ವ್ಯಾಪಾರಿ ರಾಜ್‌ಜೈನ್‌ಗೆ ಸೇರಿದ ಫ್ಲ್ಯಾಟ್ ಇದಾಗಿದ್ದು, ಈ ದಾಳಿ ವೇಳೆ ತಲೆಮರೆಸಿಕೊಂಡಿರುವ ಜೈನ್ ಪತ್ತೆಗೆ ತನಿಖೆ ನಡೆದಿದೆ. ಹಲವು ದಿನಗಳಿಂದ ಜೈನ್ ಫ್ಲ್ಯಾಟ್‌ನಲ್ಲಿ ಜೂಜು ಅಡ್ಡೆ ನಡೆಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತು. ಕೂಡಲೇ ಸಿಸಿಬಿ ವಿಶೇಷ ವಿಚಾರಣಾ ದಳದ ಇನ್‌ಪೆಕ್ಟರ್ ಶ್ರೀನಿವಾಸ್ ನೇತೃತ್ವ ತಂಡ ದಾಳಿ ನಡೆಸಿದೆ.
ಬೆಂಗಳೂರು(ಜ.10): ಎರಡು ದಿನಗಳ ಹಿಂದೆ ಸಿರ್ಸಿ ವೃತ್ತ ಸಮೀಪ ಚಿನ್ನಾಭರಣ ವ್ಯಾಪಾರಿಗೆ ಸೇರಿದ ಫ್ಲ್ಯಾಟ್ ನಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆ ಮೇಲೆ ದಾಳಿ ನಡೆಸಿ ₹86.87 ಲಕ್ಷ ಅನಧಿಕೃತ ನಗದನ್ನು ಸಿಸಿಬಿ ಜಪ್ತಿ ಮಾಡಿದೆ. ವ್ಯಾಪಾರಿ ರಾಜ್‌ಜೈನ್‌ಗೆ ಸೇರಿದ ಫ್ಲ್ಯಾಟ್ ಇದಾಗಿದ್ದು, ಈ ದಾಳಿ ವೇಳೆ ತಲೆಮರೆಸಿಕೊಂಡಿರುವ ಜೈನ್ ಪತ್ತೆಗೆ ತನಿಖೆ ನಡೆದಿದೆ. ಹಲವು ದಿನಗಳಿಂದ ಜೈನ್ ಫ್ಲ್ಯಾಟ್‌ನಲ್ಲಿ ಜೂಜು ಅಡ್ಡೆ ನಡೆಸುತ್ತಿರುವ ಬಗ್ಗೆ ಮಾಹಿತಿ ಸಿಕ್ಕಿತು. ಕೂಡಲೇ ಸಿಸಿಬಿ ವಿಶೇಷ ವಿಚಾರಣಾ ದಳದ ಇನ್‌ಪೆಕ್ಟರ್ ಶ್ರೀನಿವಾಸ್ ನೇತೃತ್ವ ತಂಡ ದಾಳಿ ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ರಾಜಸ್ಥಾನ ಮೂಲದ ರಾಜ್ ಜೈನ್, ನಗರ್ತಪೇಟೆಯಲ್ಲಿ ಚಿನ್ನಾಭರಣ ಮಳಿಗೆ ಇಟ್ಟಿದ್ದಾನೆ. ಇತ್ತೀಚೆಗೆ ಕ್ಲಬ್‌ಗಳು ಬಂದ್ ಮಾಡಿದ ಬಳಿಕ ತನ್ನ ಫ್ಲ್ಯಾಟ್‌ನಲ್ಲಿ ಜೈನ್ ಜೂಜು ಅಡ್ಡೆ ನಡೆಸುತ್ತಿದ್ದ. ಈ ಬಗ್ಗೆ ಖಚಿತ ಮಾಹಿತಿ ಪಡೆದುದಾಳಿ ನಡೆಸಿದಾಗ ಮಂದಿ ಬಂಧಿತರಾಗಿದ್ದು, ಅವರಿಂದ ೮1.48 ಲಕ್ಷ ಜಪ್ತಿಯಾಯಿತು. ಆನಂತರ ಫ್ಲ್ಯಾಟ್‌ನಲ್ಲಿ ತಪಾಸಣೆ ನಡೆಸಿದಾಗ ಎರಡು ಬ್ಯಾಗ್‌ಗಳಲ್ಲಿ ತುಂಬಿದ್ದ ₹85.39 ಲಕ್ಷ ಪತ್ತೆಯಾಗಿದೆ. ಹೀಗಾಗಿ ಒಟ್ಟು ₹86.87 ಲಕ್ಷವನ್ನು ಜೈನ್ ಪ್ಲಾಟ್‌ನಲ್ಲಿ ವಶವಡಿಸಿಕೊಳ್ಳಲಾಗಿದ್ದು, ತಪ್ಪಿಸಿಕೊಂಡಿರುವ ಹುಡುಕಾಟ ಹೇಳಿದ್ದಾರೆ. ಆರೋಪಿಗೆ ನಡೆದಿದೆ ಎಂದು ಹೇಳಿದ್ದಾರೆ.
ಆನ್‌ಲೈನ್ ಜಾಬ್ ಆಮಿಷವೊಡ್ಡಿ 40 ಕೋಟಿ ಪಂಗನಾಮ: ಯೂನಸ್, ಅರ್ಬಾಜ್, ಖಲಿಮುಲ್ಲಾ ಬಂಧನ
ಜೈಲೂಟ ಸವಿದು ಬಂದಿದ್ದ ಜೈನ್
ಕೆಲ ತಿಂಗಳ ಹಿಂದೆ ತನ್ನ ಸಂಬಂಧಿಕರಿಂದ ಚಿನ್ನಾಭರಣ ಕಳವು ಮಾಡಿಸಿ ಬಳಿಕಸುಳ್ಳುದೂರು ನೀಡಿದ್ದ ರಾಜ್‌ಜೈನ್‌ನನ್ನು ಕಾಟನ್ ಪೇಟೆ ಠಾಣೆ ಪೊಲೀಸರು ಜೈಲಿಗೆ ಕಳುಹಿಸಿದ್ದರು. ಬಳಿಕ ಜಾಮೀನು ಪಡೆದು ಹೊರಬಂದ ನಂತರ ಅಕ್ರಮವಾಗಿ ಜೂಜು ಅಡ್ಡೆಯನ್ನು ಜೈನ್ ನಡೆಸುತ್ತಿದ್ದ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.