Raichur: ಒಂದೇ ಕುಟುಂಬದ 3 ಆತ್ಮಹತ್ಯೆಗೆ ಯತ್ನ: ಸತಿ-ಪತಿ ಸ್ಥಳದಲ್ಲೇ ಸಾವು, ಮಗಳಿಗೆ ಗಂಭೀರ ಗಾಯ!

By Govindaraj S  |  First Published Mar 9, 2024, 6:00 PM IST

ಸತಿ-ಪತಿ, ಮಗಳು ರೈಲಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳದಲ್ಲಿಯೇ ಸತಿ-ಪತಿ ಮೃತಪಟ್ಟರೆ ಮಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ನಡೆದಿದೆ. 


ರಾಯಚೂರು (ಮಾ.09): ಸತಿ-ಪತಿ, ಮಗಳು ರೈಲಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ್ದು, ಸ್ಥಳದಲ್ಲಿಯೇ ಸತಿ-ಪತಿ ಮೃತಪಟ್ಟರೆ ಮಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಗರದ ಹೊರವಲಯದ ನಡೆದಿದೆ. ನಗರದ ಹೊರವಲಯದ ಬೈಪಾಸ್ ರಸ್ತೆ ಓವರ್ ಬ್ರಿಡ್ಜ್ ಕೆಳಗಡೆಯ ರೈಲ್ವ ಹಳಿ ಬಳಿ ಶನಿವಾರದಂದು ಈ ದುರ್ಘಟನೆ ಸಂಭವಿಸಿದೆ. ಒಂದು ಕುಟುಂಬದ ಪತಿ, ಪತ್ನಿ ಹಾಗೂ ಮಗಳು ಆತ್ಮಹತ್ಯೆ ಯತ್ನ ಮಾಡಿದ್ದಾರೆ. ಇದರಲ್ಲಿ ಗಂಡ-ಹೆಂಡತಿ ಇಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದು, ಮಗಳು ಗಂಭೀರವಾಗಿ ಗಾಯಗೊಂಡಿದ್ದಾಳೆ.

ಮೃತರ ರಾಯಚೂರು ನಗರದ ಜ್ಯೋತಿ ಕಾಲೋನಿ ನಿವಾಸಿಗಳಾದ ಪತಿ ಸಮೀರ್ ಅಹ್ಮದ್ (೪೪), ಪತ್ನಿ ಜುಲ್ಲೇಕಾ‌ಬೇಗಂ (೪೦) ಸ್ಥಳದಲ್ಲಿ ಮೃತಪಟ್ಟವರು ಎಂದು ಗುರುತಿಸಲಾಗಿದ್ದು, ಮಗಳು ಮೈಮೂಲಾ ಗಂಭೀರ ಗಾಯಗೊಂಡಿದ್ದರೆ ಎಂದು ಹೇಳಲಾಗುತ್ತದೆ. ಗಾಯಾಳನ್ನು ರಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಮೃತರ ದೇಹಗಳನ್ನ ರಿಮ್ಸ್ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಸ್ಥಳಕ್ಕೆ ರಾಯಚೂರು ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ರಾಯಚೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

Latest Videos

undefined

ಮೂವರು ಯುವಕರು ಕಾವೇರಿ ನದಿ ಪಾಲು: ಕುಶಾಲನಗರ ಸಮೀಪ ಕೂಡಿಗೆಯಲ್ಲಿ ಗುರುವಾರ ಸ್ನಾನಕ್ಕೆ ತೆರಳಿದ ಮೂವರು ಸ್ನೇಹಿತರು ಕಾವೇರಿ ನದಿಯಲ್ಲಿ ಮುಳುಗಿದ್ದು, ಈ ಪೈಕಿ ಒಬ್ಬನ ಮೃತದೇಹ ಪತ್ತೆಯಾಗಿದೆ. ಚಿಕ್ಕತೂರಿನ ನಿವಾಸಿ ಶ್ರೀನಿವಾಸ್ ಅಲಿಯಾಸ್ ಅಪ್ಪು (23) ಕಣಿವೆಯ ಸಚಿನ್ (25), ಮುಳುಸೋಗೆಯ ಜನತಾ ಕಾಲೋನಿಯ ನಿವಾಸಿ ವಿನೋದ್ (25) ಕಾವೇರಿ ನದಿಯಲ್ಲಿ ಮುಳುಗಿದ ಯುವಕರು. ಇದರಲ್ಲಿ ಶ್ರೀನಿವಾಸ್ ಮೃತದೇಹವನ್ನು ಹೊರ ತೆಗೆಯಲಾಗಿದೆ. 

ದೇಶದ ಜನರನ್ನು ಹುಚ್ಚರನ್ನಾಗಿ ಕಾಂಗ್ರೆಸ್ ಮಾಡುತ್ತಿದೆ: ಸಿದ್ದು ವಿರುದ್ಧ ಸಂಸದ ಅನಂತಕುಮಾರ ಹೆಗಡೆ ವಾಗ್ದಾಳಿ

ಐವರು ಜನ ಸ್ನೇಹಿತರು ಗುರುವಾರ ಸಂಜೆ 5 ಗಂಟೆಗೆ ಕಾರು ನಿಲ್ಲಿಸಿ, ನದಿಯ ಬಳಿ ಸ್ಥಾನಕ್ಕೆಂದು ಇಳಿದ ಸಂದರ್ಭ ಆಳವಾದ ಜಾಗದಲ್ಲಿ ಓರ್ವ ನೀರಿನಲ್ಲಿ ಮುಳುಗಿದ. ಆತನನ್ನು ರಕ್ಷಿಸಲು ಹೋದ ಮತ್ತೆ ಇಬ್ಬರೂ ಕೂಡ ಮುಳುಗಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಇದೀಗ ಓರ್ವನ ಮೃತ ದೇಹ ದೊರಕಿದ್ದು ಇನ್ನುಳಿದವರಿಗೆ ಶೋಧ ಕಾರ್ಯ ಬರದಿಂದ ಸಾಗುತ್ತಿದೆ. ಸ್ಥಳಕ್ಕೆ ಕೊಡಗು ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಡಿ ವೈ ಎಸ್ ಪಿ ಗಂಗಾಧರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

click me!