
ಜಾರ್ಜ್ ಪಾರ್ಕ್(ಫೆ.20): ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಸೆಮಿಫೈನಲ್ ಪ್ರವೇಶಿಸಿದೆ. ಐರ್ಲೆಂಡ್ ವಿರುದ್ಧದ ಗೆಲ್ಲಲೇಬೇಕಾದ ಮಹತ್ವದ ಪಂದ್ಯದಲ್ಲಿ ಭಾರತ 5 ರನ್ ಗೆಲುವು ದಾಖಲಿಸಿದೆ. ಡಕ್‌ವರ್ತ್ ನಿಯಮದ ಪ್ರಕಾರ ಭಾರತ ಗೆಲುವಿನ ನಗೆ ಬೀರಿದೆ. ಭಾರತ ನೀಡಿದ 156 ರನ್ ಟಾರ್ಗೆಟ್ ಬೆನ್ನಟ್ಟಿದ ಐರ್ಲೆಂಡ್ ನಿರೀಕ್ಷಿತ ಹೋರಾಟ ನೀಡಲು ಸಾಧ್ಯವಾಗಲಿಲ್ಲ. ಇದೇ ವೇಳೆ ಸುರಿದ ಮಳೆಯಿಂದ ಪಂದ್ಯ ಸ್ಥಗಿತಗೊಂಡಿತು. ಪಂದ್ಯ ಆರಂಭಕ್ಕೆ ಮಳೆರಾಯ ಅನುವು ಮಾಡಿಕೊಡಲಿಲ್ಲ. ಹೀಗಾಗಿ ಡಕ್‌ವರ್ತ್ ನಿಯಮದ ಪ್ರಕಾರ ಗೆಲುವು ಘೋಷಿಲಾಯಿತು. ಪಂದ್ಯ ಸ್ಥಗಿತಗೊಳ್ಳುತ್ತಿದ್ದ ಸಂದರ್ಭದಲ್ಲಿ ಐರ್ಲೆಂಡ್ ತಂಡ 5 ರನ್ ಹಿನ್ನಡೆಯಲ್ಲಿತ್ತು.
ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ದಿಟ್ಟ ಹೋರಾಟದ ಮೂಲಕ ಹೆಜ್ಜೆ ಇಟ್ಟಿತು. ಆದರೆ ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರು ಮುಗ್ಗರಿಸಿದ್ದರು. ಹೀಗಾಗಿ ಸೆಮಿಫೈನಲ್ ಪ್ರವೇಶ ಕಗ್ಗಾಂಟಾಯಿತು. ಇಷ್ಟೇ ಅಲ್ಲ ಐರ್ಲೆಂಡ್ ವಿರುದ್ಧದ ಪಂದ್ಯ ಗೆಲ್ಲಲೇಬೇಕಾದ ಒತ್ತಡ ಎದುರಾಗಿತ್ತು. ಸ್ಮೃತಿ ಮಂಧಾನಾ ಭರ್ಜರಿ ಬ್ಯಾಟಿಂಗ್ ಮೂಲಕ 155 ರನ್ ಸಿಡಿಸಿತು. 156 ರನ್ ಟಾರ್ಗೆ ಬೆನ್ನಟ್ಟಲು ಕಣಕ್ಕಿಳಿದ ಐರ್ಲೆಂಡ್ ಆರಂಭದಲ್ಲೇ ಆಘಾತ ಎದುರಾಯಿತು. ಆ್ಯಮಿ ಹಂಟರ್ ಕೇವಲ 1 ರನ್ ಸಿಡಿಸಿ ಔಟಾದರು. ಒರ್ಲಾ ಪೆಂಡರ್‌ಗಾಸ್ಟ್ ಡಕೌಟ್ ಆದರು.
ಗೇಬಿ ಲಿವಿಸ್ ಹಾಗೂ ನಾಯಕಿ ಲೌರ ಡೆನೆಲಿ ಜೊತೆಯಾಟ ಐರ್ಲೆಂಡ್ ಕೈಹಿಡಿಯಿತು. ನಿಧಾನವಾಗಿ ಚೇತರಿಸಿಕೊಳ್ಳಲು ಆರಂಭಿಸಿದ ಐರ್ಲೆಂಡ್ ತಂಡಕ್ಕೆ ಮಳೆರಾಯ ಶಾಕ್ ನೀಡಿದ. 8.2 ಓವರ್‌ಗೆ ಐರ್ಲೆಂಡ್ 2 ವಿಕೆಟ್ ಕಳೆದುಕೊಂಡು 52 ರನ್ ಸಿಡಿಸಿತ್ತು. ಡಕ್ ವರ್ತ್ ನಿಯಮದ ಪ್ರಕಾರ ಐರ್ಲೆಂಡ್ ತಂಡ 9ನೇ ಓವರ್‌ನಲ್ಲಿ 59 ರನ್ ಗಳಿಸಬೇಕಿತ್ತು. ಇತ್ತ ಮಳೆಯಿಂದಾಗಿ ಮತ್ತೆ ಪಂದ್ಯ ಆರಂಭಿಸಲು ಸಾಧ್ಯವಾಗಿಲ್ಲ. ಹೀಗಾಗಿ ಡಕ್‌ವರ್ತ್ ನಿಯಮದ ಪ್ರಕಾರ ಭಾರತಕ್ಕೆ ಗೆಲವು ಘೋಷಿಸಲಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.