ಇನ್ನೂ 7 ಪಂದ್ಯಗಳು ಉಳಿದಿವೆ, ಭಾರತ WTC ಫೈನಲ್ ಪ್ರವೇಶಕ್ಕೆ ಇನ್ನೂ ಎಷ್ಟು ಗೆಲ್ಲಬೇಕು?

Published : Oct 18, 2026, 01:35 PM IST
team india test

ಸಾರಾಂಶ

ಇನ್ನೂ 7 ಪಂದ್ಯಗಳು ಉಳಿದಿವೆ, ಭಾರತ WTC ಫೈನಲ್ ಪ್ರವೇಶಕ್ಕೆ ಇನ್ನೂ ಎಷ್ಟು ಪಂದ್ಯ ಗೆಲ್ಲಬೇಕು? ಹೇಗಿದೆ ಭಾರತದ ಡಬ್ಲ್ಯೂಟಿಸಿ ಫೈನಲ್ ಸಿನಾರಿಯೋ? ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಮೊದಲ ಎರಡು ಸ್ಥಾನದಲ್ಲಿವೆ.

WTC ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ ಆಗಿದೆ. ಬಲಿಷ್ಠ ಆಸ್ಟ್ರೇಲಿಯಾ ತಂಡವು 214 ರನ್‌ಗಳ ಅಂತರದಿಂದ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಅಗ್ರಸ್ಥಾನಕ್ಕೆ ಏರಿದೆ. ಇದರೊಂದಿಗೆ ಭಾರತ ಫೈನಲ್‌ ಪ್ರವೇಶಕ್ಕಾಗಿ ನಡೆಸುತ್ತಿದ್ದ ಹೋರಾಟ ಮತ್ತಷ್ಟು ಕಠಿಣ ಆಗುತ್ತ ಹೋಗ್ತಿದೆ. ಅಂದ್ಯಾಗೆ ಟೀಂ ಇಂಡಿಯಾ 51.52 ಪಾಯಿಂಟ್ಸ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ.

WTC ಅಂಕಪಟ್ಟಿಯಲ್ಲಿ ಹೋರಾಟ ಹೇಗಿದೆ?

ಅಗ್ರಸ್ಥಾನದಲ್ಲಿರುವ ಆಸ್ಟ್ರೇಲಿಯಾ 11 ಟೆಸ್ಟ್‌ಗಳನ್ನು ಗೆದ್ದು 108 ಅಂಕಗಳೊಂದಿಗೆ 81.82 ಶೇಕಡಾವಾರು ಹೊಂದಿದೆ. ಅದೇ ರೀತಿ ನ್ಯೂಜಿಲೆಂಡ್ 72.22 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ನ್ಯೂಜಿಲೆಂಡ್ ಪ್ರಸ್ತುತ 6 ಪಂದ್ಯಗಳನ್ನ ಆಡಿದ್ದು, ನಾಲ್ಕರಲ್ಲಿ ಗೆಲುವು ಕಂಡಿದೆ. ಒಂದು ಪಂದ್ಯ ಸೋಲು, ಇನ್ನೊಂದು ಡ್ರಾ ಆಗಿದೆ.

ನ್ಯೂಜಿಲೆಂಡ್ ಬಿಟ್ಟರೆ ದಕ್ಷಿಣ ಆಫ್ರಿಕಾ ಮೂರನೇ ಸ್ಥಾನದಲ್ಲಿದೆ. ಐದು ಪಂದ್ಯಗಳಲ್ಲಿ ಮೂರು ಮ್ಯಾಚ್ ಗೆದ್ದು, ಎರಡನ್ನು ಗೆದ್ದುಕೊಂಡಿದೆ. ಸರಾಸರಿ 60 ಅಂಕಗಳನ್ನ ಹೊಂದಿದೆ. ಹಾಗೆಯೇ ಬಾಂಗ್ಲಾದೇಶ ನಾಲ್ಕನೇ ಸ್ಥಾನದಲ್ಲಿ ಇದೆ. ಬಾಂಗ್ಲಾದೇಶ ಆರು ಪಂದ್ಯಗಳನ್ನ ಆಡಿ ಮೂರರಲ್ಲಿ ಗೆದ್ದುಕೊಂಡಿದೆ. ಎರಡರಲ್ಲಿ ಸೋತಿದ್ದು, ಒಂದು ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.

ಐದನೇ ಸ್ಥಾನದಲ್ಲಿರುವ ಟೀಂ ಇಂಡಿಯಾಗೆ ಡಬ್ಲ್ಯೂಟಿಸಿ ಫೈನಲ್ ಹಾದಿ ತುಂಬಾ ಕಠಿಣ ಆಗುತ್ತ ಹೋಗಿದೆ. ಆಡಿರುವ 11 ಪಂದ್ಯಗಳಲ್ಲಿ ಐದು ಪಂದ್ಯಗಳನ್ನ ಗೆದ್ದುಕೊಂಡಿದ್ದು, ನಾಲ್ಕರಲ್ಲಿ ಸೋಲನ್ನು ಅನುಭವಿಸಿ.. ಎರಡು ಪಂದ್ಯ ಡ್ರಾ ಮಾಡಿಕೊಂಡಿರುವ ಭಾರತ ತಂಡ 51.52 ಸರಾಸರಿ ಅಂಕಗಳನ್ನ ಹೊಂದಿದೆ.

WTC ಫೈನಲ್‌ ಆಡಲು ಭಾರತಕ್ಕೆ ಅವಕಾಶ ಇದೆಯಾ?

ಭಾರತ ತನ್ನ ಕೋಟಾದಲ್ಲಿ ಇನ್ನೂ 7 ಪಂದ್ಯಗಳನ್ನ ಉಳಿಸಿಕೊಂಡಿದೆ. ಭಾರತ ಫೈನಲ್‌ಗೆ ಎಂಟ್ರಿಕೊಡಬೇಕು ಅಂದರೆ ಉಳಿದ ಪಂದ್ಯಗಳಲ್ಲಿ ಗೆಲುವು ಹೇಗಿರುತ್ತದೆ ಅನ್ನೋದ್ರ ಮೇಲೆ ಅವಲಂಬಿತವಾಗುತ್ತದೆ. ಆಸ್ಟ್ರೇಲಿಯಾ ವಿರುದ್ಧ ಐದು ಟೆಸ್ಟ್ ಹಾಗೂ ನ್ಯೂಜಿಲೆಂಡ್ ವಿರುದ್ಧ ಎರಡು ಟೆಸ್ಟ್ ಆಡಲಿದೆ. ಈ ಮ್ಯಾಚ್‌ಗಳನ್ನ ಗೆಲ್ಲುವುದರ ಜೊತೆಗೆ ಉಳಿದ ತಂಡಗಳ ಸೋಲು ಗೆಲುವಿನ ಆಧಾರದ ಮೇಲೆ ಭಾರತದ ಫೈನಲ್ ಕನಸು ನಿಂತಿದೆ.

ಇನ್ನೊಂದು ವಿಚಾರ ಏನೆಂದರೆ WTC ಫೈನಲ್ ಅರ್ಹತೆಯನ್ನು ಒಟ್ಟು ಅಂಕಗಳಿಂದ ನಿರ್ಧರಿಸುವುದಿಲ್ಲ. ಅಂಕಗಳ ಬದಲಾಗಿ PCT ಯಿಂದ ನಿರ್ಧರಿಸಲಾಗುತ್ತದೆ. ಒಂದು ಗೆಲುವು 12 ಅಂಕಗಳನ್ನು ನಿರ್ಧರಿಸುತ್ತದೆ. ಒಂದು ಡ್ರಾ 4 ಅಂಕಗಳನ್ನು ನಿರ್ಧರಿಸುತ್ತದೆ. ಒಂದು ಟೈ 6 ಅಂಕಗಳನ್ನ ನಿರ್ಧರಿಸುತ್ತದೆ. ಲೀಗ್ ಹಂತದ ಕೊನೆಯಲ್ಲಿ ಅಗ್ರ ಎರಡು ತಂಡಗಳು ಫೈನಲ್‌ಗೆ ಅರ್ಹತೆ ಪಡೆಯುತ್ತವೆ.

ಟೀಂ ಇಂಡಿಯಾ ಉಳಿದಿರುವ ಎಲ್ಲಾ ಟೆಸ್ಟ್‌ಗಳನ್ನ ಗೆದ್ದರೆ ಅದರ ಸ್ಕೋರ್ 70.37 ರಷ್ಟು ಅಂಕಗಳ PCT ತಲುಪುತ್ತದೆ. ಇದು ಫೈನಲ್‌ಗೆ ಅರ್ಹತೆ ಪಡೆಯಲು ಉತ್ತಮ ಸ್ಕೋರ್ ಆಗಿದೆ.

WTCಯಲ್ಲಿ PCT ಸೂತ್ರ ಏನು?

  • PCT = ತಂಡವು ಗೆದ್ದ ಅಂಕಗಳು / ಒಟ್ಟು ಪಂದ್ಯಗಳಿಂದ ಗಳಿಸಿದ ಅಂಕಗಳು 100
  • ಒಟ್ಟು ಪಂದ್ಯಗಳು: 11 (ಆಡಲಾಗಿದೆ) + 7 (ಉಳಿದ) = 18 ಪಂದ್ಯಗಳು.
  • ಲಭ್ಯವಿರುವ ಗರಿಷ್ಠ ಅಂಕಗಳು: (18*12 = 216 ಅಂಕಗಳು (ಅಂದರೆ ಭಾರತವು 18 ಪಂದ್ಯಗಳಲ್ಲಿ ಗರಿಷ್ಠ 216 ಅಂಕಗಳನ್ನು ಗಳಿಸಬಹುದಿತ್ತು).
  • ಭಾರತದ ಸಂಭಾವ್ಯ ಅಂಕಗಳು: 152 ಅಂಕಗಳು, ಪ್ರಸ್ತುತ ಭಾರತವು 68 ಅಂಕಗಳನ್ನು ಹೊಂದಿದೆ, 7 ಪಂದ್ಯಗಳನ್ನು ಗೆದ್ದರೆ (12*7=84 ಅಂದರೆ 68+84 =152) ಅಂಕಗಳು

WTC ಅಂಕಗಳನ್ನು ಹೇಗೆ ನಿರ್ಧಾರ ಮಾಡ್ತಾರೆ?

  • ಗೆಲುವಿನ ತಂಡಕ್ಕೆ 12 ಅಂಕ ನೀಡುತ್ತಾರೆ
  • ಪಂದ್ಯ ಟೈ ಆದರೆ 6 ಅಂಕ
  • ಪಂದ್ಯ ಡ್ರಾ ಆದರೆ 4 ಅಂಕ
  • ಎರಡ ಅಗ್ರಸ್ಥಾನದಲ್ಲಿರುವ ತಂಡಗಳು ಫೈನಲ್ ಪ್ರವೇಶ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿರಾಟ್ ಕೊಹ್ಲಿ ಓರ್ವ ಅಹಂಕಾರಿ, ಆತನಿಗೆ ಸೊಕ್ಕು ಇತ್ತು, ಆದರೆ....?: ಆಪ್ತ ಗೆಳೆಯನ ಬಗ್ಗೆ ಎಬಿಡಿ ಅಚ್ಚರಿ ಹೇಳಿಕೆ
ಐದೂ ಪಂದ್ಯಗಳಲ್ಲೂ ವೈಭವ್ ಸೂರ್ಯವಂಶಿಯನ್ನು ಹೊರಗಿಟ್ಟಿದ್ದೇಕೆ? ಏನು ಸಮಸ್ಯೆ? ಕೊನೆಗೂ ಮೌನ ಮುರಿದ ನಾಯಕ ಶ್ರೇಯಸ್ ಅಯ್ಯರ್