ಕೂಲಿ ಕೆಲಸಕ್ಕೆ ಬಂದಿದ್ದ ಪೋಷಕರೊಂದಿಗೆ ಇದ್ದ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ತೋಟದ ಮಾಲೀಕರು. ಗರ್ಭಿಣಿಯಾದ ನಂತರ ಕೃತ್ಯ ಬಯಲು.
ಹಾಸನ (ಡಿ.13): ಹಾಸನ ಜಿಲ್ಲೆಯ ಕಾಫಿ ತೋಟಗಳ ಪ್ರದೇಶವಾದ ಸಕಲೇಶಪುರದಲ್ಲಿ ಪೈಶಾಚಿಕ ಕೃತ್ಯವೊಂದು ನಡೆದಿದೆ. ಕೂಲಿ ಕೆಲಸಕ್ಕೆ ಬಂದಿದ್ದ 14 ವರ್ಷದ ಬಾಲಕಿಯ ಮೇಲೆ ಕೆಲಸ ನೀಡಿದ್ದ ತೋಟದ ಮಾಲೀಕ ಮತ್ತು ಅವರ ಇಬ್ಬರು ಸಂಬಂಧಿಗಳು ಸೇರಿ ಮೂವರು ಸಾಮೂಹಿಕ ಅತ್ಯಾಚಾರವೆಸಗಿದ ಘಟನೆ ನಡೆದಿದೆ.
ಇನ್ನು ಕಾಫಿ ಬೀಜಗಳನ್ನು ಬಿಡಿಸಲು ತೋಟಕ್ಕೆ ಕೂಲಿಗಾಗಿ ಕಾರ್ಮಿಕರು ಬರುವುದು ಸಾಮಾನ್ಯವಾಗಿದೆ. ಹೀಗೆ ಕೂಲಿ ಕೆಲಸಕ್ಕೆ ಪೋಷಕರೊಂದಿಗೆ ಬಂದಿದ್ದ 14 ವರ್ಷದ ಬಾಲಕಿಯ ಮೇಲೆ ತೋಟದ ಮಾಲೀಕರು ಪೈಶಾಚಿಕ ಕೃತ್ಯ ಎಸಗಿದ್ದಾರೆ. ತೋಟದ ಮಾಲೀಕ ಮತ್ತು ಮಾಲೀಕನ ಇಬ್ಬರು ಸಂಬಂಧಿಕರು ಅಪ್ರಾಪ್ತೆ ಬಾಲಕಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ್ದಾರೆ. ಆದರೆ, ಈ ನೀಚ ಕಾರ್ಯವನ್ನು ಎಲ್ಲಿಯೂ ಬಾಯಿಬಿಡದಂತೆ ಜೀವ ಬೆದರಿಕೆ ಹಾಕಲಾಗಿದೆ. ಇನ್ನು ಕೂಲಿಗಾಗಿ ಬಂದ ಬಡತನದ ಕುಟುಂಬಕ್ಕೆ ಜೀವ ಬೆದರಿಕೆ ಇರುವುದರಿಂದ ಪೋಷಕರಿಗೆ ಈ ಹಿಂಸೆಯನ್ನು ಹೇಳದೇ ಸಹಿಸಿಕೊಂಡಿದ್ದಾಳೆ.
Bengaluru Crime: ಅಪ್ರಾಪ್ತೆ ಮೇಲೆ ಅತ್ಯಾಚಾರ: ವೃದ್ಧನ ಹೊಡೆದು ಕೊಂದ ಕುಟುಂಬಸ್ಥರು
ಗರ್ಭಿಣಿಯಾದ ಬಳಿಕ ಕೃತ್ಯ ಬಯಲು: ಇನ್ನು ಅಪ್ರಾಪ್ತ ಬಾಲಕಿ ಕೂಲಿ ಕೆಲಸಕ್ಕೆ ಬಂದಿರುವಾಗ ವಾಂತಿ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಅನಾರೋಗ್ಯದ ಕಾರಣಕ್ಕೆ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಾಗ ಗರ್ಭಿಣಿ ಆಗಿರುವುದು ಪತ್ತೆಯಾಗಿದೆ. ಪೋಷಕರು ಇದಕ್ಕೆ ಕಾರಣ ಯಾರೆಂದು ಬಲವಂತದಿಂದ ಕೇಳಿದಾಗ ತೋಟದ ಮಾಲೀಕ ಸ್ವಾಗತ್ ಮತ್ತವರ ಸಂಬಂಧಿಕರಾದ ಸುದರ್ಶನ್, ಪಾಪಣ್ಣ ಎಂಬುವವರು ಸಾಮೂಹಿಕವಾಗಿ ಅತ್ಯಾಚಾರ ಮಾಡಿದ ವಿಚಾರವನ್ನು ಬಾಯಿ ಬಿಟ್ಟಿದ್ದಾಳೆ. ಈ ಆರೋಪಿಗಳು ಸತ್ಯವನ್ನು ಯಾರ ಮುಂದೆಯೂ ಹೇಳದಂತೆ ಬೆದರಿಕೆ ಹಾಕಿದ್ದ ಬಗ್ಗೆಯೂ ತಿಳಿಸಿದ್ದಾಳೆ.
ಸಂತ್ರಸ್ತ ಬಾಲಕಿಯ ರಕ್ಷಣೆ: ಇನ್ನು ಅತ್ಯಾಚಾರ ಆರೋಪಿಗಳಾದ ಸ್ವಾಗತ್, ಸುದರ್ಶನ್ ಮತ್ತು ಪಾಪಣ್ಣ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಸಕಲೇಶಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನು ಜೀವ ಬೆದರಿಕೆ ಹಿನ್ನೆಲೆಯಲ್ಲಿ ಸಂತ್ರಸ್ಥ ಬಾಲಕಿಯನ್ನು ರಕ್ಷಣೆ ಮಾಡುವ ಉದ್ದೇಶದಿಂದ ಮಕ್ಕಳ ರಕ್ಷಣಾ ಸಮಿತಿಯ ಕೇಂದ್ರದಲ್ಲಿ ಇರಿಸಲಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪೊಲೀಸರು ಆರೋಪಿಗಳಿಂದ ಬಾಯಿ ಬಿಡಿಸುತ್ತಿದ್ದಾರೆ.
ಜ್ಯೂಸ್‌ನಲ್ಲಿ ಆಲ್ಕೋಹಾಲ್ ಸೇರಿಸಿ ಕುಡಿಸಿದ್ದ ವೃದ್ಧ: ಇನ್ನು ಬೆಂಗಳೂರಿನಲ್ಲಿ ಎರಡು ದಿನಗಳ ಹಿಂದೆ ಇಂತಹದ್ದೇ ಒಂದು ಪೈಶಾಚಿಕ ಕೃತ್ಯ ನಡೆದಿತ್ತು. ಕಳೆದ ನಾಲ್ಕು ವರ್ಷಗಳಿಂದ ಬಾಬುಸಾಪಾಳ್ಯದಲ್ಲಿ ವಾಸವಿದ್ದ ಕುಪ್ಪಣ್ಣ (73) ಮೂಲತಃ ತಮಿಳುನಾಡು (Tamilnadu) ಮೂಲದವನು. ಪಕ್ಕದ ಮನೆಯಲ್ಲಿ ವಾಸವಾಗಿದ್ದ ಬಾಲಕಿ ಮನೆಯ ಮೇಲೆ ಒಣಗಿಸಲು ಹಾಕಿದ್ದ ಬಟ್ಟೆ (Cloths) ತರಲು ಮಧ್ಯಾಹ್ನ ಮಹಡಿ ಮೇಲೆ ತೆರಳಿದ್ದಳು. ಈ ವೇಳೆ ಮನೆಯ ಒಳಗೆ ಬಾಲಕಿಯನ್ನು ವೃದ್ಧ ಕರೆದಿದ್ದಾನೆ. ನಂತರ ಬಾಲಕಿಗೆ ಜೂಸ್ ಕೊಟ್ಟು ಕುಡಿಯಲು ಹೇಳಿದ್ದಾನೆ. ಜೂಸ್ ಕುಡಿದಿದ್ದೇ ಅಸ್ವಸ್ಥವಾಗಿದ್ದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಸಂಜೆಯಾದರೂ ಬಾಲಕಿ ಮನೆಗೆ ಬಾರದಿದ್ದಾಗ ಮನೆಯವರು ಬಾಲಕಿಗಾಗಿ ಹುಡುಕಾಡಿದಾಗ ಸ್ವಸ್ಥಗೊಂಡು ಬಿದ್ದಿದ್ದಳು. ನಂತರ ವೃದ್ಧ ಅತ್ಯಾಚಾರ ಎಸಗಿದ್ದನ್ನು ಬಾಲಕಿ ಹೇಳಿದ್ದಳು.