
ಬೆಂಗಳೂರು (ನ. 12) ಮನೆಯ ಟೆರೆಸ್ ಮೇಲೆ ನಿಂತು ಯುವತಿ ಕಂಡ ತಕ್ಷಣ ಪ್ಯಾಂಟ್ ಬಿಚ್ಚಿ ತನ್ನ ಜನನಾಂಗ ಪ್ರದರ್ಶನ ಮಾಡಿ ವಿಕೃತಿ ಮೆರೆದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಕೋರಮಂಗಲದಲ್ಲಿಯೇ ಈ ಪ್ರಕರಣ ನಡೆದಿದ್ದು ಆರೋಪಿ ಬಂಧನಕ್ಕೆ ಸೋಶಿಯಮ್ ಮೀಡಿಯಾವೇ ಕಾರಣವಾಗಿದೆ. ಟೆರೇಸ್ ಮೇಲೆ ನಿಂತು ಯುವತಿಯ ಎದುರು ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದ ಯುವಕನ ವಿರುದ್ಧ ಯುವತಿ ಧೈರ್ಯವಾಗಿ ದೂರು ನೀಡಿದ್ದರು. ಇನ್ ಸ್ಟಾಗ್ರ್ಯಾಮ್ ನಲ್ಲಿ ಯುವಕನ ಕೃತ್ಯವನ್ನು ಪೋಟೋ ಸಮೇತ ಹಂಚಿಕೊಂಡಿದ್ದರು.
ಶಿವಮೊಗ್ಗ; ಮಾವನೊಂದಿಗೆ ಮಂಚ ಏರಿದ್ದಳು.. ಕಾಮದಾಟ ಕಣ್ಣಾರೆ ಕಂಡ ಗಂಡ!
ಕೋರಮಂಗಲ ನಿವಾಸಿ ಯುವತಿ ನವೆಂಬರ್ 8 ರಂದು ಸಾಮಾಜಿಕ ಜಾಲತಾಣ ಇನ್‍ಸ್ಟಾದಲ್ಲಿ ತನ್ನೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಯುವಕನ ವಿರುದ್ಧ ಕ್ರಮಕೈಗೊಳ್ಳಲು ಮನವಿ ಮಾಡಿದ್ದರು. ಯುವತಿ ಅಪಾರ್ಟ್‍ಮೆಂಟ್ ಪಕ್ಕದ ಬಿಲ್ಡಿಂಗ್‍ನಲ್ಲಿದ್ದ ಯುವಕ ಟೆರೇಸ್ ಮೇಲೆ ನಿಂತು ಸುಮಾರು 1 ಗಂಟೆಗೂ ಹೆಚ್ಚು ಕಾಲ ಯುವತಿಯ ಮನೆಯನ್ನೇ ದಿಟ್ಟಿಸುತ್ತಿರುವುದು ಕಂಡು ಬಂದಿದೆ.
ಇದನ್ನು ಯುವತಿ ಪ್ರಶ್ನೆ ಮಾಡಿದ್ದರು. ಯಾಕೆ ಪದೆ ಪದೆ ನಮ್ಮ ಮನೆ ಕಡೆ ನೋಡುತ್ತೀಯಾ ಎಂದು ಕೇಳಿದ್ದರು. ಇದರಿಂದ ಕೋಪಗೊಂಡ ಯುವಕ ತನ್ನ ಪ್ಯಾಂಟ್ ಬಿಚ್ಚಿ ಜನನಾಂಗ ಪ್ರದರ್ಶನ ಮಾಡಿದ್ದ. ಯುವತಿ ನಿನ್ನ ಪೋಟೋ ಸೋಶಿಯಲ್ ಮೀಡಿಯಾಕ್ಕೆ ಹಾಕುತ್ತೇನೆ.. ಶಿಕ್ಷೆ ಕೊಡಿಸುತ್ತೇನೆ ಎಂದರೆ ಕೆಟ್ಟ ನಗು ಬೀರುತ್ತ ಅಲ್ಲೇ ನಿಂತಿದ್ದ ಎಂದು ಬರೆದುಕೊಂಡಿದ್ದಾರೆ.
ಮಾಹಿತಿ ಕಲೆ ಹಾಕಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸಿದ್ದಾರೆ. ಮುಂಬೈ ರೈಲ್ವೆ ನಿಲ್ದಾಣದಲ್ಲಿ ಯುವತಿಯರ ಮುಂದೆ ಹಸ್ತಮೈಥುನ ಮಾಡಿಕೊಂಡಿದ್ದು ಹಿಂದೆ ಸುದ್ದಿಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ