Bengaluru: ಐಷಾರಾಮಿ ಕಾರು ಕಡಿಮೆ ದರದಲ್ಲಿ ಕೊಡಿಸೋದಾಗಿ ವೈದ್ಯ ದಂಪತಿಗೆ 6.20 ಕೋಟಿ ವಂಚನೆ!

By Kannadaprabha News  |  First Published Feb 8, 2024, 11:32 AM IST

ಐಷಾರಾಮಿ ಕಾರನ್ನು ಕಡಿಮೆ ಕೊಡಿಸುವುದಾಗಿ ನಂಬಿಸಿ ವೈದ್ಯ ದಂಪತಿಯಿಂದ 6.20 ಕೋಟಿ ಪಡೆದು ವಂಚಿಸಿದ್ದಲ್ಲದೇ ಹಣ ಕೇಳಿದರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದೆ. 


ಬೆಂಗಳೂರು (ಫೆ.08): ಐಷಾರಾಮಿ ಕಾರನ್ನು ಕಡಿಮೆ ಕೊಡಿಸುವುದಾಗಿ ನಂಬಿಸಿ ವೈದ್ಯ ದಂಪತಿಯಿಂದ 6.20 ಕೋಟಿ ಪಡೆದು ವಂಚಿಸಿದ್ದಲ್ಲದೇ ಹಣ ಕೇಳಿದರೆ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ ಮಹಿಳೆಯ ವಿರುದ್ಧ ಪ್ರಕರಣ ದಾಖಲಾಗಿದೆ. ಮೋಸ ಹೋಗಿರುವ ವಿಜಯನಗರದ ನಿವಾಸಿ ಡಾ| ಗಿರೀಶ್ ದಂಪತಿ ನೀಡಿದ ದೂರಿನ ಮೇರೆಗೆ ರಾಜರಾಜೇಶ್ವರಿ ನಗರದ ಬಿಇಎಲ್ ಲೇಔಟ್ ಐಶ್ವರ್ಯಗೌಡ ಎಂಬುವರ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿಜಯನಗರದ ಎಂ.ಸಿ.ಲೇಔಟ್‌ನಲ್ಲಿ ವೈದ್ಯ ಗಿರೀಶ್ ದಂಪತಿ ಅವರಿಗೆ ಸೇರಿದ ಆಸ್ಪತ್ರೆ ಇದೆ. 2022ರ ಮಾರ್ಚ್‌ನಲ್ಲಿ ಕಾಸೆಟಿಕ್ ಸರ್ಜರಿಗೆ ಗಿರೀಶ್ ಅವರನ್ನು ಆರೋಪಿ ಐಶ್ವರ್ಯ ಭೇಟಿ ಯಾಗಿದ್ದಳು. 

ಹೀಗೆ ಪರಿಚಯವಾದ ಆರೋಪಿ, ತಾನು ರಿಯಲ್ ಎಸ್ಟೇಟ್ ಹಾಗೂ ಸೆಕೆಂಡ್ ಹ್ಯಾಂಡ್ ಕಾರುಗಳ ಡೀಲರ್ ಸಹ ಆಗಿದ್ದೇನೆ ಎಂದಿದ್ದಳು. ಕ್ರಮೇಣ ತನ್ನ ನಾಜೂಕಿನ ಮಾತಿನ ಮೂಲಕ ವೈದ್ಯರಿಗೆ ಆತ್ಮೀಯಳಾಗಿದ್ದಾಳೆ. ಹೀಗಿ ರುವ ದುಬಾರಿ ಮೌಲ್ಯದ ಕಾರು ಖರೀದಿಗೆ ಯೋಜಿಸಿದ್ದ ವೈದ್ಯ ಗಿರೀಶ್ ಅವರು, ಇದೇ ವಿಚಾರವಾಗಿ ಐಶ್ವರ್ಯರನ್ನು ಸಂಪರ್ಕಿಸಿದ್ದರು. ಆಗ ಕಡಿಮೆ ಬೆಲೆಗೆ ಐಷರಾಮಿ ಕಾರು ಕೊಡಿ ಸುವುದಾಗಿ ಹೇಳಿದ್ದಾಳೆ. ಈ ಮಾತು ನಂಬಿದ ವೈದ್ಯ, ಆರ್‌ಟಿಜಿಎಸ್ ಮೂಲಕ 2.75 ಕೋಟಿ ಹಾಗೂ 3.75 ಕೋಟಿಯನ್ನು ನಗದು ಹೀಗೆ ಎರಡು ಹಂತದಲ್ಲಿ ಆರೋಪಿಗೆ ಒಟ್ಟು 6.20 ಕೋಟಿ ಕೊಟ್ಟಿದ್ದರು. ಈ ಹಣ ಸಂದಾಯವಾದ ಬಳಿಕ ವೈದ್ಯರ ಸಂಪರ್ಕ ಕಡಿತಗೊಳಿಸಿದ ಆಕೆ, ಹಣ ಕೇಳಿದರೆ ಸಬೂಬು ಹೇಳುತ್ತಿದ್ದಳು. 

Latest Videos

undefined

ರಾಜ್ಯಾದ್ಯಂತ ಹುಕ್ಕಾ ನಿಷೇಧಿಸಿ ಆದೇಶ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ದಿಟ್ಟ ಹೆಜ್ಜೆ!

ವೈದ್ಯರು ಜೋರು ಮಾಡಿದಾಗ ಹಣದ ವಿಚಾರ ಮಾತುಕತೆಗೆ ವಿಜಯನಗರ ಕ್ಲಬ್ ಬಳಿ ಬರುವಂತೆ ಆರೋಪಿ ಸೂಚಿಸಿದ್ದಳು. ಅಂತೆಯೇ ಕ್ಲಬ್ ಬಳಿ ತೆರಳಿದ ವೈದ್ಯ ಗಿರೀಶ್ ದಂಪತಿ ಮೇಲೆ ಐಶ್ವರ್ಯ ಗಲಾಟೆ ಮಾಡಿದ್ದಾಳೆ. 'ನೀನು ಹಣ ಕೇಳಿದರೆ ಅತ್ಯಾಚಾರ ಮಾಡಿರುವುದಾಗಿ ಪ್ರಕರಣ ದಾಖಲಿಸುತ್ತೇನೆ. ಮಾಧ್ಯಮಗಳಿಗೆ ತಿಳಿಸಿ ನಿಮ್ಮ ಮರ್ಯಾದೆ ಕಳೆಯುವುದಾಗಿ ಆಕೆ ಬೆದರಿಸಿದ್ದಳು. ಇದರಿಂದ ವೈದ್ಯ ಗಿರೀಶ್ ಹೆದರಿದಾಗ ಮತ್ತೆ 75 ಲಕ್ಷ ಕೊಡುವಂತೆ ಆಕೆ ಬೇಡಿಕೆ ಇಟ್ಟಿದ್ದಳು. ಈ ಕಿರುಕುಳ ಸಹಿಸಲಾರದೆ ಕೊನೆಗೆ ವಿಯನಗರ ಠಾಣೆಗೆ ತೆರಳಿ ವೈದ್ಯ ದೂರು ನೀಡಿದ್ದಾರೆ. ಅದರನ್ವಯ ಎಫ್‌ಐಆರ್‌ದಾಖಲಿಸಿಕೊಂಡು ಆರೋಪಿ ಪತ್ತೆಗೆ ತನಿಖೆ ನಡೆಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

click me!