
ಬೆಂಗಳೂರು(ಜೂ.03): ಹೆಸರಿಗೆ ಮದ್ಯ ಮತ್ತು ಮಾದಕ ವ್ಯಸನ ಮುಕ್ತಿ ಕೇಂದ್ರ, ಆದರೆ ಅದನ್ನ ನಡೆಸುವ ಮುಖ್ಯಸ್ಥ ಅಸಲಿಗೆ ಮಾದಕವಸ್ತು ಮಾರಾಟದಲ್ಲಿ ಭಾಗಿಯಾದ ಘಟನೆ ನಗರದ ಕೆಂಗೇರಿಯಲ್ಲಿ ನಡೆದಿದೆ. ಸುಹಾಸ್ ಎಂಬಾತನೇ ಮಾದಕವಸ್ತು ಮಾರಾಟದಲ್ಲಿ ಭಾಗಿಯಾದ ಆರೋಪಿಯಾಗಿದ್ದಾನೆ.
ಆರೋಪಿ ಸುಹಾಸ್ ಕೆಂಗೇರಿಯಲ್ಲಿ ಮಾದಕ ವ್ಯಸನ ಮುಕ್ತಿ ಕೇಂದ್ರ ನಡೆಸುತ್ತಿದ್ದಾನೆ. ಆದರೆ ಅಸಲಿಗೆ ಈತನೇ ಎಕ್ಸ್'ಟೆಸಿ ಪಿಲ್ಸ್ ಮಾರಾಟ ಮಾಡುತ್ತಿದ್ದನಂತೆ.
ವ್ಯಸನವನ್ನ ಬಿಡಲೆಂದು ಬಂದವರಿಗೆ ವ್ಯಸನ ಇರೋದನ್ನೇ ಆರೋಪಿ ಸುಹಾಸ್ ಬಂಡವಾಳ ಮಾಡಿಕೊಂಡಿದ್ದನು. ಆರೋಪಿ ಸುಹಾಸ್‌ನನ್ನ ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಕೆಂಗೇರಿಯಲ್ಲಿ ರಿಹ್ಯಾಬಿಟೇಷನ್ ಸೆಂಟರ್ ನಡೆಸ್ತಿದ್ದ ಸುಹಾಸ್, ಹೊಸಕೆರೆಹಳ್ಳಿ ಬಳಿ ಎಕ್ಸ್'ಟೆಸಿ ಪಿಲ್ಸ್ ಮಾರಾಟ ಮಾಡಲು ಯತ್ನಿಸೋ ವೇಳೆ ಖಾಕಿ ಬಲೆಗೆ ಬಿದ್ದಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ