ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮೊದಲು ಬ್ಯಾಟ್ ಮಾಡಿ 132 ರನ್ ಗಳಿಸಿದೆ. ದೀಪ್ತಿ ಶರ್ಮಾ 49 ರನ್ ಬಾರಿಸಿ ಸರ್ವಾಧಿಕ ಸ್ಕೋರರ್ ಎನಿಸಿದರು. ಈ ಕುರಿತಾದ ವಿವರ ಇಲ್ಲಿದೆ ನೋಡಿ
ಸಿಡ್ನಿ(ಫೆ.21): ಶೆಫಾಲಿ ವರ್ಮಾ(29) ಸ್ಫೋಟಕ ಬ್ಯಾಟಿಂಗ್ ಹಾಗೂ ಜೆಮಿಮಾ ರೋಡ್ರಿಗಜ್(26) ಹಾಗೂ ದೀಪ್ತಿ ಶರ್ಮಾ(49) ಆಕರ್ಷಕ ಅರ್ಧಶತಕದ ಜತೆಯಾಟದ ನೆರವಿನಿಂದ ಭಾರತ ಮಹಿಳಾ ಕ್ರಿಕೆಟ್ ತಂಡವು 4 ವಿಕೆಟ್ ಕಳೆದುಕೊಂಡು 132 ರನ್ ಬಾರಿಸಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಸ್ಫರ್ಧಾತ್ಮಕ ಗುರಿ ನೀಡಿದೆ.
A pulsating start to the
Shafali Verma got India off to a blistering start before Jess Jonassen pulled them back. Jemimah Rodrigues and Deepti Sharma helped India recover, and Australia need 133 to win.
Who's ahead at this stage? pic.twitter.com/6esj9zLiZE
ಟಾಸ್ ಗೆದ್ದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ದುಕೊಂಡಿತು. ಸ್ಮೃತಿ ಮಂಧನಾ ಹಾಗೂ ಶೆಫಾಲಿ ವರ್ಮಾ ಭಾರತಕ್ಕೆ ಸ್ಫೋಟಕ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ 4.1 ಓವರ್‌ನಲ್ಲಿ ಈ ಜೋಡಿ 10ರ ಸರಾಸರಿಯಲ್ಲಿ 41 ರನ್ ಬಾರಿಸಿತು. ಮಂಧನಾ 10 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇನ್ನು 16 ವರ್ಷದ ಶಫಾಲಿ ಕೇವಲ 15 ಎಸೆತಗಳಲ್ಲಿ 5 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 29 ರನ್ ಗಳಿಸಿದರು.
undefined
ನಾಟಕೀಯ ಕುಸಿತ: ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೇ 41 ರನ್‌ಗಳಿಸಿದ್ದ ಭಾರತ ಮಂಧನಾ ವಿಕೆಟ್ ಪತನದ ಬಳಿಕ ದಿಢೀರ್ ಕುಸಿತ ಕಂಡಿತು. ಕೇವಲ 6 ರನ್‌ಗಳ ಅಂತರದಲ್ಲಿ ಪ್ರಮುಖ ಮೂರು ವಿಕೆಟ್ ಕಳೆದುಕೊಂಡಿತು. ನಾಯಕಿ ಹರ್ಮನ್‌ಪ್ರೀತ್ ಕೌರ್ ಕೇವಲ 2 ರನ್ ಗಳಿಸಿ ಸ್ಟಂಪೌಟ್ ಆದರು.
ಆಸರೆಯಾದ ದೀಪ್ತಿ- ರೋಡ್ರಿಗಜ್: ಒಂದು ಹಂತದಲ್ಲಿ 47 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತ ತಂಡಕ್ಕೆ ದೀಪ್ತಿ- ರೋಡ್ರಿಗಜ್ ಜೋಡಿ ಆಸರೆಯಾದರು. 4ನೇ ವಿಕೆಟ್‌ಗೆ ಈ ಜೋಡಿ 53 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ನೂರರ ಗಡಿ ತಲುಪಿಸಿತು. ರೋಡ್ರಿಗಜ್ 26 ರನ್ ಬಾರಿಸಿದರೆ, ದೀಪ್ತಿ 49 ರನ್ ಬಾರಿಸಿ ಅಜೇಯರಾಗುಳಿದರು.
ಇನ್ನು ಆಸ್ಟ್ರೇಲಿಯಾ ಪರ ಜೆಸ್ ಜಾನ್ಸನ್ 2 ವಿಕೆಟ್ ಪಡೆದರೆ, ಕಿಮ್ಮೆನ್ಸ್ ಹಾಗೂ ಪೆರ್ರಿ ತಲಾ ಒಂದೊಂದು ವಿಕೆಟ್ ಪಡೆದರು.