ಹುಮನಾಬಾದ್ ಠಾಣೆಯಲ್ಲಿ ದಾಖಲಾದ ಎರಡು ದರೋಡೆ ಪ್ರಕರಣ, ಔರಾದ್ ಠಾಣೆಯಲ್ಲಿ 2 ಮನೆ ಕಳ್ಳತನ, ಬೀದರ್ ಗಾಂಧಿ ಗಂಜ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಎರಡು ಪ್ರಕರಣ ಭೇದಿಸಿ ಸುಮಾರು 41 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ
ಬೀದರ್(ಅ.08): ಕಳೆದ ಒಂದು ತಿಂಗಳಿನಿಂದ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ 13 ಪ್ರಕರಣಗಳನ್ನು ಭೇದಿಸಿದ ಪೊಲೀಸರು 50 ಬೈಕ್‌ಗಳನ್ನು ವಶಪಡಿಸಿಕೊಂಡು ಒಟ್ಟಾರೆ 51 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ 11 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ತಿಳಿಸಿದರು.
ಶನಿವಾರ ತಮ್ಮ ಕಚೇರಿ ಪ್ರಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹುಮನಾಬಾದ್ ಠಾಣೆಯಲ್ಲಿ ದಾಖಲಾದ ಎರಡು ದರೋಡೆ ಪ್ರಕರಣ, ಔರಾದ್ ಠಾಣೆಯಲ್ಲಿ 2 ಮನೆ ಕಳ್ಳತನ, ಬೀದರ್ ಗಾಂಧಿ ಗಂಜ್ ಠಾಣೆ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಎರಡು ಪ್ರಕರಣ ಭೇದಿಸಿ ಸುಮಾರು 41 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
undefined
ಬೀದರ್: ಖಾಸಗಿ ಫೋಟೋ ಲೀಕ್, ಯುವಕನ ಕಿರುಕುಳ ತಾಳದೆ ಬಾಲಕಿ ಆತ್ಮಹತ್ಯೆ
ಗಾಂಧಿ ಗಂಜ್ ಠಾಣೆ ಸಿಪಿಐ ಹಣಮರೆಡ್ಡಪ್ಪ ಅವರ ನೇತೃತ್ವದ ತಂಡವು ಸುಮಾರು 3 ತಿಂಗಳಿಂದ ಆರೋಪಿಯ ಬೆನ್ನು ಹತ್ತಿ ಬೈಕ್ ಆತನನ್ನು ಹಿಡಿದಿದ್ದು ಆತನಿಂದ 6 ಬುಲೆಟ್, 24 ಪಲ್ಸರ್ ಸೇರಿದಂತೆ ಒಟ್ಟು 41 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ.
ಬೈಕ್ ಕಳ್ಳನನ್ನು ಬಿಜಾಪೂರ್ ಜಿಲ್ಲೆಯ ಇಂಡಿದವನಾಗಿದ್ದು, ಕಳೆದ 5 ರಿಂದ 6 ತಿಂಗಳಿನಲ್ಲಿ ಬೈಕ್ ಕಳವು ಮಾಡಿದ್ದಾನೆ. ಇವನು ಮೊಬೈಲ್‌ನಲ್ಲಿ ಸಿಮ್ ಬದಲಾವಣೆ ಮಾಡುವುದು, ಇಂಟರನೆಟ್ ಮೂಲಕ ಸಂಭಾಷಣೆ ಮಾಡುವ ಮೂಲಕ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತಿದ್ದ, ಮನೆ ಎದುರು ನಿಲ್ಲಿಸುತಿದ್ದ ಬೈಕ್ ಗಳನ್ನು ಕಳವು ಮಾಡಿ ಮಾರಾಟ ಮಾಡುತಿದ್ದ, ಇವನು ಬೀದರ್ ತಾಲೂಕಿನ ಗಾದಗಿಯಲ್ಲಿ ಕಳುವು ಮಾಡಿದ ಬೈಕ್ ಗಳನ್ನು ಇಡುತಿದ್ದ ಎಂದು ಎಸ್ ಪಿ ತಿಳಿಸಿದರು.
ಔರಾದ್: ಬಟ್ಟೆ ವ್ಯಾಪಾರಿಯ ಅನುಮಾನಾಸ್ಪದ ಸಾವು
ಇಂದು ಭೇದಿಸಿದ ಪ್ರಕರಣಗಳಲ್ಲಿ 98 ಗ್ರಾ. ಬಂಗಾರದ ವಡವೆಗಳು, 310 ಗ್ರಾಂ ಬೆಳ್ಳಿಯ, 17 ಮೊಬೈಲ್, 50 ಬೈಕ್, 9 ಮೋಟರ್ ಪಂಪಸೆಟ್‌ಗಳು ಸೇರಿದಂತೆ ಒಟ್ಟು 51 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದರು.
ಎಸ್ಪಿ ಚನ್ನಬಸವಣ್ಣ ಹಾಗೂ ಎಎಸ್ಪಿ ಮಹೇಶ ಮೇಘಣ್ಣನವರ ಮಾರ್ಗದರ್ಶನದಲ್ಲಿ ಹುಮನಾಬಾದ್ ಪೊಲೀಸ್ ಠಾಣೆಯ ಪ್ರಕರಣವು ಡಿಎಸ್ಪಿ ಜಿ.ಎಸ್.ನ್ಯಾಮೇಗೌಡರ್, ಔರಾದ್ ಪ್ರಕರಣದಲ್ಲಿ ಭಾಲ್ಕಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಗಾಂಧಿ ಗಂಜ್ ಬೈಕ್ ಕಳ್ಳತನ ಪ್ರಕರಣದಲ್ಲಿ ಡಿವೈಎಸ್ಪಿ ಶಿವನಗೌಡ ಪಾಟೀಲ್ ಆಯಾ ಪೊಲೀಸ್ ಠಾಣೆಯ ಪಿಎಸ್ಐ ಹಾಗೂ ಸಿಬ್ಬಂದಿ ಸೇರಿ ದಾಳಿ ನಡೆಸಿದ್ದಾರೆ. ಇದರಲ್ಲಿ ಪಾಲ್ಗೊಂಡ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕರ್ತವ್ಯಕ್ಕೆ ಪ್ರಶಂಸಿಸಿ ಬಹುಮಾನ ನೀಡಲಾಯಿತು.