* ಗೌರಿಬಿದನೂರು ಸರ್ಕಾರಿ ಶಿಕ್ಷಕ ವಿಶ್ವನಾಥ ಕೊಲೆ ಪ್ರಕರಣಕ್ಕೆ ಹೊಸ ತಿರುವು
* ಸರ್ಕಾರಿ ಶಾಲಾ ಶಿಕ್ಷಕನ ಪ್ರಾಣ ತೆಗೆದ ಸಲಿಂಗಕಾಮ ಆ್ಯಪ್
* ಪ್ರಕರಣದಲ್ಲಿ ಮೂವರು ಆರೋಪಿಗಳು ಅಂದರ್
ಚಿಕ್ಕಬಳ್ಳಾಪುರ, (ಜುಲೈ.08): ಇತ್ತೀಚೆಗೆ ಜಿಲ್ಲೆಯ ಗೌರಿಬಿದನೂರು ಪಟ್ಟಣದಲ್ಲಿ ದುಷ್ಕರ್ಮಿಗಳಿಂದ ಕೊಲೆಗೀಡಾದ ಸರ್ಕಾರಿ ಶಾಲಾ ಶಿಕ್ಷಕ ವಿಶ್ವನಾಥ ಕೊಲೆ ಪ್ರಕರಣ ಭೇದಿಸುವಲ್ಲಿ ಸ್ಥಳೀಯ ಪೊಲೀಸರು ಯಶಸ್ವಿಯಾಗಿದ್ದಾರೆ.
ದುರಂತ ಅಂದರೆ ಸರ್ಕಾರಿ ಶಾಲಾ ಶಿಕ್ಷಕ ತಾನೇ ಸೃಷ್ಠಿಸಿಕೊಂಡ ಸಲಿಂಗಕಾಮದ ಜಾಲದಲ್ಲಿ ಸಿಲುಕಿ ಹಂತಕರಿಂದ ಬರ್ಬರವಾಗಿ ಕೊಲೆಗೀಡಿರುವುದು ಪೊಲೀಸರ ತನಿಖೆ ವೇಳೆ ಬಯಲಾಗಿ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ.
ಬೆಚ್ಚಿದ ಯುವಕ, ತನ್ನ ಬಿಟ್ಟು ಹೋದವಳು ಅಪ್ಪನನ್ನೇ ಮದುವೆಯಾದಳು!
ಪ್ರಾಣ ತೆಗೆದ ಸಲಿಂಗಕಾಮ ಆ್ಯಪ್:
ಸರ್ಕಾರಿ ಶಾಲಾ ಶಿಕ್ಷಕರಾಗಿದ್ದ ವಿಶ್ವನಾಥಗೆ ಕೈ ತುಂಬ ಸಂಬಳ ಬರುತ್ತಿದ್ದು ಸಾಲದಿದ್ದಕ್ಕೆ ಹೆಂಡತಿ ಜೊತೆ ಸೇರಿ ನ್ಯೂಟ್ರಿಷನ್ ವಹಿವಾಟು ನಡೆಸುತ್ತಿದ್ದ. ಆದರೆ ಇತ್ತೀಚೆಗೆ ವಿಶ್ವನಾಥ ಮಾನಸಿಕವಾಗಿ ಹೆಣ್ಣಿನ ಭಾವನೆಗೆ ತಿರುಗಿದ್ದು ಸಲಿಂಗಕಾಮದ ಚಟ ಬೆಳೆಸಿಕೊಂಡಿದ್ದ. ಇದಕ್ಕಾಗಿ ಸಲಿಂಗಕಾಮದ ಆ್ಯಪ್‌ವೊಂದರಲ್ಲಿ ಸದಸ್ಯ ಕೂಡ ಆಗಿದ್ದನಂತೆ. ಆದರೆ ಆ್ಯಪ್‌ನಲ್ಲಿ ಪರಿಚಯವಾದ ಅಶೋಕ್ ಎಂಬಾತ ಕರೆ ಮಾಡಿ ಸಲಿಂಗಕಾಮಕ್ಕೆ ಕರೆದಿದ್ದಾನೆ.
ಆಗ ಶಿಕ್ಷಕ ವಿಶ್ವನಾಥ ಬೈಪಾಸ್ ಸಮೀಪ ನಿರ್ಜನ ಪ್ರದೇಶಕ್ಕೆ ಹೋಗಿದ್ದಾರೆ. ದೊಡ್ಡಬಳ್ಳಾಪುರದಿಂದ ಆಗಮಿಸಿದ್ದ ಅಶೋಕ್, ಮಂಜುನಾಥ ಅಲಿಯಾಸ್ ಕಿಚ್ ಬಿನ್ ಲಕ್ಷ್ಮೀಪತಿ (26), ಗೌರಿಬಿದನೂರು ನಿವಾಸಿ ಆರೋಪಿ ಮಧು ಆಲಿಯಾಸ್ ಗಧಮ ಬಿನ್ ರತ್ನಯ್ಯ (24), ಗೌರಿಬಿದನೂರಿನ ನದಿಗಡ್ಡೆಯ ಶ್ರೀಕಾಂತ್ ಅಲಿಯಾಸ್ ಕಾಂತ ಬಿನ್ ವೆಂಕಟೇಶ (21) ಎಂಬುವರು ಕುಡಿದ ಆಮಲಿನಲ್ಲಿ ವಿಶ್ವನಾಥ ಜೊತೆಗೆ ಸಲಿಂಗಕಾಮ ನಡೆಸಿ ಸರ್ಕಾರಿ ಶಿಕ್ಷಕನೆಂದು ತಿಳಿದು ಆತನ ಬಳಿ ಇದ್ದ ಹಣಕ್ಕಾಗಿ ಒತ್ತಾಯಿಸಿದ್ದಾರೆ.
ಬಳಿಕ ಶಿಕ್ಷಕನ ಮೊಬೈಲ್ ಪಡೆದು ಫೋನ್ ಪೇ ಮೂಲಕ 21 ಸಾವಿರ ರು, ನಗದು ವರ್ಗಾಯಿಸಿಕೊಂಡಿರುವ ಆರೋಪಿಗಳು ಶಿಕ್ಷಕ ವಿಶ್ವನಾಥನನ್ನು ಮನಸೋ ಇಚ್ಚೆ ಥಳಿಸಿ ಕೊಲೆ ಮಾಡಿರುವುದು ಪೊಲೀಸರ ತನಿಖೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಪೊಲೀಸರು ಮಂಜುನಾಥ, ಮಧು, ಶ್ರೀಕಾಂತರನ್ನು ಬಂಧಿಸಿದ್ದು ಪ್ರಮುಖ ಆರೋಪಿ ಅಶೋಕ್‌ನ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ.
ಬೆಚ್ಚಿದ ಯುವಕ, ತನ್ನ ಬಿಟ್ಟು ಹೋದವಳು ಅಪ್ಪನನ್ನೇ ಮದುವೆಯಾದಳು!
ಏನಿದು ಕೊಲೆ ಪ್ರಕರಣ:
ಕಳೆದ ಜೂನ್ 4 ರಂದು ಭಾನುವಾರ ರಾತ್ರಿ ಗೌರಿಬಿದನೂರು ಪಟ್ಟಣದ ಸದಾಶಿವ ನಗರದ ನಿವಾಸಿ ಸರ್ಕಾರಿ ಶಾಲಾ ಶಿಕ್ಷಕ ಎನ್.ವಿಶ್ವನಾಥ, ರಸ್ತೆಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನ ತರುವುದಾಗಿ ಮನೆಯಿಂದ ಹೊರಗೆ ಹೋದವರು ಮತ್ತೆ ವಾಪಸ್ಸು ಬಂದಿಲ್ಲ.
ಈ ಬಗ್ಗೆ ಆತಂಕಗೊಂಡ ಅವರ ಪತ್ನಿ ಲಾವಣ್ಯ ಪೊಲೀಸರಿಗೆ ದೂರು ನೀಡಿದ್ದಳು. ನಾಪತ್ತೆಯಾಗಿದ್ದ ವಿಶ್ವನಾಥ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರಿಗೆ ಜೂನ್ 5 ರಂದು ಸೋಮವಾರ ಪಟ್ಟಣ ಬೈಪಾಸ್ ರಸ್ತೆಯಲ್ಲಿನ ನರ್ಸಿಂಗ್ ಕಾಲೇಜು ಮುಂದಿನ ನಿರ್ಜನ ಪ್ರದೇಶದಲ್ಲಿ ವಿಶ್ವನಾಥ ಕೊಲೆಗೀಡಾದ ಮೃತದೇಹ ಪತ್ತೆಯಾಗಿರುತ್ತದೆ.
ಎಸ್ಪಿ ಮಿಥುನ್ ಕುಮಾರ್ ಮಾರ್ಗದರ್ಶನದಲ್ಲಿ ಸಿಪಿಯ ಶಶಿಧರ್, ಪಿಎಸ್‌ಐ ಪ್ರಸನ್ನಕುಮಾರ್ ಹಾಗೂ ಸಿಬ್ಬಂದಿ ಕೊಲೆ ಹಂತಕರನ್ನು ಪತ್ತೆ ಹಚ್ಚಿದಾಗ ವಿಶ್ವನಾಥ ಸ್ವತಃ ಸಲಿಂಕಾಮದ ಆಸೆಗೆ ಬಿದ್ದು ಹಂತಕರಿಂದ ಪ್ರಾಣ ಕಳೆದುಕೊಂಡಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.