ಬೆಂಗಳೂರು: 854 ಕೋಟಿ ವಂಚಿಸಿದ್ದ ಸೈಬರ್ ಕ್ರೈಂ ಜಾಲ ಪತ್ತೆ, 6 ಖದೀಮರ ಬಂಧನ

By Girish Goudar  |  First Published Sep 30, 2023, 12:43 PM IST

ಸದ್ಯ ಆರು ಆರೋಪಿಗಳು ವಂಚಿಸಿದ ಹಣವನ್ನ ವಿದೇಶಿ ಅಕೌಂಟ್‌ಗಳಿಗೆ ಕಳಿಸಿದ್ದಾರೆ. ಮನೋಜ್ ಅಲಿಯಾಸ್ ಜಾಕ್, ಶ್ರೀನಿವಾಸ, ಚಕ್ರಾಧರ, ಸೋಮಶೇಖರ್, ಫಣೀಂದ್ರ ಬಂಧಿತ ಅರೋಪಿಗಳಾಗಿದ್ದಾರೆ. 
 


ಬೆಂಗಳೂರು(ಸೆ.30):  ರಾಷ್ಟ್ರೀಯ ಮಟ್ಟದಲ್ಲಿ 854 ಕೋಟಿ ವಂಚಿಸಿದ್ದ ಸೈಬರ್ ಕ್ರೈಂ ಜಾಲವನ್ನ ಬೆಂಗಳೂರು ಸೈಬರ್ ಕ್ರೈಮ್‌ ಪೊಲೀಸರು ಪತ್ತೆ ಮಾಡಿದ್ದಾರೆ. ಆರು ಆರೋಪಿಗಳ ಬಂಧಿಸಲಾಗಿದೆ. (NCRP )national cyber crime reporting portal ನಲ್ಲಿ ಈ ವಂಚನೆ ಬಗ್ಗೆ 5013 ಪ್ರಕರಣ ದಾಖಲಾಗಿದ್ದವು. ಬೆಂಗಳೂರಿನಲ್ಲಿ ದಾಖಲಾಗಿದ್ದ ಎರಡು ಪ್ರಕರಣಗಳನ್ನ ಸೈಬರ್ ಪೊಲೀಸರು ಬೆನ್ನು ಹತ್ತಿದ್ದರು. ಈ ವೇಳೆ ರಾಜಧಾನಿಯಲ್ಲಿ 17 ಪ್ರಕರಣಗಳು ಪತ್ತೆಯಾಗಿವೆ. ಅಲ್ಲದೆ ಇದರ ಅಕೌಂಟ್ ನಿರ್ವಹಣೆ ಮಾಡುತ್ತಿರುವುದು ಬೆಂಗಳೂರಿನಲ್ಲೇ ಎಂಬುದು ತಿಳಿದು ಬಂದಿದೆ. 

ಸದ್ಯ ಆರು ಆರೋಪಿಗಳು ವಂಚಿಸಿದ ಹಣವನ್ನ ವಿದೇಶಿ ಅಕೌಂಟ್‌ಗಳಿಗೆ ಕಳಿಸಿದ್ದಾರೆ. ಮನೋಜ್ ಅಲಿಯಾಸ್ ಜಾಕ್, ಶ್ರೀನಿವಾಸ, ಚಕ್ರಾಧರ, ಸೋಮಶೇಖರ್, ಫಣೀಂದ್ರ ಬಂಧಿತ ಅರೋಪಿಗಳಾಗಿದ್ದಾರೆ. 

Tap to resize

Latest Videos

ಬೆಂಗಳೂರು: ಲಗೇಜ್‌ನೊಳಗೆ ಜೀವಂತ ಗುಂಡು ಪತ್ತೆ, ಕೆಂಪೇಗೌಡ ಏರ್‌ಪೋರ್ಟಲ್ಲಿ ಪ್ರಯಾಣಿಕನ ಬಂಧನ

ಈ ಸಂಬಂಧ ಮಾತನಾಡಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಸಿಸಿಬಿ ತಂಡದವರು ಉತ್ತಮ ಕಾರ್ಯ ಮಾಡಿದ್ದಾರೆ. ವಾಟ್ಸಾಪ್, ಟೆಲಿಗ್ರಾಮ್ ಮೂಲಕ ಸಾರ್ವಜನಿಕರಿಂದ ಹಣ ಹೂಡಿಸಿಕೊಂಡು ವಂಚಿಸುತ್ತಿದ್ದ ಜಾಲವನ್ನ ಬೇಧಿಸಿದ್ದಾರೆ. ಬೆಂಗಳೂರಿನಲ್ಲಿ 17 ಪ್ರಕರಣಗಳು ದಾಖಲಾಗಿದ್ದವು. ಬೇರೆ ಬೇರೆ ಹಣ ಅಕೌಂಟ್‌ಗೆ ವರ್ಗಾವಣೆ ಆಗುತ್ತಿದ್ದವು. ದೇಶದಾದ್ಯಂತ 5013  ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 84 ಅಕೌಂಟ್ ಗಳ ಮೂಲಕ 854 ಕೋಟಿ ಟ್ರಾನ್ಸಾಕ್ಷನ್ ಆಗಿದೆ. ಎಲ್ಲಾ ಬ್ಯಾಂಕ್ ಖಾತೆಗಳನ್ನು ಸೀಜ್ ಮಾಡಿದ್ದೇವೆ. 5 ಕೋಟಿ ಹಣ ಸೇರಿ ಲ್ಯಾಪ್‌ಟಾಪ್ ಪ್ರಿಂಟರ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ವಸ್ತುಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದ್ದಾರೆ. 

ಪ್ರಕರಣದಲ್ಲಿ ಮೂವರು ಮಾಸ್ಟರ್ ಮೈಂಡ್‌ಗಳಿಗೆ ಹುಡುಕಾಟ ನಡೀತಿದೆ. ಬಂಧಿತ ಆರೋಪಿಗಳು ಬೆಂಗಳೂರಿನವರಾಗಿದ್ದಾರೆ. ಚೈನ್ ಲಿಂಕ್ ಮೂಲಕ ಈ ದಂಧೆ ನಡೆಯುತ್ತಿತ್ತು. ಫೇಕ್ ಅಕೌಂಟ್ ಮೂಲಕ ವರ್ಗಾವಣೆ ನಡೆಯುತ್ತಿತ್ತು. ಬೆಂಗಳೂರು ನಗರದಲ್ಲೇ 49 ಲಕ್ಷ ರೂ. ವಂಚನೆ ಆಗಿದೆ. ದೇಶದ ಸಾಕಷ್ಟು ಅಮಾಯಕರು ಮೋಸ ಹೋಗಿದ್ದಾರೆ ಎಂದು ಕಮಿಷನರ್ ದಯಾನಂದ್ ಹೇಳಿದ್ದಾರೆ. 

click me!