಮರೆಸಿಕೊಂಡಿದ್ದ ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ.
ಚಿನ್ನಾಭರಣ ಮಾರಾಟ ಮಾಡಿ ರಶೀದಿ ಪಡೆದಿದ್ದ
ಆರೋಪಿ ಅಂಕುರ್ ಕುಮಾರ್ 1 ಕೆ.ಜಿ. 277 ಗ್ರಾಂ ಚಿನ್ನಾಭರಣಗಳನ್ನು ಕರಗಿಸಿ ಗಟ್ಟಿಗಳಾಗಿ ಪರಿವರ್ತಿಸಿದ್ದ. ಬಳಿಕ ನಗರದ ಪರಿಚಿತ ವಿವಿಧ ಆಭರಣ ಅಂಗಡಿಗಳಿಗೆ ಆ ಚಿನ್ನದ ಗಟ್ಟಿ ಮಾರಾಟ ಮಾಡಿದ್ದ. ಈ ಪೈಕಿ ಕೆಲವರು ಆಭರಣ ಅಂಗಡಿಗಳಿಂದ ಹಣ ಪಡೆದರೆ, ಕೆಲವು ಅಂಗಡಿಗಳಿಂದ ತಡವಾಗಿ ಹಣ ಪಡೆಯುವುದಾಗಿ ಹೇಳಿ ಚಿನ್ನದ ಗಟ್ಟಿ ಮಾರಾಟ ಮಾಡಿರುವುದಕ್ಕೆ ರಿಶೀದಿ ಮಾತ್ರ ಪಡೆದು ನಗರದಿಂದ ಪರಾರಿಯಾಗಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.