ಸಂಜಯ್ ಮೃತದೇಹ ಉಳುವಾಗಿಲು ಸಮೀಪ ಮುಖ್ಯರಸ್ತೆಯಲ್ಲಿ ಬಿದ್ದಿದ್ದು, ಎದೆಗೆ ತೋಟಕೋವಿಯಿಂದ ಗುಂಡು ತಗುಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬರುತ್ತಿದೆ. ಮೃತದೇಹದ ಸಮೀಪವೇ ತೋಟದ ಬೇಲಿಯಲ್ಲಿ ತೋಟಕೋವಿಯೊಂದು ಪತ್ತೆಯಾಗಿದೆ. ಗುರುವಾರ ರಾತ್ರಿ ಈ ಘಟನೆ ನಡೆದಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಮೇ.17): ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಗುಂಡೇಟಿನಿಂದ ಯುವಕನೋರ್ವ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ತಾಲ್ಲೂಕು ಉಳುವಾಗಿಲು ಗ್ರಾಮದ ಕೆರೆಮಕ್ಕಿ ಯುವಕ ಸಂಜಯ್(33) ಶೂಟೌಟ್‌ನಲ್ಲಿ ಮೃತಪಟ್ಟಿರುವ ಯುವಕ.ಕಾಡು ಹಂದಿ ಬೇಟೆಗೆ ತೆರಳಿದ ಯುವಕರ ನಡುವೆ ನಡೆದ ಮಿಸ್ ಕಮ್ಯುನಿಕೇಷನ್ ನಲ್ಲಿ ಫೈರ್ ಆಗಿದೆ.
undefined
ಯುವಕನ ಎದೆ ಸೀಳಿದ ತೋಟದಕೋವಿ
ಸಂಜಯ್ ಮೃತದೇಹ ಉಳುವಾಗಿಲು ಸಮೀಪ ಮುಖ್ಯರಸ್ತೆಯಲ್ಲಿ ಬಿದ್ದಿದ್ದು, ಎದೆಗೆ ತೋಟಕೋವಿಯಿಂದ ಗುಂಡು ತಗುಲಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಕಂಡುಬರುತ್ತಿದೆ. ಮೃತದೇಹದ ಸಮೀಪವೇ ತೋಟದ ಬೇಲಿಯಲ್ಲಿ ತೋಟಕೋವಿಯೊಂದು ಪತ್ತೆಯಾಗಿದೆ. ನಿನ್ನೆ (ಗುರುವಾರ) ರಾತ್ರಿ ಈ ಘಟನೆ ನಡೆದಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.
ಬೆಳ್ಳಂಬೆಳಗ್ಗೆ ಜ್ಯುವೆಲ್ಲರಿ ಶಾಪ್ ಮಾಲೀಕರ ಮೇಲೆ ಗುಂಡಿನ ದಾಳಿ, ಇಬ್ಬರ ಸ್ಥಿತಿ ಗಂಭೀರ
ಶಿಕಾರಿಗೆ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಇದು ಆಕಸ್ಮಿಕವಾಗಿ ಗುಂಡು ತಗುಲಿ ಆಗಿರುವ ಸಾವೇ ಅಥವಾ ಉದ್ದೇಶಪೂರ್ವಕವಾಗಿ ಕೊಲೆ ಮಾಡಲಾಗಿದೆಯೇ ? ಎನ್ನುವ ಪ್ರಶ್ನೆಗಳು ಎದ್ದಿವೆ. ಮೃತ ಸಂಜಯ್ ಕೆರೆಮಕ್ಕಿ ಗ್ರಾಮದ ದಿವಂಗತ ಜೂಲೇಗೌಡರ ಪುತ್ರ. ಅವಿವಾಹಿತನಾಗಿದ್ದು, ತಾಯಿ ಮತ್ತು ಸಹೋದರಿಯನ್ನು ಅಗಲಿದ್ದಾರೆ. ಈ ಸಂಬಂಧ ಮಲ್ಲಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರು ಪೊಲೀಸ್ ವಶಕ್ಕೆ ;
ಮೃತ ಸಂಜಯ್ ಜೊತೆಗೆ ಅದೇ ಗ್ರಾಮದ ನಿಸರ್ಗ , ಸುಮನ್ ಎಂಬುವರು ಶಿಕಾರಿಗೆ ತೆರಳಿದ್ದರು. ಕಾಡು ಹಂದಿ ಬೇಟೆಗೆ ತೆರಳಿದಂತಹ ಸಂದರ್ಭದಲ್ಲಿ ಮಿಸ್ ಫೈರ್ ನಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸುವೆ. ಮಿಸ್ ಫೈರ್ ಆದ ಕೂಡಲೇ ನಿಸರ್ಗ ಸ್ಥಳದಿಂದ ಪರಾರಿಯಾಗುವ ಯತ್ನ ನಡೆಸಿದ್ದಾನೆ.ಈ ಸಮಯದಲ್ಲಿ ದಾರಿಯಲ್ಲಿ ಬಿದ್ದ ಪರಿಣಾಮ ನಿಸರ್ಗನ ಕೈನ ಮೂಳೆ ಮುರಿತವಾಗಿದೆ. ನಿಸರ್ಗ, ಸುಮನ್ ಅನ್ನೋ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೈ ಮುರಿತವಾಗಿರುವ ಹಿನ್ನೆಲೆಯಲ್ಲಿ ನಿಸರ್ಗನನ್ನು ಪೊಲೀಸರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಒಟ್ಟಾರೆ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಾಡ ಬಂದೂಕುಗಳನ್ನು ಪೊಲೀಸ್ ಠಾಣೆಗೆ ಸೆರೆಂಡರ್ ಮಾಡುವ ಆದೇಶವಿದ್ದರೂ ಯುವಕರು ನಿಯಮವನ್ನು ಗಾಳಿಗೆ ತೂರಿ ನಾಡಬಂದೂಕು ಕಣ್ಣು ಜೊತೆಯಲ್ಲಿ ಇಟ್ಟುಕೊಂಡಿದ್ದಲ್ಲದೆ ಅಕ್ರಮವಾಗಿ ಶಿಕಾರಿಗೆ ತೆರಳಿದ ಪರಿಣಾಮ ಯುವಕನೋರ್ವ ಇದೀಗ ಜೀವ ಕಳೆದುಕೊಳ್ಳುವ ಪರಿಸ್ಥಿತಿ ಉದ್ಭವವಾಗಿದೆ. ಇದೀಗ ಮಲ್ಲಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.