ಚಿತ್ರದುರ್ಗ: ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದ ನಾಲ್ವರು ಕುಖ್ಯಾತ ಕಳ್ಳರ ಬಂಧನ 

By Ravi Janekal  |  First Published Dec 2, 2023, 7:58 AM IST

ಕೋಟೆನಾಡಿನ ಪೊಲೀಸರಿಗೆ ತಲೆನೋವಾಗಿದ್ದ ನಾಲ್ವರು ಕುಖ್ಯಾತ ಕಳ್ಳರನ್ನು ನಾಯಕನಹಟ್ಟಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.  ಚಳ್ಳಕೆರೆ ಮೂಲದ ವೆಂಕಟೇಶ, ಮಂಜುನಾಥ್, ತಿಪ್ಪೇಸ್ವಾಮಿ, ಬೆಂಗಳೂರಿನ ಎಂ.ದೊರೈ ಬಂಧಿತರು. ನಾಯಕನಹಟ್ಟಿ ಠಾಣೆ PSI ದೇವರಾಜ ನೇತೃತ್ವದಲ್ಲಿ ಕಾರ್ಯಾಚರಣೆ. ಬಂಧಿತ ಖದೀಮರಿಂದ 2.50ಲಕ್ಷ ರೂ. ಮೌಲ್ಯದ 40 ಮೊಬೈಲ್ ಟವರ್ ಬ್ಯಾಟರಿಗಳು,


ಚಿತ್ರದುರ್ಗ (ಡಿ.2): ಕೋಟೆನಾಡಿನ ಪೊಲೀಸರಿಗೆ ತಲೆನೋವಾಗಿದ್ದ ನಾಲ್ವರು ಕುಖ್ಯಾತ ಕಳ್ಳರನ್ನು ನಾಯಕನಹಟ್ಟಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

 ಚಳ್ಳಕೆರೆ ಮೂಲದ ವೆಂಕಟೇಶ, ಮಂಜುನಾಥ್, ತಿಪ್ಪೇಸ್ವಾಮಿ, ಬೆಂಗಳೂರಿನ ಎಂ.ದೊರೈ ಬಂಧಿತರು. ನಾಯಕನಹಟ್ಟಿ ಠಾಣೆ PSI ದೇವರಾಜ ನೇತೃತ್ವದಲ್ಲಿ ಕಾರ್ಯಾಚರಣೆ. ಬಂಧಿತ ಖದೀಮರಿಂದ 2.50ಲಕ್ಷ ರೂ. ಮೌಲ್ಯದ 40 ಮೊಬೈಲ್ ಟವರ್ ಬ್ಯಾಟರಿಗಳು,
ಕೃತ್ಯಕ್ಕೆ ಬಳಸಿದ್ದ ಬೊಲೆರೊ ವಾಹನ, 4 ಮೊಬೈಲ್ ವಶಕ್ಕೆ ಪಡೆದುಕೊಂಡ ಪೊಲೀಸರು. ನಾಯಕನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ಖದೀಮರನ್ನು ಹೆಚ್ಚಿನ ವಿಚಾರಣೆಗೊಳಪಡಿಸಿರುವ ಪೊಲೀಸರು.

Tap to resize

Latest Videos

ಅನ್ನಭಾಗ್ಯದ 6 ಸಾವಿರ ಕ್ವಿಂಟಾಲ್ ಅಕ್ಕಿಯೇ ಮಾಯ..! 6 ತಿಂಗಳಲ್ಲಿ ಎರಡನೇ ಬಾರಿ ನಡೆಯಿತು ಕಳ್ಳತನ..!

ಕಾರಲ್ಲಿದ್ದ ಮೂರು ಲಕ್ಷ ರೂ. ಎಗರಿಸಿದ್ದ ಕಳ್ಳರು ಬಂಧನ:

ಹಿರಿಯೂರು: ನಗರದ ಲಕ್ಷ್ಮಮ್ಮ ಬಡಾವಣೆಯಲ್ಲಿ ಕಾರಲ್ಲಿದ್ದ 3 ಲಕ್ಷ ಹಣ ಕದ್ದು ಕಳ್ಳರು ಪರಾರಿಯಾದ ಘಟನೆ ಶುಕ್ರವಾರ ನಡೆದಿದೆ. 

ಕೃಷ್ಣಕುಮಾರ್ ಎಂಬುವವರಿಗೆ ಸೇರಿದ ಮೂರು ಲಕ್ಷ ರು. ಹಣವನ್ನು ಬ್ಯಾಂಕ್ ಆಫ್ ಬರೋಡಾದಲ್ಲಿ ಡ್ರಾ ಮಾಡಿಕೊಂಡು ಮನೆ ಬಳಿ ಬಂದವರು ಕಾರಿನಲ್ಲಿಯೇ ಹಣ ಬಿಟ್ಟು ಮನೆ ಬೀಗ ತೆಗೆಯುವ ವೇಳೆ ಬೈಕ್ ನಲ್ಲಿ ಬಂದ ಇಬ್ಬರು ಮುಸುಕುಧಾರಿಗಳು ಈ ಕಳ್ಳತನ ಎಸಗಿದ್ದಾರೆ. 

ಕಲ್ಲಿದ್ದಲು ಕಳ್ಳತನ ವರದಿಗೆ ತೆರಳಿದ್ದ ಸುವರ್ಣ ನ್ಯೂಸ್ ವರದಿಗಾರ, ಕ್ಯಾಮೆರಾಮನ್‌ ಮೇಲೆ ರೈಲ್ವೆ ಪಿಎಸ್‌ಐ ದರ್ಪ!

ಕಳ್ಳತನ ನಡೆಸಿ ಪರಾರಿಯಾಗುವ ದೃಶ್ಯಗಳು ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು ಸ್ಥಳಕ್ಕೆ ಸಿಪಿಐ ರಾಘವೇಂದ್ರ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

click me!