ಬಡ್ಡಿ ಹಣದ ವಿಚಾರವಾಗಿ ಗಲಾಟೆ: ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು

Published : Oct 06, 2023, 12:26 PM ISTUpdated : Oct 06, 2023, 03:51 PM IST
ಬಡ್ಡಿ ಹಣದ ವಿಚಾರವಾಗಿ ಗಲಾಟೆ: ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು

ಸಾರಾಂಶ

ಬಡ್ಡಿ ಹಣದ ವಿಚಾರವಾಗಿ ನಡೆದ ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿರ್ಯೋವನ್ನು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.‌ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಅಮೃತೂರು ಗ್ರಾಮದಲ್ಲಿ ಘಟನೆ ನಡೆದಿದೆ. 

ವರದಿ: ಮಹಂತೇಶ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ತುಮಕೂರು

ತುಮಕೂರು (ಅ.06): ಬಡ್ಡಿ ಹಣದ ವಿಚಾರವಾಗಿ ನಡೆದ ಗಲಾಟೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿರ್ಯೋವನ್ನು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.‌ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಅಮೃತೂರು ಗ್ರಾಮದಲ್ಲಿ ಘಟನೆ ನಡೆದಿದೆ. ಅಮೃತೂರು ಗ್ರಾಮದ ವಾಸಿ ಅಬ್ದುಲ್ ಖಲೀಲ್ (55) ಮೃತ ದುರ್ದೈವಿ. ತೌಸಿಪ್‌ಪಾಷ, ಆಸೀಪ್‌ಪಾಷ, ಶಬಾನಾಬಾನು, ಸನ್ಮಾ ಸುಲ್ತಾನ್ ಹಲ್ಲೆ ನಡೆದಿಸಿದ ಆರೋಪಿಗಳಾಗಿದ್ದು ಅವರ ವಿರುದ್ದ ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನೆಲೆ: ಮೃತ  ಅಬ್ದುಲ್ ಖಲೀಲ್ ಮಗಳ ಮದುವೆಗಾಗಿ ಅಮೃತೂರು ಗ್ರಾಮದ ಪೇಟೇ ಬೀದಿಯ ವಾಸಿ ತೌಸೀಪ್‌ಪಾಷನಿಂದ 50 ಸಾವಿರ ರೂಪಾಯಿಗಳನ್ನು ಸಾಲ ಪಡೆದಿದ್ರು. ಇದಕ್ಕೆ  ಪ್ರತಿ ತಿಂಗಳು ಐದು ಸಾವಿರ ರೂಪಾಯಿಗಳನ್ನು ಬಡ್ಡಿ ಹಣ ಕಟ್ಟುತ್ತಿದ್ದರು, ಆದರೆ ಈ ತಿಂಗಳು ಬಡ್ಡಿ ಹಣವನ್ನು ಕೊಡಲು ಒಂದು ದಿನ ತಡವಾಗಿದಕ್ಕೆ ತೌಸಿಪ್ ಪಾಷ ಅಬ್ದುಲ್ ಮೇಲೆ ಗಲಾಟೆ ನಡೆಸಿದ್ದಾನೆ. ತೌಸಿಪ್‌ಪಾಷನ್ನು ಕೋಳಿ ಕಟ್ ಮಾಡುವ ಚಾಕುವಿನಿಂದ ಅಬ್ದುಲ್ ಕಲೀಲ್  ತಲೆಗೆ ಹೊಡೆದಿದ್ದಾನೆ. 

ಯಾದಗಿರಿ ನಗರದಲ್ಲಿ ಹೆಚ್ಚಾದ ಕಳ್ಳತನ ಪ್ರಕರಣಗಳು: ಕಳ್ಳರನ್ನು ಹಿಡಿಯಲು ಪೋಲಿಸರ ಹರಸಾಹಸ

ಇದೇ ವೇಳೆ ತೌಸಿಪ್ ಪಾಷ ಕುಟುಂಬದ ಶಬಾನಾ ಬೇಗಂ, ನಗ್ಮಾಸುಲ್ತಾನ್, ಅತ್ತಿಹಾರ್ ಕೂಡ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಅಬ್ದುಲ್ ಕಲೀಲ್ ಅನ್ನು  ಅಮೃತೂರು, ಕುಣಿಗಲ್  ಹಾಗೂ ತುಮಕೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ನಂತರ ಹಚ್ಚಿನ‌ ಚಿಕಿತ್ಸೆಗಾಗಿ ಬೆಂಗಳೂರು ನಿಮಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಬ್ದುಲ್ ಕಲೀಲ್  ಕೊನೆಯುಸಿರೆಳೆದಿದ್ದಾರೆ. ಅಮೃತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬಾಲಿವುಡ್ ನಿರ್ದೇಶಕ ವಿಕ್ರಂ ಭಟ್, ಪತ್ನಿ ಶ್ವೇತಾಂಬರಿ ಭಟ್ ಬಂಧನ; ಅಂತಿಂಥ ವಂಚನೆ ಕೇಸಲ್ಲ ಇದು ಅಂತೀರಾ?!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!