ಅಚಾತುರ್ಯದಿಂದ ಬ್ರೇಕ್ ಬದ್ಲು ಆಕ್ಸಿಲರೇಟರ್ ಒತ್ತಿದ ವೈದ್ಯನ ಜೀವವೇ ಹೋದ ಘಟನೆ ಇಂದೋರ್‍ನಲ್ಲಿ ನಡೆದಿದ್ದು, ಇದರ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೆಲವೇ ಸೆಕೆಂಡುಗಳಲ್ಲಿ ಮಾಡುವ ಅಚಾತುರ್‍ಯ, ತೋರುವ ಆತುರದ ಬುದ್ಧಿ ಜೀವಕ್ಕೇ ಮುಳುವಾಗುವುದು ಇದೆ. ಒಂದೋ ತಮ್ಮ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ, ಇಲ್ಲವೇ ಬೇರೆಯವರ ಜೀವವನ್ನೇ ನಾಶ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ ವಾಹನ ಚಾಲನೆ ಮಾಡುವ ಸಂದರ್ಭದಲ್ಲಿ ಮೊಬೈಲ್ ಬಳಕೆಯಿಂದಾಗಿ ಆಗುವ ಕಂಟಕಗಳಿಗೆ ಲೆಕ್ಕವೇ ಇಲ್ಲ. ಕಿವಿಯಲ್ಲಿ ಮೊಬೈಲ್ ಇಟ್ಟುಕೊಂಡು ತಲೆಯನ್ನು ಬಗ್ಗಿಸಿ ದ್ವಿಚಕ್ರ ವಾಹನ ಚಾಲನೆ ಮಾಡುವವರ ದೊಡ್ಡ ಸಂಖ್ಯೆಯೇ ಇದೆ, ಇಲ್ಲವೇ ಇಯರ್ ಫೋನ್ ಹಾಕಿಕೊಂಡು ಮಾತನಾಡುತ್ತಾ ಲೋಕವನ್ನೇ ಮರೆತು ತಮ್ಮದಷ್ಟೇ ಅಲ್ಲದೇ, ಇತರರ ಜೀವವನ್ನೂ ತೆಗೆದಿರುವ ಘಟನೆಗಳೂ ದಿನನಿತ್ಯ ನಡೆಯುತ್ತಲೇ ಇರುತ್ತವೆ. ಇದು ಫೋನ್ ಮಾತಾದರೆ, ಮಾಡುವ ಚಿಕ್ಕ ಎಡವಟ್ಟುಗಳು ಪ್ರಾಣಕ್ಕೆ ಕುತ್ತಾಗುವ ಘಟನೆಗಳೂ ಆಗಾಗ್ಗೆ ನಡೆಯುತ್ತಲೇ ಇರುತ್ತವೆ.
ಈಗ ಅಂಥದ್ದೇ ಒಂದು ಭಯಾನಕ ಘಟನೆ ಮಧ್ಯ ಪ್ರದೇಶದ ಇಂದೋರ್‍ನಲ್ಲಿ ನಡೆದಿದೆ. ಈ ಭಯಾನಕ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಾಡಿದ ಒಂದೇ ಒಂದು ಅಚಾತುರ್ಯ ವೈದ್ಯರೊಬ್ಬರ ಬಲಿ ಪಡೆದಿದೆ. ಇಂದೋರ್ ವೈದ್ಯರೊಬ್ಬರು ಆಕಸ್ಮಿಕವಾಗಿ ಬ್ರೇಕ್ ಬದಲಿಗೆ ಆಕ್ಸಿಲರೇಟರ್ ಒತ್ತಿದ ಹಿನ್ನೆಲೆಯಲ್ಲಿ ಅಪಘಾತ ಸಂಭವಿಸಿ ಪ್ರಾಣ ಪ್ರಾಣ ಕಳೆದುಕೊಂಡಿದ್ದಾರೆ. ಮನೆಯ ಬಳಿ ಪಾರ್ಕಿಂಗ್ ಮಾಡುವಾಗ ಈ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಇದರ ವಿಡಿಯೋ ವೈರಲ್ ಆಗುತ್ತಿದೆ.
ಪ್ರೆಗ್ನೆಂಟ್ ಮಾಡಿ ಓಡಿ ಹೋದ... ನಿಖಾಗೆ ರೆಡಿಯಾಗಿ ಗರ್ಲ್ ಫ್ರೆಂಡ್ ಕೈಲಿ ತಗ್ಲಾಕ್ಕೊಂಡ! ವಿಡಿಯೋ ವೈರಲ್
ಈ ವಿಡಿಯೋದಲ್ಲಿ ಮುಂದೆ ಎರಡು ಕಾರುಗಳು ಪಾರ್ಕ್ ಆಗಿರುವುದನ್ನು ನೋಡಬಹುದು. ಬಳಿಕ ಹಿಂಬದಿಯಿಂದ ನ್ಯಾನೋ ಕಾರೊಂದು ಬರುವುದನ್ನು ಕಾಣಬಹುದು. ಪಾರ್ಕ್ ಮಾಡುವಾಗ ಬ್ರೇಕ್ ಹಾಕುವ ಬದಲು ಆಕ್ಸಿಲರೇಟರ್ ಒತ್ತಿದ್ದಾರೆ ಡ್ರೈವರ್ ಸೀಟಿನಲ್ಲಿ ಕುಳಿತ ವೈದ್ಯ. ಆದ್ದರಿಂದ ಕಾರು ಮುಂದಿನ ಕಾರಿಗೆ ಗುದ್ದಿ ನಜ್ಜುಗುಜ್ಜಾಗಿದೆ. ಇದರಲ್ಲಿ ವೈದ್ಯ ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇದರ ವಿಡಿಯೋ ವೈರಲ್ ಆಗುತ್ತಲೇ, ಹಲವಾರು ಮಂದಿ ನ್ಯಾನೋ ಕಾರಿನ ಬಗ್ಗೆ ದೂರಿದ್ದಾರೆ. ಕಾರು ಸರಿಯಾಗಿ ಇಲ್ಲ, ಅದರ ರಚನೆ ಎಲ್ಲವೂ ಕಳಪೆಯಾಗಿದೆ ಎಂದೇ ಹೇಳುತ್ತಿದ್ದಾರೆ. ಆದರೆ ಕಾರು ಯಾವುದೇ ಇದ್ದರೂ ಬ್ರೇಕ್ ಬದಲು ಈ ರೀತಿ ಅಚಾತುರ್ಯ ಮಾಡಿದರೆ ಎಂಥ ಕಾರಾದರೂ ಸಾವು ಇಲ್ಲವೇ ಕೈ ಕಾಲು ಮುರಿದುಕೊಳ್ಳುವುದು ಸಾಮಾನ್ಯ ಎಂದು ಮತ್ತೆ ಕೆಲವರು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ.
undefined
ಪೊಲೀಸರು ನೀಡಿರುವ ವಿವರದ ಪ್ರಕಾರ, ಇಂದೋರ್‌ನ ರಸೋಮಾ ಚೌಕದಲ್ಲಿ ಟ್ರಾಫಿಕ್ ಸಿಗ್ನಲ್ ಬಳಿ ಈ ಘಟನೆ ನಡೆದಿದೆ. ನಿಂತಿದ್ದ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ವೈದ್ಯರ ಕಾರು ನಿಯಂತ್ರಣ ತಪ್ಪಿ ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ. ವೈದ್ಯರ ತಲೆಗೆ ತೀವ್ರ ಪೆಟ್ಟಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ಮುಂದೆ ಕಾರಿನಲ್ಲಿ ಏರ್‌ಬ್ಯಾಗ್‌ಗಳನ್ನು ಅಳವಡಿಸಲಾಗಿದ್ದು, ಒಳಗಿದ್ದ ಇಬ್ಬರಿಗೆ ಗಂಭೀರ ಗಾಯವಾಗುವುದನ್ನು ತಪ್ಪಿಸಿದೆ. ಮೃತ ವೈದ್ಯರನ್ನು ಡಾ. ಮುಖೇಶ್ ತಿವಾರಿ ಎಂದು ಗುರುತಿಸಲಾಗಿದೆ.
ಎಲ್ಲಾ ಕಡೆ ಒಳ ಉಡುಪು ಹಾಕಿದ್ದೆ, ನಿಮಗೆ ಕಾಣಿಸ್ಲಿಲ್ಲ: ಸಮಜಾಯಿಷಿ ಕೊಟ್ಟು ಮತ್ತೆ ಎಡವಟ್ಟು ಮಾಡಿಕೊಂಡ ಪೂನಂ ಪಾಂಡೆ !