
ಬೆಂಗಳೂರು: (ನ.14): ಶಾಲೆಯ ಪ್ರಿನ್ಸಿಪಾಲ್ ಮಗನ ಸೇವೆ ಮಾಡಲಿಲ್ಲವೆಂದು 5ನೇ ತರಗತಿ ವಿದ್ಯಾರ್ಥಿನಿ ಮೇಲೆ ಬೆತ್ತದಿಂದ ಹಲ್ಲೆ ಮಾಡಿದ ಘಟನೆ ದೇವನಹಳ್ಳಿ ತಾಲೂಕಿನ ವಿಜಯಪುರ ಪಟ್ಟಣದ ಮಂಡಿಬೆಲೆ ರಸ್ತೆಯಲ್ಲಿರುವ ವಿಸ್ಡಂ ಅಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದಿದೆ.
ಭವ್ಯ ಹಲ್ಲೆಗೊಳಗಾದ ಮಗು. ಪಟ್ಟಣದ ಪ್ರಭಾವತಿ ಹಾಗೂ ಆಂಜಿನಪ್ಪ ದಂಪತಿಯ ಪುತ್ರಿಯಾಗಿರುವ ವಿದ್ಯಾರ್ಥಿನಿ.ಉಷಾ ಕಿರಣ್ ಮಗುವಿನ ಮೇಲೆ ಹಲ್ಲೆ ಮಾಡಿರುವ ಪ್ರಿನ್ಸಿಪಾಲ್.
ಶಾಲೆಯ ಪ್ರಿನ್ಸಿಪಲ್ ಉಷಾಕಿರಣ್ ಗೆ ವಿಕಲಚೇತನ ಮಗನಿದ್ದಾನೆ. ಅದೇ ಶಾಲೆಯಲ್ಲಿ ಮಗನನ್ನು ನೋಡಿಕೊಳ್ಳಲು ಕೇರ್ ಟೇಕರ್ ಆಗಿ ಮಹಿಳೆಯನ್ನ ನೇಮಿಸಿಕೊಂಡಿದ್ದ ಪ್ರಿನ್ಸಿಪಾಲ್. ಆದರೆ ಆ ಮಹಿಳೆಗೆ ವಿದ್ಯಾರ್ಥಿನಿ ಭವ್ಯ ಸಹಕಾರ ನೀಡಲಿಲ್ಲ ಎಂಬ ಕಾರಣಕ್ಕೆ ಮಗುವಿನ ಮೇಲೆ ಬೆತ್ತದಿಂದ ಹಿಗ್ಗಾಮುಗ್ಗಾ ಥಳಿಸಿರುವ ಪ್ರಿನ್ಸಿಪಾಲ್. ಬೆತ್ತದ ಹೊಡೆತಕ್ಕೆ ನೋವಿನಿಂದ ಕಿರುಚಾಡಿದರೂ ಬಿಡದ ಅಮಾನವೀಯವಾಗಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ.
ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಾಟಗಾರ ಸಹೋದರರಿಂದ ಹಲ್ಲೆ; ಕರ್ತವ್ಯನಿರತ ಪೊಲೀಸ್ ಪೇದೆ ಗಂಭೀರ ಗಾಯ!
ಇಂದು ಮಕ್ಕಳ ದಿನಾಚರಣೆ ಹಿನ್ನೆಲೆ ಸಂಭ್ರಮದಿಂದ ಶಾಲೆಗೆ ಬಂದಿದ್ದು ವಿದ್ಯಾರ್ಥಿನಿ. ಮಕ್ಕಳ ದಿನಾಚರಣೆಯಂದೇ ಪ್ರಿನ್ಸಿಪಾಲ್ ರಿಂದ ಮಕ್ಕಳ ಮೇಲೆ ದೌರ್ಜನ್ಯ ನಡೆದಿರುವುದು. ಹಲ್ಲೆ ಮಾಡಿದ ವಿಚಾರ ಪೋಷಕರಿಗೆ ತಿಳಿದು ಶಾಲೆಗೆ ಬಂದು ಉಷಾ ಕಿರಣ್ ಗೆ ದಿಗ್ಬಂಧನ ಆಕ್ರೋಶ ಹೊರಹಾಕಿದರು. ಸದ್ಯ ಸ್ಥಳಕ್ಕೆ ವಿಜಯಪುರ ಪೊಲೀಸರು ದೌಡಾಯಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ